ಅಂಕಿತ ನಾಮ:
ಸಿದ್ಧಸೋಮನಾಥ
ಕಾಲ: 1160
ದೊರಕಿರುವ ವಚನಗಳು: 30 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಸೊಲ್ಲಾಪುರ
ಪರಿಚಯ: ಕಾಲ, ಸು. 1160. ಸ್ಥಳ: ಸೊಲ್ಲಾಪುರ. ಬಟ್ಟೆ ನೇಯುವ ಕಾಯಕದವನು. ವರದಾನಿ ಈತನ ಹೆಂಡತಿ. ಮಹಾರಾಷ್ಟ್ರದ ಪುಳಜೆಯಲ್ಲಿ ದೊರೆತ ಶಾಸನಗಳಲ್ಲಿ ಈತನ ಪ್ರಸ್ತಾಪವಿದೆ. ಯಾದವ ಅರಸ ಸಿಂಘಣನು ಆಮುಗಿದೇವಯ್ಯನನ್ನು ಗೌರವಿಸಿದ ಪ್ರಸ್ತಾಪ ಶಾಸನದಲ್ಲಿದೆ. ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನನಿಂದ ತನ್ನ ಮನೆಯ ವಸ್ತುಗಳ ಗಂಟನ್ನು ಹೊರಿಸಿಕೊಂಡು ಹೋದ, ಸಿದ್ಧರಾಮನಿಗೆ ಬುದ್ಧಿ ಕಲಿಸಿದ ಕಥೆ ಕಾವ್ಯ, ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈತನ 30 ವಚನಗಳು ದೊರೆತಿವೆ.

ಅಂಗ ಅನಂಗವೆಂಬೆರಡರ ಸಂದಳಿದ ಮಹಂತನ
ಅಂಗ ಸೋಂಕಿತ್ತೆಲ್ಲಾ ಪವಿತ್ರ ಕಾಣಿರೆ.
ಪವಿತ್ರವಿರ್ದಲ್ಲಿ ಪದಾರ್ಥವಿಹುದು, ಪದಾರ್ಥವಿರ್ದಲ್ಲಿ ಮನವಿಹುದು.
ಮನವಿರ್ದಲ್ಲಿ ಹಸ್ತವಿಹುದು, ಹಸ್ತವಿರ್ದಲ್ಲಿ ಜಿಹ್ವೆಯಿಹುದು
ಜಿಹ್ವೆಯಿರ್ದಲ್ಲಿ ರುಚಿಯಿಹುದು, ರುಚಿಯಿರ್ದಲ್ಲಿ ಅವಧಾನವಿಹುದು.
ಅವಧಾನವಿರ್ದಲ್ಲಿ ಭಾವವಿಹುದು, ಭಾವವಿರ್ದಲ್ಲಿ ಲಿಂಗವಿಹುದು.
ಲಿಂಗವಿರ್ದಲ್ಲಿ ಅರ್ಪಿತವಿಹುದು, ಅರ್ಪಿತವಿರ್ದಲ್ಲಿ ಪ್ರಸಾದವಿಹುದು.
ಪ್ರಸಾದವಿರ್ದಲ್ಲಿ ಪರಿಣಾಮವಿಹುದು.
ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಶರಣರು
ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳಯ್ಯಾ.

ಅಲಗಿನ ಮೊನೆಯನೇರಬಹುದು,
ಹುಲಿಯ ಬಲೆಯ ಹೊಗಬಹುದು,
ಸಿಂಹದ ಕೊರಳಿಗೆ ಹಾಯಬಹುದು,
ಸಿದ್ಧಸೋಮನಾಥಾ, ನಿಮ್ಮ ಮುಟ್ಟದೆ ನಿಮಿಷ ಕುಳ್ಳಿರಬಾರದು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.