Posted by
ekanasu
ಈ ಕನಸು ಅವಾರ್ಡ್
ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ಎನ್ನುತ್ತಾರೆ, ಮಗುವನ್ನು ಒಂಭತ್ತು ತಿಂಗಳು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವಳು ಹೆತ್ತ ತಾಯಿ. ಅಮ್ಮ ಎಂಬ ಶಬ್ದವನ್ನು ಬಾಯ್ತುಂಬಾ ಕರೆಯೋದೆ ಒಂದು ಹರುಷ ನಮ್ಮೆಲ್ಲರ ಪಾಲಿಗೆ ಅವಳೇ ದೈವವಾಗಿದ್ದಾಳೆ, ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ, ನಿರ್ಮಲವಾಗಿರುತ್ತದೆ. ಆ ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಳುವ ಕಂದನನ್ನು ಅಪ್ಪಿಕೊಂಡು ತನ್ನ ಮಡಿಲಲ್ಲಿ ಹಾಕಿಕೊಂಡು ಅಮೃತಕ್ಕಿಂತ ಮಿಗಿಲಾದ ಆ ತಾಯಿಯ ಎದೆಹಾಲು ಉಣಿಸುವದರ ಮೂಲಕ ಆ ಮಗುವಿಗೆ ಸಮಾಧಾನ ಮಾಡುತ್ತಾಳೆ.
ತಾಯಿಯ ಎದೆ ಹಾಲು ಬಹಳ ಶ್ರೇಷ್ಠವಾದದು ಎದೆ ಹಾಲು ಕುಡಿದ ಮಕ್ಕಳು ಯಾವುದೇ ನ್ಯೂನ್ಯತೆ ಇಲ್ಲದೆ ದಷ್ಟ ಪುಷ್ಟವಾಗಿ ಬೆಳೆಯುತ್ತಾರೆ, ಹಾಲನ್ನು ಕುಡಿಯದೇ ಇರುವಂತಹ ಮಕ್ಕಳು ಅನಾರೋಗ್ಯದಿಂದ ಬಳಲುವುದನ್ನು ಕಾಣುತ್ತೇವೆ. ಇದರಿಂದ ಕಣ್ಣಿನ ಸಮಸ್ಯೆ, ಜ್ಞಾಪಕ ಶಕ್ತಿ, ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.
ಹುಟ್ಟಿದ ಮಗು ಮೂರು ವರ್ಷಗಳ ವರೆಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿಯೇ ನಿದ್ರಿಸಬೇಕು, ಇಲ್ಲವಾದರೆ ಮಗು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೊಸ ಸಂಶೋಧನೆಯೊಂದು ಇತ್ತೀಚೆಗೆ ಹೇಳಿದೆ. ದಕ್ಷಿಣ ಆಫ್ರಿಕಾದ ಕೇಪ್ಟೌನ್ ವಿಶ್ವವಿದ್ಯಾಲಯದ ಡಾ.ನೀಲ್ಸ್ ಬ್ರಿಜ್ಮನ್ ನೇತೃತ್ವದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿ, ತಾಯಿಯ ಜೊತೆ ಮಗು ನಿದ್ರಿಸದಿದ್ದರೆ ಮಗುವಿನ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ ಎಂದು ಹೇಳಿದೆ. ಅಮ್ಮನ ಹಿತವಾದ ಸಾಮೀಪ್ಯದಲ್ಲಿ ನಿದ್ರಿಸಿದರೆ ಮಗುವಿನ ಮೆದುಳು ಬೆಳವಣಿಗೆ ಹೊಂದುತ್ತದೆ.

ಒಂದು ವೇಳೆ ತಾಯಿಯಿಂದ ಬೇರ್ಪಟ್ಟು ನಿದ್ರಿಸಿದರೆ ಮೆದುಳಿನಲ್ಲಿ ದೋಷ
ಕಾಣಿಸಿಕೊಳ್ಳಲಿದೆ. ಅಲ್ಲದೇ ವರ್ತನೆಯಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಸಂಶೋಧಕರು
ತಿಳಿಸಿರುವ ವಿಚಾರವನ್ನು ಕನ್ನಡ ದಿನ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಈ
ವಿಷಯದಿಂದ ತಾಯಿ ಮಗುವಿನ ಸಂಬಂಧ ಎಷ್ಟೊಂದು ಮಹತ್ವದ್ದು ಎಂದು ತಿಳಿದು ಬರುತ್ತದೆ. ತಾಯಿ
ಮತ್ತು ಮಗುವಿನ ಸಂಬಂಧ ಬಹಳ ಅನ್ಯೋನ್ಯವಾದುದು. ಮಾತೃ ಪ್ರೇಮ ಮಕ್ಕಳಿಗೆ ದೊರೆತರೆ ಅವರು
ಲವಲವಿಕೆಯಿಂದ ಬೆಳೆಯುತ್ತಾರೆ . ತಾಯಿ ಪ್ರೀತಿ ಎಲ್ಲರಿಗೂ ದೊರೆಯುವದಿಲ್ಲ. ಪ್ರೀತಿ
ಕಳೆದುಕೊಂಡ ಮಕ್ಕಳ ನೋವನ್ನು ಹೇಳಲಾಗದು ಯಾಕೆಂದರೆ ದಾಹ ಆದಾಗಲೇ ನೀರಿನ ಮಹತ್ವ
ತಿಳಿಯುವಂತೆ, ತಾಯಿ ಇಲ್ಲವಾದಾಗ ಅವಳ ಪ್ರೀತಿಯ ಮಹಿಮೆ ಗೊತ್ತಾಗುವದು.
ಮಕ್ಕಳು ಚಿಕ್ಕವರಿದ್ದಾಗಲೇ ಅವರನ್ನು ಬೆಳೆಸಿ ಸರಿ ದಾರಿಗೆ ತರುವವಳು ಈ ಮಹಾತಾಯಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಂತರ ಮಹಾವಿದ್ಯಾಲಯ ಯುವಜನೋತ್ಸವ 2011ರ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾಯಿ ಮಗುವಿಗೆ ಹಾಲುಣಿಸುವ ಹಾಗೂ ಮಮತೆ ತೋರಿಸುವ ಸುಂದರ ಕಲಾಕೃತಿಯನ್ನು ರಚಿಸಿ ಎಲ್ಲರ ಗಮನ ಸೆಳೆದರು. ಒಂದೊಂದು ಕಲಾಕೃತಿಯನ್ನು ನೋಡಿದ ಪ್ರತಿಯೊಬ್ಬರಿಗೂ ತಾಯಿಯ ಮಮತೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ.
ಈ ಅದಮ್ಯ, ಅಗೋಚರವಾದ ಅಮ್ಮನ ಪ್ರೀತಿ ಮುಂದೆ ಎಲ್ಲವೂ ತೃಣಕ್ಕೆ ಸಮಾನವಾಗುತ್ತದೆ. ಅಮ್ಮ ಎಂದರೆ ಸಿಗುವ ತೃಪ್ತಿ, ಮಕ್ಕಳಲ್ಲಿ ಚಿಮ್ಮುವ ಉತ್ಸಾಹ, ಉಲ್ಲಾಸ ಅವರ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳಿಗೆ ತಾಯಿಯೇ ಬಾಳಿನ ಬೆಳಕಾಗಿ, ಅವರ ಜೀವನದ ಜ್ಯೋತಿಯನ್ನು ಬೆಳಗುತ್ತಾಳೆ ಅವಳಿಲ್ಲದೇ ಎಲ್ಲವೂ ಶೂನ್ಯ.
ಇಂದಿನ ದಿನಗಳಲ್ಲಿ ಕಾಲ ಬದಲಾದಂತೆ ಎಲ್ಲವೂ ಬದಲಾವಣೆಯಾಗುವದನ್ನು ನಾವು ಕಾಣುತ್ತೇವೆ. ಈ ಹೈಬ್ರಿಡ್ ಕಾಲದಲ್ಲಿ ಎಲ್ಲವೂ ದೊರೆಯುತ್ತದೆ, ಆದರೆ ಮಕ್ಕಳಿಗೆ ತಾಯಿ ಪ್ರೀತಿ ಸಿಗುವದೇ ಕಷ್ಟವಾಗಿದೆ. ಇಂದಿನ ಒತ್ತಡ ಜೀವನದಲ್ಲಿ ತಂದೆ, ತಾಯಿ ಹಣ ಗಳಿಸಿಲೆಂದು ಇರುವ ಸಮಯವನ್ನೇ ಅದರಲ್ಲಿ ಕಳೆಯುತ್ತಿದ್ದಾರೆ. ತಾವು ಹೆತ್ತ ಮಕ್ಕಳ ಬಗ್ಗೆ ಸ್ವಲ್ಪನು ಚಿಂತೆ ಇಲ್ಲದೆ ಅವರನ್ನು ಕಾನ್ವೆಂಟ್ ಸ್ಕೂಲಿಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆಯಿತೆಂದು ಸುಮ್ಮನಾಗಿ ಬಿಡುತ್ತಾರೆ.
ಆದರೆ ತಂದೆ, ತಾಯಿಯನ್ನು ಕಾಣಬೇಕೆಂಬ ಮಕ್ಕಳ ಆಸೆ ಹಾಗೆ ಕಮರಿ ಹೋಗುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳದೆ ಅವರು ಮಕ್ಕಳಿಗೆ ಬೇಸರ ಉಂಟು ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ ಎಂದು ತಿಳಿದರೂ ಸಹ ಅವರು ಮತ್ತೆ ಅದೇ ರೀತಿ ಮಾಡುವದು ವಿಷಾದದ ಸಂಗತಿ.
ಈಗತಾನೇ ಭೂಮಿಗೆ ಕಾಲಿಟ್ಟ ಏನು ಅರಿಯದಿರುವ ಹಸುಳೆ ಶಿಶುವನ್ನು ಹೆತ್ತ ಎಷ್ಟೋ ತಾಯಂದಿರು ಅವರನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ಕೆಲಸವಾಗಿದೆ. ಈ ರೀತಿಯ ಘಟನೆಗಳು ಅಮಾನವೀಯ ಕೃತ್ಯಗಳಾಗಿವೆ. ಮಾನವೀಯ ಮೌಲ್ಯ ಹೊಂದಿದ ಯಾವುದೇ ವ್ಯಕ್ತಿ ಇಂಥಹ ಘಟನೆಗೆ ಆಸ್ಪದ ಕೊಡಬಾರದು.
ಮಕ್ಕಳು ದೇವರು ಸಮಾನ ಎನ್ನುತ್ತಾರೆ. ಅವರನ್ನು ಕಾಪಾಡುವದು ಅವರವರ ಕರ್ತವ್ಯವಾಗಿದೆ. ಅದೇ ರೀತಿ ಯಾವ ತಾಯಿಯು ಕೆಟ್ಟವರಿರುವದಿಲ್ಲ ಆದರೆ ಸಮಯ, ಸಂದರ್ಭಗಳು ಮನುಷ್ಯನನ್ನು ಆಟ ಆಡಿಸುತ್ತವೆ. ಜೀವನದಲ್ಲಿ ನಂಬಿಕೆ ಮುಖ್ಯ, ನಂಬಿಕೆಯಿಂದಲೇ ಜೀವನ ನಡೆಸಬೇಕು. ಗಾಳಿಯೂ ನಿನ್ನದೇ, ದೀಪವೂ ನಿನ್ನದೇ ಆರದಿರಲಿ ಬದುಕು. ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ ಬಾಳುವದು ಜೀವನದ ನಿಯಮ. ನೋಡಲು ದೇವರಿಲ್ಲ, ಆ ದೇವರನ್ನೇ ತಾಯಿಯಲ್ಲಿ ಕಾಣಬೇಕು.
ಅಮರೇಶ ನಾಯಕ, ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ(ಕಲಬುರಗಿ).

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.