ಅಮ್ಮ ಎನ್ನಲು ಬರುವಳು ತಾಯಿ,
ಕಂದಾ ಎನ್ನುತ ನನಗಾಗಿ..
ಅಮ್ಮ ಎನ್ನಲು ಕರುಣೆಯ ಕಡಲಿವಳು,
ಮುಕ್ಕೋಟಿ ದೇವರ ಪ್ರೀತಿಯ ಮಗಳಿವಳು,
ನನ್ನ ಮುದ್ದಿಸೋ ತಾಯಿ ಇವಳು..
ಅಮ್ಮ ಎನ್ನಲು ತ್ಯಾಗದ ಬಾನಿವಳು,
ಎಲ್ಲಾ ಕಷ್ಟವ ಸ್ವೀಕರಿಸಿ ಬರಿ
ಪ್ರೀತಿಯ ಹಂಚುವುದರಲ್ಲಿ ನಿಪುಣೆ ಇವಳು,
ನನ್ನ ಕ್ಷೇಮವ ಬಯಸುತ
ಅಮ್ಮ ಎನ್ನಲು ದುಃಖವ ಮರೆಮಾಚಿ,
ಕೇವಲ ಖುಷಿಯ ಧಾರೆ ಎರೆದು
ಅಮ್ಮ ಎಂದರೆ ಚೆಲವು,
ಬಲವು ಉಕ್ಕಿ ಹರಿಯುತಿಹುದು.
ನನ್ನನ್ನು ಹೆತ್ತು ಹೊತ್ತು ಸಾಕಿದವಳು,
ನನ್ನ ಜನ್ಮದಾತೆ ಇವಳು,
ನನಗೆ ಪ್ರಾಣ ಭಿಕ್ಷೆ ಕೊಟ್ಟು ಭೂಮಿಗೆ ತಂದವಳು,
ನನ್ನ ಪಾಲಿನ ದೇವರಿವಳು… ನನ್ನ ಪಾಲಿನ ದೇವರಿವಳು…
ಕಂದಾ ಎನ್ನುತ ನನಗಾಗಿ..
ಅಮ್ಮ ಎನ್ನಲು ಕರುಣೆಯ ಕಡಲಿವಳು,
ಮುಕ್ಕೋಟಿ ದೇವರ ಪ್ರೀತಿಯ ಮಗಳಿವಳು,
ನನ್ನ ಮುದ್ದಿಸೋ ತಾಯಿ ಇವಳು..
ಅಮ್ಮ ಎನ್ನಲು ತ್ಯಾಗದ ಬಾನಿವಳು,
ಎಲ್ಲಾ ಕಷ್ಟವ ಸ್ವೀಕರಿಸಿ ಬರಿ
ಪ್ರೀತಿಯ ಹರಿಸುವ ಸುಧೆ ಇವಳು..
ಪ್ರೀತಿಯ ಹಂಚುವುದರಲ್ಲಿ ನಿಪುಣೆ ಇವಳು,
ನನ್ನ ಕ್ಷೇಮವ ಬಯಸುತ
ತನ್ನ ಜೀವನ ತ್ಯಾಗವ ಮಾಡುವವಳು..
ಅಮ್ಮ ಎನ್ನಲು ದುಃಖವ ಮರೆಮಾಚಿ,
ಕೇವಲ ಖುಷಿಯ ಧಾರೆ ಎರೆದು
ಧೈರ್ಯವ ತುಂಬುವವಳು…
ಅಮ್ಮ ಎಂದರೆ ಚೆಲವು,
ಬಲವು ಉಕ್ಕಿ ಹರಿಯುತಿಹುದು.
ನನ್ನನ್ನು ಹೆತ್ತು ಹೊತ್ತು ಸಾಕಿದವಳು,
ನನ್ನ ಜನ್ಮದಾತೆ ಇವಳು,
ನನಗೆ ಪ್ರಾಣ ಭಿಕ್ಷೆ ಕೊಟ್ಟು ಭೂಮಿಗೆ ತಂದವಳು,
ನನ್ನ ಪಾಲಿನ ದೇವರಿವಳು… ನನ್ನ ಪಾಲಿನ ದೇವರಿವಳು…
Posted by ಜೀವನ್ ಮಹದೇವ
ಧನ್ಯವಾದಗಳು ಸರ್ (thanks :) )
ಪ್ರತ್ಯುತ್ತರಅಳಿಸಿ