fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಆಗಸ್ಟ್ 22, 2020

ಅಮ್ಮನಾಗುವ ಪರಿ..

ಕನಸುಗಳು ಸುರುಳಿಯಂತೆ ಸುತ್ತಿಕೊಳ್ಳಲು ನಾಂದಿ
ತಿಂಗಳ ಹೊರಗು ಆಗದಿರೆ ಅವಳಿಗೆಲ್ಲಿಲ್ಲದ ನಲಿವು
ಬರುವ ಕಂದನ ಇನ್ನಿಲ್ಲದ ಕಲ್ಪನೆಯಲ್ಲೆ ನೆನೆನೆನೆದು.

ಒಳಗೊಳಗೆ ಹರ್ಷ ಮುಸಿ ಮುಸಿ ನಗು
ಕಣ್ಣಲ್ಲಿ ಮಿಂಚು ಕೊಂಚ ನಾಚಿಕೆ ಬಿನ್ನಾಣದ ಬೆಡಗು
ಮೊಳಕೆಯೊಡೆಯುತ್ತಿರುವ ಸಂಗತಿ ಗಂಡನಿಗೆ ಹೇಳಲು.

ಮೌನ ಗೌರಿಯ ಬಂಡವಾಳ ಅದಾಗೆ ತಿಳಿಯಲು
ಕೋಣೆಯಿಂದೀಚೆ ಬರದಷ್ಟು ಕ್ಲಿಷ್ಟ ಗಳಿಗೆ
ಅನುಭವದ ಸುಃಖ ಅನುಭವಿಸಿದವರಿಗಷ್ಟೇ ಗೊತ್ತು

ಒಂದೊಂದು ಕ್ಷಣ,ದಿನ,ತಿಂಗಳು ದೊಡ್ಡ ಪ್ರಾಜೆಕ್ಟು
ಸುಸ್ತು ಸಂಕಟ ಕಿರಿ ಕಿರಿ ದೇಹ ಸಖತ್ ಹೈರಾಣ
ಎಲ್ಲವನ್ನೂ ಸಹಿಸುವಳು ಬರುವ ಕಂದಮ್ಮನಿಗಾಗಿ.

ನವ ಮಾಸ ನವ ಯುಗದಂತೆ ನಗು ನಗುತ ಕಳೆದು
ಎಲ್ಲೆ ಮೀರಿದ ಅಸಾಧ್ಯ ನೋವಿನೊಡೆತವ ಮುಕ್ಕಿ ಮುಕ್ಕಿ
ಭುವಿಗೆ ತನ್ನುಧರದ ಛಾಯೆ ನೀಡುವಳು ತಾಯಿಯ ಪಟ್ಟ ಧರಿಸಿ.

ಕಂದನ ಆಕ್ರಂದನ ತನುಮನದಲ್ಲಿ ಖುಷಿಯ ರಿಂಗಣ
ತೆಕ್ಕೆಯಲಿರಿಸಿ ಲೊಚಗುಟ್ಟುವ ಬಾಯಿಗೆ ತನ್ನೆದೆಯನೊತ್ತಿ ಹರಿಸುವಳು ಅಮೃತ
ಮಾತೃತ್ವದ ಅಮಲಿನ ಸುಃಖ ನಖಶಿಕಾಂತ ಬೆರಗಲಿ.

ಕನಸು ಮನಸಿನಲ್ಲೂ ಕಂದನದೆ ಯೋಚನೆ ಕಣಕಣದಲೆಲ್ಲ
ಒಂದರೆಗಳಿಗೆ ಬಿಟ್ಟಿರಲಾಗದಷ್ಟು ಕಕ್ಕುಲತೆ ತನು ಮನದ ತುಂಬ
ಜೀವ ತೇದು ಬೆಳೆಸುವಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಯಾರಿಹರು ಸರಿಸಾಟಿ!

ತನ್ನೆತ್ತರಕೆ ಕಂದ ಬೆಳೆದು ನಿಂತರೂ ಇನ್ನೂ ಹಸು ಗೂಸು
ಕಂಡವರು ದೊಡ್ಡವರಾದರೆಂದರೆ ಹುಸಿ ಮುನಿಸು ತೋರುವಳು
ತನಗೆ ಮಾತ್ರ ವಯಸ್ಸಾಯಿತೆಂದು ಚಿಕ್ಕ ಮುಖ ಮಾಡಿ ಹಲುಭುವಳು ಕಾಲನ ಕರೆಗೆ.

ಮೊಳಕೆಯೊಡೆಯುವ ಮೊದಲೆ ಕನಸ ಕಟ್ಟುವ ಅಮ್ಮ
ನನಸಾದ ಕನಸ ಸೌದದಲಿ ಕಂದನ ಕೂಡಿಸಿ ಬೀಗುವ ಪರಿ
ನಿಸ್ವಾರ್ಥ ತೇಜೋಮಯಿಗೊಂದೇ ಸಾಧ್ಯ ಅವಳೆ ಅಮ್ಮನೆಂಬ ಅಣಿ ಮುತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು