fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಮಾರ್ಚ್ 09, 2021

ನಮ್ಮ ನಂಬಿಕೆಗಳು 3


) ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ:
ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿ ಕೊಂಡು ಬಂದಿರುತ್ತದೆ (ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ) ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ) ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಒಂದು ಪ್ರಕ್ರಿಯೆಯು ಸ್ಥಳದಲ್ಲಿ ಶಕ್ತಿ ಸಂಚಯವನ್ನು, ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸು, ಹೃದಯಗಳೆರಡುನ್ನೂ ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗೂ ಅಪ್ಪಿ ಕೊಳ್ಳುವ ಮೂಲಕ ಸಹ ಮಾಡ ಬಹುದು. ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿ ಕೊಂಡಿರುತ್ತವೆ. ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ. ಯಾವಾಗ ನೀವು ನಿಮ್ಮ ಕೈ ಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ವಿದ್ಯುತ್ ಶಕ್ತಿಯ "ಧಾರಕಗಳಾಗಿ" ಕಾರ್ಯ ನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು ನೀಡುವ ಅಂಶವಾಗಿ ಗುರುತಿಸಲ್ಪಡುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು