ಸಂಪ್ರದಾಯದ ಮದುವೆಯ ಸಂದರ್ಭದಲ್ಲಿ ತಾಳಿ ಕಟ್ಟುವ ಸಂಪ್ರದಾಯ ಬಹಳ ವಿಶೇಷ. ಮದುವೆ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಶಾಸ್ತ್ರವಿರುತ್ತದೆ. ತಾಳಿಯನ್ನು ಮದು ಮಗಳಿಗೆ ಕಟ್ಟುವ ಮುನ್ನ, ಅದನ್ನು 3 (ಮೂರು) ಅಥವಾ 5(ಐದು) ಮುತ್ತೈದೆಯರು ಮುಟ್ಟಿ ಹರಸುತ್ತಾರೆ. 'ಮದುಮಗಳು ಈ ತಾಳಿಯನ್ನು ಕಟ್ಟಿಸಿಕೊಂಡು, ನೂರ್ಕಾಲ ಸುಖವಾಗಿ ಬಾಳಲಿ, ನೆಮ್ಮದಿಯಿಂದ ಸಂಸಾರ ನಡೆಸಲಿ, ಹಲವು ಮಕ್ಕಳ ತಾಯಾಗಿ, ಯಶಸ್ವಿ ಗೃಹಿಣಿಯಾಗಿ ಜೀವನ ನಡೆಸಲಿ' ಎಂಬ ಆ ಮುತ್ತೈದೆಯರ ಹರಕೆಯಾಗಿರುತ್ತದೆ.
ವರ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೋ ಆವಾಗ ಅವರಿಬ್ಬರು ಗಂಡ ಹೆಂಡತಿಯಾಗುತ್ತಾರೆ. ವರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಅವರನ್ನು ಆಶೀರ್ವದಿಸುತ್ತಾರೆ. ಹಾಗಾದರೆ ವರನು 1) ಧರ್ಮೇಚ, 2) ಅರ್ಥೇಚ, 3) ಕಾಮೇಚ ಎಂದು ಹೇಳಿ ವಧುವಿನ ಕೊರಳಿಗೆ ಕಟ್ಟುವ ತಾಳಿಗೆ ಮೂರು ಗಂಟು ಹಾಕುತ್ತಾನೆ. ಆ ಮೂರು ಗಂಟಿನ ಅರ್ಥವನ್ನು ತಿಳಿಯೋಣ ಬನ್ನಿ.
ಧರ್ಮೇಚ: ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ . ಯಾವತ್ತೂ ನಾನು ಧರ್ಮಬದ್ಧವಾಗಿ, ನನ್ನ ಮಡದಿಯನ್ನು ನೋಡಿಕೊಳ್ಳುತ್ತೇನೆ. ಅವಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.
ಅರ್ಥೇಚ: ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ. ನನ್ನ ಮಡದಿಗೆ ಯಾವುದರಲ್ಲೂ ಕೊರತೆ ಬರದಂತೆ, ಪ್ರತಿಯೊಂದು ಧನಕನಕದ ಸವಿಯನ್ನು ಆಕೆಯೊಂದಿಗೆ ಜೊತೆಯಾಗಿ ಸವಿಯುತ್ತೇನೆ. ಅವಳನ್ನು ಖುಷಿಯಾಗಿಟ್ಟುಕೊಳ್ಳುತ್ತೇನೆ.
ಕಾಮೇಚ: ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ. ಈ ಮೂರನೇ ಗಂಟಿನ ಅರ್ಥವನ್ನು ಪ್ರತಿಯೊಬ್ಬರು ಸರಿಯಾಗಿ ಅರ್ಥೈಸಿಕೊಳ್ಳಲೇಬೇಕು. ಗಂಡು ಹೆಣ್ಣು ಎಂದ ಮೇಲೆ ಬಯಕೆಗಳು ಸಹಳ ಅಲ್ಲವೇ? ಆ ಬಯಕೆಗಳ ಈಡೇರುವಿಕೆ ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಸಂತೋಷದಿಂದ, ಪ್ರೀತಿ ಪ್ರೇಮದಿಂದ ಒಟ್ಟಿಗೆ ಈಡೇರಿಸಿಕೊಂಡು ಕಾಮೇಚ ಎನ್ನುವ ಮೂರನೇ ಗಂಟಿನ ಮಹತ್ವವನ್ನು ಕಾಪಾಡಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.