ನವ ಮಾಸ
ನೋವ ನುಂಗಿ
ಅನುಭವಿಸಿದ
ಹೆತ್ತೊಡಲು
ಹಸುಗೂಸ
ಮೈದಡವಿ
ಕೆಚ್ಚಲೆದೆಯ
ಹಾಲ ಕುಡಿಸಿ
ಅಪ್ಪುಗೆಯ ಬಿಸಿ
ಎದೆಗವಚಿ
ನನ್ನ ಕಂದಾ ಎಂದು
ಹೆಗಲಿಗೇರಿಸಿ
ಬೆನ್ನ ತಡವಿ
ಅನುಭವಿಸಿದ
ಕ್ಷಣ ಎಂದೂ
ಮರೆಯಲಾಗದ
ಜೀವನದ
ಸುಂದರ ನೆನಪು
ತನು ಪುಳಕಿತಗೊಳಿಸುವ
ಧನ್ಯತಾ ಭಾವ
ಪ್ರತಿ ಹೆಣ್ಣಿನ
ಮನಸು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.