ಮಂಗಳವಾರ, ಆಗಸ್ಟ್ 22, 2017

ನಮ್ಮಮ್ಮ

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ತುಂಬಿದ ಮನೆಯಲ್ಲಿ ಜನಿಸಿದ್ದು
ಅಪ್ಪಯ್ಯನ ಮುದ್ದಿನ ಮಗಳಾಗಿದ್ದು
ವಯಸಿಗೂ ಮೀರಿ ಭಾರ ಹೊತ್ತಿದ್ದು
ದಿಂಬಿಗೆ ತಲೆಯಾನಿಸಿ ಅತ್ತಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ಗೀತೆ ರಾಮಾಯಣ ಓದಿ ನೀ ಬಿಕ್ಕಿದ್ದು
ಕರ್ಣ ಸೀತೆಗೂ ಮಿಗಿಲಾಗಿ ಬದುಕಿದ್ದು
ಜಾತಿ ಮತ ಮೀರಿ ನೀ ಬೆಳೆದು ನಿಂತಿದ್ದು
ಜ್ಞಾನ ಧರ್ಮದ ಸೌರಭ ಹರಡಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ನವಮಾಸ ನೋವನು ನಗುತಾ ಭರಿಸಿದ್ದು
ಎದೆಯ ಅಮೃತಕೆ ಪ್ರೀತಿ ಬೆರೆಸಿ ಕುಡಿಸಿದ್ದು
ದೇಶ ಭಕ್ತಿ ನ್ಯಾಯ ನೀತಿ ತ್ಯಾಗವ ಕಲಿಸಿದ್ದು
ಸಂಸ್ಕೃತಿ ಸಂಸ್ಕಾರಗಳ ಪಾಠ ನೀ ಹೇಳಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ದಿನವೆಲ್ಲ ದುಡಿದು ಬರಿ ಹೊಟ್ಟೆಯಲಿ ಮಲಗಿದ್ದು
ಸೆಗಣಿ ಬೆರಣಿ ತಟ್ಟಿ ನಮ್ಮ ಹೊಟ್ಟೆ ತುಂಬಿದ್ದು
ಅಳು ನುಂಗಿ ನಕ್ಕು ಛಲದಿಂದ ನಡೆದಿದ್ದು
ನಿನ್ನೆದುರು ಬದುಕೇ ಸೋತು ಶರಣಾಗಿದ್ದು

ನಿನಗೆ ಗೊತ್ತೇನಮ್ಮಾ
ನೀನೇ ಕಲ್ಪವೃಕ್ಷವಾಗಿ ನೆರಳು ನೀಡಿದ್ದು
ನೆರಳಲ್ಲೇ ನಮ್ಮ ಬಾಳು ಬೆಳಗಿದ್ದು
***************************
(“ಅಮ್ಮ ನಿನ್ನ ಒಲುಮೆಗೆ” ಕವನ ಸಂಕಲನದಲ್ಲಿ ಪ್ರಕಟವಾಗಿದೆ.)    – ‘ಶಮ’, ನಂದಿಬೆಟ್ಟ

ಭಾನುವಾರ, ಆಗಸ್ಟ್ 20, 2017

ಗ೦ಟೆಎಳೆಯುತ ಗಾಡೀ ! ಎತ್ತಿನ ಜೋಡಿ

ದಡ ಬಡ ಸದ್ದಿನ ನಮ್ಗಾಡಿ

ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ

ಘಣ ! ಘಣ ! ಗ೦ಟೆ

ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ

ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ

ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು

ಗಾಡಿಯು ಓಡುವ ದಡ ಬಡ ಸದ್ದು

ದಡ ! ಬಡ ! ದಡ ! ಸದ್ದು

ಬುಧವಾರ, ಆಗಸ್ಟ್ 09, 2017

ಸ್ವಾರಸ್ಯದ ಸಂಗತಿಗಳು 1

·        ©¢gÀÄ MAzÀÄ ¢£ÀPÉÌ 24 EAZÀÄ ¨É¼ÉAiÀħ®èzÀÄ.
·        gÁfêïUÁA¢ü SÉïïgÀvÀß ¥Àæ±À¹ÛAiÀÄ£ÀÄß ªÉÆzÀ®Ä ¥ÀqÉzÀªÀgÀÄ «±Àé£ÁxÀ£ï D£ÀAzï
·        ªÁå¯ÉAn£Á mÉgɱÉÆÌêÁ ¨ÁºÁåPÁ±ÀzÀ°è ¥ÀæAiÀiÁt ªÀiÁrzÀ ªÉÆzÀ® ªÀÄ»¼É UÀUÀ£ÀAiÀiÁwæ
·        gÁªÀÄZÀjvÀ ªÀiÁ£À¸À PÀÈwAiÀÄ£ÀÄß gÀa¹zÀªÀgÀÄ vÀļÀ¹zÁ¸ÀgÀÄ
·        MgÉÆîf JAzÀgÉ ¥ÀªÀðvÀ CzsÀåAiÀÄ£À «eÁÕ£À

ಕೃಪೆ : ಕೆ.ಟಿ.ಆರ್

ಬುಧವಾರ, ಆಗಸ್ಟ್ 02, 2017

ಮಂಗಳ ಸೂತ್ರದ ಮೂರು ಗಂಟಿನ ಮಹತ್ವ

       ಮಂಗ ಸೂತ್ರವನ್ನು ಮೂರು ಗಂಟು ಹಾಕಿ ಕಟ್ಟಲಾಗುತ್ತದೆ. ಒಂದೊಂದು ಗಂಟಿಗೆ ಒಂದೊಂದು ಅರ್ಥವಿದೆ.
..
ಮೊದಲನೇಯ ಗಂಟು
ಗಂಡನೊಂದಿಗಿನ ವಿಧೇಯತೆಗಾಗಿ ಹಾಕಿದರೆ,
..
ಎರಡನೇಯ ಗಂಟು
ಕುಟುಂಬದವರೊಂದಿಗೆ ವಿಧೇಯತೆ ಇರಲಿ ಎಂದು ಹಾಕುವುದು,
..
ಮೂರನೇಯ ಗಂಟು
ಪರಮಾತ್ಮನಲ್ಲಿ ಶ್ರದ್ದೆಯಿರಲಿ ಎಂದು ಹಾಕುವುದು.
..
ಇಷ್ಟೆಲ್ಲ ನಿಯಮಗಳ ಅನುಸರಿಸಿ ಪದ್ಧತಿ ಪ್ರಕಾರ ಕಟ್ಟಿದ ತಾಳಿಯನ್ನು ಗೃಹಿಣಿಯರು ಸಹ ಅಷ್ಟೇ ಶ್ರದ್ದೆಯಿಂದ ಧರಿಸುತ್ತಿದ್ದಾರೆ.

ಮಂಗಳವಾರ, ಆಗಸ್ಟ್ 01, 2017

ತುಂಗಾ ನದಿ

ತುಂಗಾ ನದಿ ಭಾರತದ ಕರ್ನಾಟಕ ರಾಜ್ಯದ ಒಂದು ನದಿ.
ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ತುಂಗಾ ನದಿ
ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿಮೀ ದೂರದವರೆದೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.
ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆಯೇ ಇದೆ!
ತುಂಗಾ ನದಿಗೆ ಗಾಜನೂರಿನಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ ಹೊಸಪೇಟೆಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ ಶೃಂಗೇರಿ.ತೀರ್ಥಹಳ್ಳಿ ಮತ್ತು ಶಿವಮೊಗ್ಗ ತುಂಗಾ ನದಿಯ ತೀರದಲ್ಲಿರುವ ಇತರ ಪ್ರಮುಖ ಪಟ್ಟಣಗಳು.
ತು೦ಗಾ ನದಿಗೆ ಗಾಜನೂರಿನಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ.

ಸೋಮವಾರ, ಜುಲೈ 31, 2017

ನಾವ್ಯಾರು-ನೀವ್ಯಾರು

ನಾವ್ಯಾರು ಮಾತನು ಹೇಳೋಕ್ಕೆ....
ನೀವ್ಯಾರು ಮಾತನು ಕೇಳೋಕ್ಕೆ....
ಮನಸ್ಸಿರಬೇಕು ಕನ್ನಡನ ಪ್ರೀತಿಸೋಕ್ಕೆ....
ಧೈರ್ಯ ಮಾಡಬೇಕು ಭಾಷೆ ಬೆಳೆಸೋಕ್ಕೆ....

ಹುಡುಕುತ್ತಾ ಹೋದರೆ ಎಷ್ಟೋ ಪದಗಳು ಹೇಳೋಕ್ಕೆ....
ಪುಸ್ತಕಗಳೇ ಕಳೆದು ಹೋಗಿವೆ ಅದನ್ನೆಲ್ಲಾ ಓದೋಕ್ಕೆ....
ಒಂದೊಳ್ಳೆ ಅಂಗಡಿ ಇಲ್ಲಿಲ್ಲಾ ಅವುಗಳನ್ನ ಕೊಳ್ಳೋಕ್ಕೆ....
ಪುಸ್ತಕದ ಅಂಗಡಿಯವರಿಗೆ ಕಷ್ಟ ಅಂತೆ ಮಾರೋಕ್ಕೆ....

ನವೆಂಬರ್ ಒಂದಕ್ಕೆ ಉತ್ಸವ ನಮ್ಮ ಕನ್ನಡಕ್ಕೆ....
ಕನ್ನಡ ಇಲ್ಲಿ ಉಳಿದಿದೆ ಕೇವಲ ಒಂದೇ ದಿನಕ್ಕೆ....
ಅವಕಾಶ ಕಮ್ಮಿ ಸ್ವಾಮಿ ಕನ್ನಡ ಇಲ್ಲಿ ಬಳಸೋಕ್ಕೆ....
ಕೇವಲ ಅದಿಲ್ಲಿ ಉಳಿದಿದೆ ಆಡೋಕ್ಕೆ ಹಾಡೋಕ್ಕೆ....

ಸಮಯ ಇಲ್ಲ ಅಂತಾರಿಲ್ಲಿ ಜನ ಕನ್ನಡ ಓದೋಕ್ಕೆ....
ಹೊಸ ರೀತಿಗಳು ಬೇಕಿಲ್ಲಿ ಕನ್ನಡವ  ಕಲಿಸೋಕ್ಕೆ....
ಮರೆತು ಹೋಗಿರುವ ಕನ್ನಡತನವ ನೆನಪಿಸೋಕ್ಕೆ....
ಕನ್ನಡ ಬಾವುಟವ ಹಿಡಿದು ಬನ್ನಿ ಜೈ ಎನ್ನೋಣ ಕನ್ನಡಕ್ಕೆ....

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು....

ಕೃಪೆ : ಪ್ರಶಾಂತ್

ಶುಕ್ರವಾರ, ಜುಲೈ 28, 2017

ಪ್ರಾಣಿ ಲೋಕದ ವೈಚಿತ್ರ್ಯಗಳು 2

1.   E°, £ÀPÀëvÀæ «ÄãÀÄUÀ¼ÀÄ ºÁUÀÆ ºÀ°èUÀ¼À ¨Á®UÀ¼ÀÄ vÀÄAqÁzÀgÉ ªÀÄvÉÛ ¨É¼ÉAiÀħ®èªÀÅ.

2.   UÉÆÃ®Ø£ï ¥ÁAiÀÄì£ï qÁmïð ¥sÁæUï JA§ PÀ¥Éà 1500 d£ÀgÀ£ÀÄß vÀ£Àß  «µÀ¢AzÀ PÉƮ觮èzÀÄ.

3.   ¸ÉÖUÉÆøÁgÀ¸ï ¸ÀÄ. 9 «ÄÃlgï GzÀݪÁVgÀĪÀ ¸ÀjøÀÈ¥À

4.   ªÉÆ®UÀ½UÉ ¹» JAzÀgÉ §®Ä¦æÃAiÀÄ.

5.   PÉÆýUÀ¼À JqÀPÁ°£À°è ºÉZÀÄÑ ªÀiÁA¸À«gÀÄvÀÛzÉ.PÁgÀt ¸ÁßAiÀÄÄUÀ¼ÀÄ ºÉZÁÑVgÀÄvÀÛzÉ.

6.   CPÉéÃjAiÀÄAUÀ¼À°è EgÀĪÀ UÉÆïïØ ¦ü±ï M¼ÉîAiÀÄ ¨É¼ÀQ®èzÉà EzÀÝgÉ vÀ£Àß §tÚªÀ£ÀÄß PÀ¼ÉzÀÄPÉƼÀÄîvÀÛzÉ.


7.   E°AiÀÄ «ÃAiÀiÁðtÄUÀ¼ÀÄ D£ÉAiÀÄ «ÃAiÀiÁðtÄ«VAvÀ ºÉZÀÄÑ.