ಪವಿತ್ರ ಆ ಕನ್ನಡ ನೆಲದಲ್ಲಿ ಹುಟ್ಟಿ
ಜೀವನದ ಹುಟ್ಟು ಹಾಕಿದೆ ಇಲ್ಲಿ
ಕಂದಾ! ಕನ್ನಡದ ಕನ್ನಡಿಯಾಗಿ
ನಿಂತೆ ನೀ ಕನ್ನಡದ ಸೇವೆಗಾಗಿ
ಅಲ್ಲಿ ಕನ್ನಡ ಜಲದಲ್ಲೇ ಬೆಳೆದೆ
ಇಲ್ಲಿ ಕನ್ನಡ ಸ್ತುತಿಯಲೇ ಕಳೆದೆ
ಅಲ್ಲಿದ್ದರೂ ಮಾಡುವೆ ಅದುವೇ
ಇಲ್ಲಿದ್ದರೂ, ಎಲ್ಲೆಲ್ಲೂ ಇದ್ದರೂ
ಕನ್ನಡ ಗಾಳಿಯೇ ನಿನ್ನ ಜೀವದುಸಿರು
ಕನ್ನಡ ಸುಗಂಧದಲ್ಲಿ ಸದಾ ವಿಹರಿಸಿ
ಶ್ರೀಗಂಧ ಕನ್ನಡ ಕಸ್ತೂರಿಯ ಪಸರಿಸಿ
ಕನ್ನಡ ಕಂಪಿನಲಿ ಸೊಂಪಾಗಿ ಬೆಳೆವೆ
ಕನ್ನಡ ಕವಿ ಕಾವ್ಯ ಸಿಹಿ ಸಾಹಿತ್ಯವನ್ನುಂಡು
ಕನ್ನಡವೇ ಸತ್ಯವೆಂದು ಮನ ಮನಗಂಡು
ವಿಶ್ವ ಮಾನವನಾಗಿ ನೀ ಸತ್ಪಾತ್ರನಾಗುವೆ
ಕನ್ನಡಾಂಬೆಯ ಶ್ರೀವರಪುತ್ರ ನೀನೆನಿಸುವೆ
(ಕೃಪೆ : ಡಾ. ನಾಗಭೂಷಣ ಮೂಲ್ಕಿ, ಚಿಕಾಗೋ, ಅಮೇರಿಕ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-11-01)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.