ಕನಸನು ಹೊತ್ತು ಪ್ರಾಣವ ಕೊಟ್ಟು
ನನ್ನ ಭೂಮಿಗೆ ತಂದೆ ನೀನು
ಬದುಕಲ್ಲಿ ಬರೀ ನೋವಲ್ಲಿ ಕಳೆದರೂ
ತೋರಗೊಡಲಿಲ್ಲ ಕಣ್ಣೀರು
ಎದೆಯ ನೋವು ಮುಚ್ಚಿಟ್ಟು ಕೊಂಡೆ
ಎದೆ ಹಾಲು ಕುಡಿಸಿ ಆನಂದ ಕಂಡೆ
ಬೆಟ್ಟ ದಷ್ಟು ಆಸೆಯ ಮರೆತು
ದಿಟ್ಟತನದಿ ಕಂದನ ಬೆಳೆಸಿದೆ
ನಡುಗಿದರು ಲೋಕದ ಜನತೆಗೆ
ಧೈರ್ಯ ವ ತುಂಬಿದೆ ಮಗುವಿಗೆ
ಸಾಟಿ ಯಾರು ನಿನಗೆ
ನಿನಗಿಂತ ಬೇರೆ ದೈವ ಬೇಕೆ
ಮರುಭೂಮಿ ಯಂಥ ಜೀವನ
ಆದರೂ ತೋರಿದೆ ನಂದನವನ
ನೆನೆಯುವುದು ಲೋಕ ಅಮ್ಮನ
ಉಸಿರಿರುವ ತನಕ ಪ್ರೀತಿಸುವೆ ಕಂದನ
=> ☆ ಸುರಭಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.