೧) ಹೆಂಗಸರು ಏಕೆ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ?
ಕಾಲುಂಗುರ ಹಾಕಿ ಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ, ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿ ಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದು ಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.