ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಆಗಸ್ಟ್ 22, 2020

ಗಣೇಶನಿಗಿರುವ ವಿವಿಧ ಹೆಸರುಗಳು

         ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಗಣೇಶನಿಗಿರುವ ಇತರ ಹೆಸರುಗಳಲ್ಲಿ ಕೆಲವು ಈ ಕೆಳಗಿನಂತಿವೆ..
  1. ಅಮೇಯ (अमेय) - ಅಂತ್ಯವಿಲ್ಲದವನು.
  2. ಅನಂಗಪೂಜಿತ (आनंगपूजीता) - ಆಕಾರವಿಲ್ಲದವನು.
  3. ಓಂಕಾರ (ॐ कार) - ಓಂ ಆಕಾರದಲ್ಲಿರುವ ಶರೀರವುಳ್ಳವನು.
  4. ಬಾಲಚಂದ್ರ (बालचंदृ) - ಚಂದ್ರನನ್ನು ತಲೆಯಲ್ಲಿ ಧರಿಸಿದವನು.
  5. ಚಿಂತಾಮಣಿ (चिंतामणि) - ಚಿಂತೆಗಳನ್ನು ನಾಶಮಾಡುವವನು.
  6. ಗಜಕರ್ಣ (गजकर्ण) - ಆನೆಯ ಕಿವಿಯಂತೆ ಕಿವಿಯನ್ನು ಹೊಂದಿದವನು.
  7. ಗಜಾನನ (गजानन्) - ಆನೆಯ ತಲೆಹೊಂದಿದವನು.
  8. ಗಜವದನ (गजवदन्) - ಆನೆಯಂತೆ ಮುಖವುಳ್ಳವನು.
  9. ಗಜಾಧ್ಯಕ್ಷ (गणध्यक्शमा) - ಗಣಗಳ ಗುಂಪಿಗೆ ನಾಯಕನಾದವನು.
  10. ಗಣಪತಿ (गणपती) - ಗಣಗಳ ಒಡೆಯನಾದವನು.
  11. ಗಣನಾಯಕ ( गणनायक्) - ಗಣಗಳ ನಾಯಕ.
  12. ಏಕದಂತ (एकदंत) - ಒಂದೇ ದಂತವನ್ನು ಹೊಂದಿದವನು.
  13. ಲಂಬೋದರ (लंबोदर) - ದೊಡ್ಡ ಹೊಟ್ಟೆಯನ್ನು ಹೊಂದಿದವನು.
  14. ಮೂಷಿಕ ವಾಹನ (मूषिक वाहन) - ಇಲಿಯನ್ನು ವಾಹನವಾಗಿಸಿಕೊಂಡವನು.
  15. ಶೂರ್ಪಕರ್ಣ (शूर्पकर्ण) - ಅಗಲವಾದ ಕಿವಿಯುಳ್ಳವನು.
  16. ಸುಮುಖ (सुमुख) - ಸುಂದರವಾದ ಮುಖವುಳ್ಳವನು.
  17. ವಕ್ರತುಂಡ (वक्रतुंड) - ಮುರಿದ ದಂತವುಳ್ಳವನು (ಡೊಂಕಾದ ಸೊಂಡಿಲು ಉಳ್ಳವನು).
  18. ವಿಘ್ನಹರ್ತ (विघ्नहर्त) - ತೊಂದರೆಗಳನ್ನು ನಿವಾರಿಸುವವನು.
  19. ವಿಘ್ನ ವಿನಾಶಕ (विघ्न विनाशक) - ವಿಘ್ನಗಳನ್ನು ನಾಶಮಾಡುವವನು.
  20. ವಿಘ್ನೇಶ ಅಥವಾ ವಿಘ್ನೇಶ್ವರ ( विग्णेशवर) - ವಿಘ್ನಗಳನ್ನು ನಿವಾರಿಸುವವನು.
  21. ವಿಕಟ ( विकट) - ವಿಲಕ್ಷಣ ರೂಪವನ್ನು ಹೊಂದಿದವನು.
  22. ವಿನಾಯಕ (विनायक) - ವಿಘ್ನಗಳನ್ನು ನಿವಾರಿಸುವವನು.
  23. ವಿಶ್ವಧರ ( विश्वधर)     ಅಥವಾ ಜಗದೋದ್ಧಾರ ( जगदॊद्धार) - ಜಗತ್ತನ್ನು ಪಾಲಿಸುವವನು.
  24. ವಿಶ್ವವಂತ ( विश्ववंत)   ಅಥವಾ ಜಗನ್ನಾಥ ( जगन्नाथ) - ಜಗತ್ತಿಗೆ ಒಡೆಯ ಬೆನಕ.
  25. ಶ್ರೀ ಸಿದ್ಧಿ ವಿನಾಯಕ - ಅಪೇಕ್ಷೆಗಳನ್ನು ಈಡೇರಿಸುವವನು.

           ಆಕೃತಿಯಲ್ಲಿ ಚಿಕ್ಕದಾಗಿರುವ ಗಣಪತಿಯ ವಿಗ್ರಹವನ್ನು ಬಾಲ ಗಣಪತಿ, ಬಾಲ ಗಣೇಶ ಎಂದೂ ಕರೆಯಲಾಗುತ್ತದೆ.

                                             2/2

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು