fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಜುಲೈ 02, 2015

ಜುಲೈ ಪ್ರಶ್ನೆ 9

೧.    ’ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು?
೨.    ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು?
೩.    ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು?
೪.    ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು?
೫.    ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು?
೬.    ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ?
೭.    ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು?
೮.    ಭಾರತದಲ್ಲಿ ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾಕಾರ ಯಾರು?
೯.    ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು?
೧೦.    ರಾಮಕೃಷ್ಣ ಮಿಷನ್ ಆರಂಭಿಸಿದವರು ಯಾರು?
೧೧.    ರಾಜಸ್ಥಾನದ ಬೊಂಬೆ ಆಟದ ಹೆಸರೇನು?
೧೨.    ಬೈಬಲ್‌ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು?
೧೩.    ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು?
೧೪.    ಪ್ರಪ್ರಥಮವಾಗಿ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
೧೫.    ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾಣೆಯ ಸಂಸ್ಥೆ ಹೆಸರೇನು?
೧೬.    ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ?
೧೭.    ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ?
೧೮.    ಸಾರೆ ಜಹಾಂಸೇ ಅಚ್ಚಾ ಗೀತೆ ರಚಿಸಿದವರು ಯಾರು?
೧೯.    ಭಾರತದ ರಾಷ್ಟ್ರೀಯ ಪುಷ್ಟ ಯಾವುದು?
೨೦.    ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ?
೨೧.    ಭಾರತದಲ್ಲಿ ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೨.    ಸಿಖ್ಖರ ಪವಿತ್ರ ಕ್ಷೇತ್ರ ಯಾವುದು?
೨೩.    ನಾಟ್ಯಶಾಸ್ತ್ರ ಬರೆದವರು ಯಾರು?
೨೪.    ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು?
೨೫.    ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು?
೨೬.    ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ?
೨೭.    ಶೇ೧೦೦ರಷ್ಟು ಗ್ರಾಮೀಣ ವಿದ್ಯುದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು?
೨೮.    ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಯವರಿಗೆ ಕೊಡಲಾಗಿದೆ.  ಇವರು ಯಾರು?
೨೯.    ಕೊಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು?



ಉತ್ತರಗಳು
ಕೃಪೆ :   ಮಹಾಂತೇಶ್ ಯರಗಟ್ಟಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು