ಒಂದೂರಿನ ಚುನಾವಣೆಯಲ್ಲಿ ಸ್ಪರ್ಧಿಗಳು
1) ನೀರಿನ ಲೋಟ
2) ವಜ್ರ ಖಚಿತ ಉಂಗುರ
ನೀರಿನ ಲೋಟ :
ದಿನ ಬಳಸುವ ವಸ್ತುವೆಂದು ಎಲ್ಲರಿಗೂ ಒಲವಿತ್ತು....
ವಜ್ರ ಖಚಿತ ಉಂಗುರ :
ಆಗ ಬಂದ ವಜ್ರ ಖಚಿತ ಉಂಗುರ ತಾನೂ ಸ್ಪರ್ಧೆಗೆ ನಿಂತಿತು..
ಚಿನ್ನದ ವ್ಯಾಪಾರಿಗಳು ಚಿನ್ನವನ್ನು ನೋಡಿದರು..
ವಜ್ರದ ಗಣಿಯ ಕಾರ್ಮಿಕರು ತಾವೇ ನಿಂತಂತೆ ಸಂಭ್ರಮಿಸಿದರು...
ನಾರಿಯರು ಅದನ್ನು ಧರಿಸಿದಷ್ಟೇ ಆನಂದಿಸಿದರು..
ಫಲಿತಾಂಶ @spn3187
ವಜ್ರ ಖಚಿತ ಉಂಗುರ ಗೆದ್ದಿತ್ತು,
ಲೋಟ ಠೇವಣಿ ಕಳೆದುಕೊಂಡಿತ್ತು.
ವಾರ ಕಳೆಯಿತು.......
ಉಂಗುರ ಬ್ಯಾಂಕಿನ ತಿಜೋರಿ ಸೇರಿತು. ಜನರು ಹುಡುಕಾಡಿದರೂ ಯಾರ ಕೈಗೆ ಸಿಗಲಿಲ್ಲ... ಬಾಯಾರಿತೆಂದು ಜನರಿಗೆ ನೀರು ಕುಡಿಯುವುದಕ್ಕಾಗಿ ಲೋಟ ಮುಟ್ಟಲು ಮನಸ್ಸಿಲ್ಲ...
( ವ್ಯಕ್ತಿ ಯಾರೇ ಇರಲಿ, ನಿಸ್ವಾರ್ಥದಿಂದ ಜನರಿಗೆ ಸೇವೆ ಮಾಡುವವರನ್ನು ಆಯ್ಕೆ ಮಾಡಿ.... )
ನಮಸ್ಕಾರ ಮತದಾರರೆ...
ಪ್ರತ್ಯುತ್ತರಅಳಿಸಿ