ಗುರುವಾರ, ಆಗಸ್ಟ್ 20, 2015

ನಾಗರ ಹಾವೆ

 ನಾಗರ ಹಾವೆ ಹಾವೊಳು ಹೂವೆ ! ?
 
ಬಾಗಿಲ ಬಿಲದಲಿ ನಿನ್ನಯ ಠಾವೆ
 
ಕೈಗಳ ಮುಗಿವೆ ಹಾಲನ್ನೀವೆ
 
ಬಾ ಬಾ ಬಾ , ಬಾ ಬಾ ಬಾ || ||
 ಹಳದಿಯ ಹೆಡೆಯನು ಬಿಚ್ಚೋ ಬೇಗ,
 
ಕೊಳಲನ್ನೂದುವೆ ಲಾಲಿಸು ರಾಗ,
 
ಹೊಳಹಿನ ಹೊಂದಲೆ ತೂಗೋ ನಾಗ,
 
ನೀ ನೀ ನೀ, ನೀ ನೀ ನೀ ||||
 ಎಲೆ ನಾಗಣ್ಣ ಹೇಳೆಲೊ ನಿನ್ನ ,
 
ತಲೆಯಲಿ ರನ್ನ ವಿಹುದನ್ನ ,
 
ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ,
 
ತಾ ತಾ ತಾ, ತಾ ತಾ ತಾ , ||||
 ಬರಿಮೈ ತಣ್ಣಗೆ ಮನದಲಿ ಬಿಸಿ ಹಗೆ,
 
ಎರಡೆಳೆ ನಾಲಗೆ ಇದ್ದರು ಸುಮ್ಮಗೆ,
 
ಎರಗುವೆ ನಿನಗೆ ಈಗಲೆ ಹೊರಗೆ ,
 
ಪೋ ಪೋ ಪೋ, ಪೋ ಪೋ ಪೋ, ||||

ಕಾಮೆಂಟ್‌ಗಳಿಲ್ಲ: