ಅನುಮಾನ ಬೇಡ ಇನ್ನು
ಆಮಂತ್ರಣ ನೀಡಿರುವೆ
ಇಲ್ಲಿರುವೇ ಅನುವರ್ತಿ ನಾನು
ಈಗಲೇ ಬಂದು ಸೇರಿಕೋ ನೀನು, ನನ್ನಾ ಒಲವೇ
ಉದಯವಾಗಲಿ ಸೂರ್ಯ ನಮ್ಮಾ ಬಾಳಲಿ
ಊರೆಲ್ಲಾ ನಮ್ಮ ಜೋಡಿಯ ಹಾಡಿ ಹೊಗಳಲಿ
ಋಷಿ ಮುನಿಗಳು ಬರೆದಿಟ್ಟಿಹರು ಮಂತ್ರ ಘೋಷವ
ಎಲ್ಲಾ ಹಿರಿಯರ ಸಮ್ಮುಖದಲ್ಲಿ ವಿವಾಹ ಆಗುವ
ಏನೇ ಕಷ್ಟ ಬರಲಿ ಒಟ್ಟಾಗಿ ಎದುರಿಸುವ
ಐದು ಕನ್ಯೆಯರು ಲೋಕದಲಿ, ಆರನೆಯವಳು ನೀನೇ
ಒಲವಿನಜ್ಯೋತಿ ನನ್ನಲಿಬೆಳಗಿದ, ಒಲವಿನ ದೇವತೆ
ನೀನೇ
ಓದಲಾರೆ ನಿನ ಮನಸಿನ ಮಾತನು, ಮುಗ್ಧ ನಾನು
ಔಥಣವನ್ನು ಕೊಟ್ಟಿರುವೆ ಪ್ರೀತಿಯ ಔಥಣವನ್ನು
ಅಂತರಂಗದ ಸುಖದುಃಖಗಳೆಲ್ಲವ ಹಂಚಿಕೊಳ್ಳೋಣ
ಅಃ ಅಃ ಈ ಬದುಕೇ ಸುಂದರ, ಮುಂದೆಂದೂ ಸಡಗರ
=> ಕೆ ಎಸ್ ಸುಬ್ರಹ್ಮಣ್ಯ ಬಾಬು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.