ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಡಿಸೆಂಬರ್ 22, 2020

ಅಮ್ಮಾ ನೀನಿಲ್ಲದ ಊರು...

ಅಮ್ಮಾ ನೀನಿಲ್ಲದ ಊರಲ್ಲಿ
ನನಗೇನು ಕೆಲಸ
ಅಲ್ಲಿ ತೊನೆದಾಡುವ ನೆನಪುಗಳಷ್ಟೇ
ಜೋತಾಡುತ್ತಿವೆ ನೀ ಹೆಜ್ಜೆಯಿಟ್ಟಲ್ಲೆಲ್ಲ
ಕೂತಲ್ಲಿ ಕೂರಲಾಗದೇ ಬಳಲುತ್ತೇನೆ
ಕಿವಿಯಲ್ಲಿ ನಿನ್ನ ಮಾತು ತರಂಗಗಳಂತೆ ಅಪ್ಪಳಿಸಿ
ಇನ್ನಷ್ಟು ಮತ್ತಷ್ಟು ಕೇಳಬೇಕೆನಿಸುತ್ತದೆ
ಹಾಗೆ ಹಾಗೆ ನಿನ್ನ ಮಡಿಲ ತುಂಬೆಲ್ಲ
ನನ್ನನ್ನೇ ನಾ ಹರಡಿಕೊಂಡು
ಕಿತ್ತೊಗೆಯಬೇಕು “ಇಲ್ಲಾ ” ಎನ್ನುವ ಈ ಶಬ್ದವನ್ನೇ.
ಆದರೆ ಸಾಧ್ಯವಾಗದ ಮಾತು
ನೀನು ಇಲ್ಲಾ ಎನ್ನುವ ಸತ್ಯದಷ್ಟೆ.
ನೀನೂ ಮಹಿಳೆ
ನಿನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ
ನಾನೂ ಮಹಿಳೆ
ಆದರೂ ನಿನ್ನೆತ್ತರಕ್ಕೆ ನಾ ಏರಲಾರೆ
ಮಗಳು ನನ್ನ ಮಡಿಲ ತುಂಬಿದ್ದರೂ
ಗೊತ್ತು ನನಗೆ ಏಕೆಂದು!
ಆ ನಿನ್ನ ಮುಗ್ಧ ನಗು
ಎಲ್ಲರೂ ನನ್ನ ಮಕ್ಕಳೆಂದು ಕಾಣುವ ಬಗೆ
ನಿಸ್ವಾರ್ಥ ನಿನ್ನ ಬದುಕು
ಬೇಕು ಎನ್ನುವುದ ಬಿಟ್ಟು
ಸಾಕು ಸಿಕ್ಕಷ್ಟೇ
ಎಂದಂದುಕೊಂಡೇ ಬದುಕಿದವಳು
ಕೊನೆಗೊಂದು ದಿನ
ನಿರಾಳವಾಗಿ ಅಂಗಾತ ಮಲಗಿದವಳು
ಈ ಶುಭದಿನಕೆ
ನನ್ನ ಬದುಕಲ್ಲಿ ಸಾಕ್ಷಿಯಾದವಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು