ಶ್ರೇಷ್ಠಳಲ್ಲವೆ ತಾಯಿ ಭೂ ತಾಯಿ..?
ಇವಳೊಡಲ ಅಗೆದು ಬಗೆದರೂ..
ನರನಾಡಿ ಹೀರಿದರೂ..
ನಾನು ಇದ್ದರುˌ ಸತ್ತರು ಭಾರವಲ್ಲ
ಇವಳಿಗೆ.! ಹೌದು ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ...!
ಶ್ರೇಷ್ಠಳಲ್ಲವೆ ತಾಯಿ ಗೋತಾಯಿ..?
ಮುಕ್ಕೋಟಿ ದೇವರಿಗೂ ಹಂಚಿಕೊಂಡ
ಮಹಾ ತಾಯಿ..!
ಕಡಿವ ಕಟುಕನಿಗೂ ಕರುಳ ಕರುವಿನಂತೆ
ಕಂಡ ಕರುಣಾಮಯಿ..!
ಹೌದುˌ ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ
ಕೃಪೆ: ಅni
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.