ಭಾನುವಾರ, ಜುಲೈ 24, 2016

ಪ್ರೀತಿ-ಪ್ರೇಮ (Love)

 • ಹೃದಯ ಬೇನೆಯ ಮತ್ತೊಂದು ಹೆಸರು
 • ಪ್ರಣಯಕ್ಕೆ ಮೊದಲ ಹೆಜ್ಜೆ
 • ಚಿಗುರುವ ಮೀಸೆಯ ವಯಸ್ಸಿನಲ್ಲಿ ಚಿಗುರುವ ಭಾವ
 • ಇದು ತುರಿಕೆ ಇದ್ದಂತೆ. ತುರಿಸಿಕೊಳ್ಳುವಾಗ ಸುಖವೋ ಸುಖ, ಆಮೇಲೆ ಉರಿ ಉರಿ
 • ಹೃದಯದಿಂದ ಆರಂಭವಾಗಿ ಮೆದುಳನ್ನೇ ಖಾಲಿ ಮಾಡುವ ಬೇನೆ
 • ಮೊಬೈಲ್ ಕಂಪೆನಿಗಳ ಲಾಭಮೂಲ
 • ಇದು ವೇದಾಂತಿಗಳ ಬ್ರಹ್ಮ ಇದ್ದಂತೆ ಅನಿರ್ವಚನೀಯ ಮತ್ತು ಅನುಭವ ಮಾತ್ರ ವೇದ್ಯ
 • ಪ್ರೇಮಿ ಜಗತ್ತಿಗೆ ಹೆದರಲಾರ, ಅವನ ಗತ್ತು ಮತ್ತು ಜಗತ್ತು ಎರಡೂ ಬೇರೆ
 • ಕಣ್ಣಿಂದ ಆರಂಭವಾಗುವ ಸೋಂಕು, ಅವನ ರೋಗವಿದು. 'ಮದ್ರಾಸ್ ' ಇದ್ದಂತೆ
 • ಪ್ರೇಮಿಗಳನ್ನು ದ್ವೇಷಿಸುವವರೆಲ್ಲ ಆರೇಂಜ್ಡ್ ಮ್ಯಾರೇಜ್ ಆದವರು
 • ಪ್ರೇಮಕ್ಕೆ ಜಿಂದಾಬಾದ್ ಎನ್ನುವವರು ಬದುಕು ಬರ್ಬಾದ್ ಆಗದಂತೆಯೂ ಎಚ್ಚರವಹಿಸಬೇಕಾಗುತ್ತೆ
 • ಪ್ರೀತಿಗೆ ಕಣ್ಣಿಲ್ಲ. ಹಾಗಾಗೇ ಪ್ರೀತಿಸಿದವರಿಗೆ ಬೇರೇನೂ ಕಾಣಿಸುವುದಿಲ್ಲ
 • ಪ್ರೇಮಿಗಳಿಗೆ ಸಮಾಜ ಕೊಡುವ ಶಿಕ್ಷೆಗೆ 'ಗಲ್ಲು ಶಿಕ್ಷೆ' ಎನ್ನುಬಹುದು
 • ಒಬ್ಬರಿಗೊಬ್ಬರು ಪರಸ್ಪರ ಕೋಳ ತೊಡಿಸಿಕೊಳ್ಳುವ ಪ್ರಕ್ರಿಯೆ
 • ನೋಡಿ ತಿಳಿ, ಮಾಡಿ ಕಲಿ ಎಂಬ ನಿಯಮ ಇದಕ್ಕೆ ಅನ್ವಯಿಸದು. ನೋಡಿ ತಿಳಿದವ ಮಾಡಲು ಹೋಗುವುದಿಲ್ಲ
 • ಇದನ್ನು ಗೆಲ್ಲುವುದೆಂದರೆ ಅದಕ್ಕೆ ಸೋಲುವುದೇ
-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: