ಬುಧವಾರ, ಮೇ 31, 2017

ನನ್ನ ಭಾರತ (My India)

ನೋಡು ಬಾ ನೋಡು ಬಾ
ನನ್ನ ಭಾರತ
ಹಾಡು ಬಾ ಹಾಡು ಬಾ
ಸುಪ್ರಭಾತಾ...

ಅದೋ ನೋಡು ಬಾನಿನಲ್ಲಿ ನಮ್ಮ ಬಾವುಟ
ಕೇಸರಿ ಬೀಳಿ ಹಸಿರ ರಂಗಿನಲ್ಲಿ
ಹಾರಾಡುತಿದೆ ಪಟಪಟ
ರೀನಾ ರೀಮಾ ರಿಹಾನಾ
ಎಲ್ಲ ಬನ್ನಿರೆ
ಪ್ರೀತಿ ಸ್ನೇಹ ಸೌಹಾರ್ದನಾ
ಬಹಳ ತನ್ನಿರೆ...
ಪರಿಸರವ ಕಾಪಾಡುವ
ಮಾಡೋಣ ಸ್ವಚ್ಛ ಭಾರತ
ಪವಿತ್ರ ಭೂಮಿ ಎನುತ
ಹಾಡೋಣ ನಲಿಯುತ
ಖನಿಜ ಸಂಪತ್ತುಗಳ
ತವರು ಭಾರತ
ಸತ್ಯ ಶಾಂತಿ ಧರ್ಮಗಳ
ಉಸಿರು ಭಾರತ
ಜೈ ಭಾರತ ಜೈ ಭಾರತ
ಎಂದು ಮೆರೆಯುವಾ
ಭಾರತ ಭಾಗ್ಯ ವಿಧಾತ
ಎಂದು ನಮಿಸುವಾ...

ಕೃಪೆ -> ರಾಧಾ ಪ್ರಕಾಶ್‌

ಕಾಮೆಂಟ್‌ಗಳಿಲ್ಲ: