fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಜೂನ್ 11, 2014

ಫೀಫಾ ಪುಟ್-ಬಾಲ್ 2014 ( FIFA )

ಫೀಫಾ ಪುಟ್-ಬಾಲ್ 2014 ರ ವಿಶ್ವಕಪ್ ಬ್ರೇಜಿಲ್ ವೇಳಾಪಟ್ಟಿ


ಇಂಗ್ಲೀಷ ವೇಳಾಪಟ್ಟಿ ಗಾಗಿ ಈ ಲಿಂಕ್ ಬಳಸಿ
2014 FIFA WORLD  matchschedule
ಕಾಫಿ ನಾಡಿನಲ್ಲಿ ಇಂದಿನಿಂದ ಆರಂಭವಾಗಲಿದೆ ಗೋಲ್ಡ್‌ವಾರ್
ಕಾಫಿ ನಾಡಿನಲ್ಲಿ ಇಂದಿನಿಂದ ಆರಂಭವಾಗಲಿದೆ ಗೋಲ್ಡ್‌ವಾರ್, ವಿಶ್ವಕಪ್ ಫುಟ್ಬಾಲ್‌ನ ರೋಚಕ ದೃಶ್ಯಕಾವ್ಯಕ್ಕೆ ಕ್ಷಣಗಣನೆ ಈಗ ಬ್ರೆಜಿಲ್‌ನಲ್ಲಿ ವಿಶ್ವಕಪ್ ಫುಟ್ಬಾಲ್ ಜ್ವರ. ಜಗತ್ತಿನ ಮತ್ತೊಂದು ದೊಡ್ಡ ಕ್ರೀಡಾ ಹಬ್ಬಕ್ಕೆ ಕ್ಷಣಗಣನೆ ಆರಂಭ. ಇಡೀ ಜಗತ್ತು, ಈ ಭವ್ಯ ಇತಿಹಾಸದ ಮತ್ತೊಂದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲು ತುದಿಗಾಲಲ್ಲಿ ನಿಂತಿದೆ. ಈ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುವ ಮೂಲಕ ಜಾಗತಿಕ ಫುಟ್ಬಾಲ್ ಭೂಪಟದಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಬ್ರೆಜಿಲ್ ಸರ್ವರೀತಿಯಿಂದಲೂ ಸಜ್ಜುಗೊಂಡಿದೆ.ಜಗತ್ತಿನ ಅಗ್ರ 32 ತಂಡಗಳು ಈ ಬಾರಿ ಸ್ಪರ್ಧಾಕಣದಲ್ಲಿವೆ. ಬೋಸ್ನಿಯಾ ಆ್ಯಂಡ್ ಹರ್ಜೆಗೊವಿನಾ ಬಿಟ್ಟರೆ ಉಳಿದ ತಂಡಗಳು ಈಗಾಗಲೇ ವಿಶ್ವಕಪ್‌ನಲ್ಲಿ ಆಡಿರುವ ಅನುಭವಿಗಳು. ದಟ್ಟ ಅನುಭವ ಬೆನ್ನಿಗೆ ಕಟ್ಟಿಕೊಂಡು ವಿಶ್ವಕಪ್ ಎತ್ತಿ ಹಿಡಿಯುವ ಆಸೆಯೊಂದಿಗೆ ಜಗಜಟ್ಟಿಗಳು ಸ್ಪರ್ಧಾಕಣಕ್ಕೆ ಧುಮುಕಿದ್ದಾರೆ. ಅವರೆಲ್ಲ ಹೊಸ ಇತಿಹಾಸ ಬರೆಯಲು ಕಾತರದಲ್ಲಿದ್ದಾರೆ. ಈ ಬಾರಿ ನಡೆಯುತ್ತಿರುವುದು ಒಟ್ಟಾರೆ 20ನೇ ವಿಶ್ವಕಪ್ ಪಂದ್ಯಾವಳಿಯಾಗಿದೆ. 
ಒಟ್ಟು ತಂಡಗಳು 32
ಒಟ್ಟು ಗುಂಪುಗಳು (ತಲಾ 4ರಂತೆ) 8
ಒಟ್ಟು ಪಂದ್ಯಗಳು 64
ಚಾಂಪಿಯನ್ನರಿಗೆ ಬಹುಮಾನ 207ಕೋಟಿ
ರನ್ನರ್ಸ್-ಅಪ್‌ಗೆ ಬಹುಮಾನ 148ಕೋಟಿ
ಉದ್ಘಾಟನೆ ಪಂದ್ಯ 
ಬ್ರೆಜಿಲ್-ಕ್ರೊವೇಷಿಯಾ 
ಗುಂಪು-ಎಸಮಯ: ಮಧ್ಯರಾತ್ರಿ 1.30 ಗಂಟೆಆರಂಭದ ಸಮಯ ರಾತ್ರಿ 10.30ಗಂಟೆ 
(ಭಾರತೀಯ ಕಾಲಮಾನ) ಮುಕ್ತಾಯದ ಸಮಯರಾತ್ರಿ 12.30ಗಂಟೆ 
ಸ್ಥಳ  
ಕೊರಿಂಥಿಯಾನ್ಸ್ ಕ್ರೀಡಾಂಗಣ, ಸೌ ಪೊಲೊಪ್ರಮುಖ ಆಕರ್ಷಣೆ: ಪಿಟ್‌ಬುಲ್, ಬೆಯೊನ್ಸ್  ನೇರ 
ಪ್ರಸಾರ: 
ಇಎಸ್‌ಪಿಎನ್ಈ ಬಾರಿಯ ಹಾಟ್ ಫೇವರಿಟ್ಜರ್ಮನಿ, ಬ್ರೆಜಿಲ್, ಸ್ಪೇನ್, ಇಟಲಿ, ಅರ್ಜೆಂಟೀನಾಡಾರ್ಕ್ ಹಾರ್ಸ್ ತಂಡ-ಬೆಲ್ಜಿಯಂ ಯಾರ ಪರ ಹೆಚ್ಚು ಬೆಟ್ಟಿಂಗ್ಜರ್ಮನಿ, ಬ್ರೆಜಿಲ್, ಸ್ಪೇನ್‌ಗೆ     ತಲಾ 10ಕ್ಕೆ10 ಅಂಕಡಾರ್ಕ್ ಹಾರ್ಸ್ ಬೆಲ್ಜಿಯಂಗೆ     10ಕ್ಕೆ 8 ಅಂಕಈ ವರೆಗಿನ ಚಾಂಪಿಯನ್ನರುಬ್ರೆಜಿಲ್ 5 ಇಟಲಿ 4 ಜರ್ಮನಿ 3 ಅರ್ಜೆಂಟೀನಾ, ಉರುಗ್ವೆ  ತಲಾ2ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್  ತಲಾ12010ರಲ್ಲಿ ಸ್ಪೇನ್ ಚಾಂಪಿಯನ್ 
ಕಾರ್ಯಕ್ರಮದ ವಿಶೇಷ
 -ಪಿಟ್‌ಬುಲ್, ಕ್ಲೌಡಿಯಾ ಜುಗಲ್ಬಂಧಿ: ಪಾಪ್ ಸಂಗೀತ ಕ್ಷೇತ್ರದ ತಾರೆಯರಾದ ಪಿಟ್‌ಬುಲ್ ಹಾಗೂ ಬ್ರೆಜಿಲ್‌ನ ಗಾಯಕಿ ಕ್ಲೌಡಿಯಾ ಲೈಟ್ಟೆ ವಿಶ್ವಕಪ್‌ನ ಗೀತೆಯಾದ ವಿ ಆರ್ ದ ಒನ್ ಹಾಡು ಹಾಡಲಿದ್ದಾರೆ.
-ಖ್ಯಾತ ಪಾಪ್ ಗಾಯಕರಾದ ಬೆಯೊನ್ಸ್ ಮತ್ತು ಪಾಲ್ ಮ್ಯಾಕರ್ಟ್ನಿರಿಂದ ಸಂಗೀತ ಕಾರ್ಯಕ್ರಮ 
-ಮಧ್ಯ ಪ್ರಾಚ್ಯ ರಾಷ್ಟ್ರಗಳ ಖ್ಯಾತ ಗಾಯಕ ಮೊಹಮದ್ ಅಸ್ಸಾಫರಿಂದ ಕಾರ್ಯಕ್ರಮ
-600 ನೃತ್ಯಗಾರರಿಂದ ನೃತ್ಯ ಪ್ರದರ್ಶನ-ಬ್ರೆಜಿಲ್‌ನ ಜನತೆ, ಅಲ್ಲಿನ ಪರಿಸರ, ಸಂಸ್ಕೃತಿ, ಅಲ್ಲಿನ ಫುಟ್ಬಾಲ್ ಕ್ರೀಡೆಗೆ ಈ ಕಾರ್ಯಕ್ರಮ ಅರ್ಪಣೆ 
-ಹಾಡು, ನೃತ್ಯದ ಜತೆಗೆ ಏರೊಬ್ಯಾಟಿಕ್ ಜಿಮ್ನಾಸ್ಟಿಕ್, ಟ್ರ್ಯಾಂಫೊಲಿನಿಸ್ಟ್ಸ್, ಕೆಪೊಯೆರಾ, ಸ್ಟಿಲ್ಟ್ ಡ್ಯಾನ್ಸ್ ಕಲಾವಿದರಿಂದ ತಮ್ಮ ಕೌಶಲ್ಯ ಅನಾವರಣ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು