ಭಾರತೀಯ
ರಿರ್ಸವ್ ಬ್ಯಾಂಕ್ (ಆರ್ಬಿಐ) ಗಾಂಧಿ
ಸರಣಿಯ ಹೊಸ ರೂ 20 ಮುಖಬೆಲೆ ನೋಟುಗಳನ್ನು ಹೊರತರುವುದಾಗಿ ಹೇಳಿದೆ. ಈ ನೋಟುಗಳು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿಯನ್ನು
ಒಳಗೊಂಡಿರಲಿದೆ.
ಹಸಿರು
ಮಿಶ್ರಿತ ಹಳದಿ ಬಣ್ಣದ ರೂ
20 ಮುಖಬೆಲೆಯ ಹೊಸ ನೋಟಿನ ಹಿಂಬದಿಯಲ್ಲಿ
ಎಲ್ಲೋರಾ ಗುಹೆಯ ಚಿತ್ರವಿದ್ದು, ಇದು
ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು
ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಚಾಲ್ತಿಯಲ್ಲಿರುವ ಹಿಂದಿನ ಎಲ್ಲಾ ಸರಣಿಯ ರೂ 20 ನೋಟುಗಳು ಬಳಕೆಯಲ್ಲಿರಲಿವೆ ಎಂದು
ಆರ್ಬಿಐ ಸ್ಪಷ್ಟಪಡಿಸಿದೆ.
·
ಈ
ಹೊಸ ನೋಟುಗಳು ಭಿನ್ನ ವಿನ್ಯಾಸ
ಹಾಗೂ ಗೆರೆಗಳನ್ನು ಒಳಗೊಂಡಿದೆ. · ನೋಟು 63ಮಿ.ಮೀ x 129ಮಿ.ಮೀ ಅಳತೆಯಲ್ಲಿರಲಿದೆ ಎಂದು ವಿವರಿಸಿದೆ.
· ಬಲ ಭಾಗದಲ್ಲಿ ಅಶೋಕ ಕಂಭದ ಲಾಂಛನ ಬಳಸಲಾಗಿದ್ದು ರೂ 20 ಎಂದು ಕಾಣುವಂತೆ ವಾಟರ್ಮಾರ್ಕ್ ಹೊಂದಿರಲಿದೆ.
· ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿ ಚಿತ್ರ, ಸಣ್ಣ ಅಕ್ಷರಗಳಲ್ಲಿ ಆರ್ಬಿಐ, ಭಾರತ್, ಇಂಡಿಯಾ, 20, ಆರ್ಬಿಐ ಗವರ್ನರ್ ಸಹಿ,..
· ಹಲವು ಗುರುತುಗಳನ್ನು ಒಳಗೊಂಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.