ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಜೂನ್ 15, 2020

ಅ-ಅಃ & ಕ-ಕ್ಷ ನಮ್ಮ ಜೀವನ

ಅಮ್ಮನ ಮಡಿಲಿಂದ

ಆ... ಎಂದು ಅಳುತ್ತಾ

ಇಲ್ಲಿಗೆ

ಈಸಬೇಕು

ಉಪಕಾರಿಯಾಗಿ

ಊರಿಗೆ

ಋಣಿಯಾಗಲು

ಎಷ್ಟೇ ಏಗಿದರೂ

ಐದಂಕಿ ಸಂಬಳಕ್ಕೆ

ಒಗ್ಗಟ್ಟಿನಿಂದ

ಓಟದ ಜೀವನದಲ್ಲಿ

ಔಡು ಗಚ್ಚಿ

ಅಂದದ ಬದುಕಿಕಾಗಿ

ಅಃ ಹರ್ನಿಶಿ

ಕಷ್ಟ ಪಟ್ಟು
ಖಗದಂತೆ ಹಾರಿ, ಮೃಗದಂತೆ
ಗಟ್ಟಿಯಾಗಿ
ಘರ್ಜಿಸಲು ಆಗದೆ
ಙ ಸ್ವರದಂತೆ ಏಕಾಂಗಿಯಾಗಿ

ಚಲಿಸಲು ಕಷ್ಟ ಪಡುತ್ತಾ
ಛತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ
ಜಗತ್ತಿನಲ್ಲಿ
ಝ ರಿಯಂತೆ
ಞ (ನ್ಯಾ)ಸಾಗುತ್ತಾ (ಚೌಕಟ್ಟು)

ಟಗರಿನ ಚರ್ಮದಂತೆ
ಠಕ್ಕತನಕ್ಕೆ ಒಳಗಾಗುತ್ತಾ
ಡಮರುಗದ ಶಬ್ಧಕ್ಕೆ
ಢವಡವ ಗುಡುತ್ತಾ ಹ
ಣಕ್ಕೆ
ಣ ಕಾರ ಇಲ್ಲದೇ ಬರಿದೇ

ತತ್ತರಿಸುತ್ತಾ..
ಥರಥರನೆ ನಡುಗುತ್ತಾ..
ದನಕ್ಕಿಂತ ಕೀಳಾಗಿ

ಧನಕ್ಕೆ ಆಳಾಗಿ ಕಿರು
ನಗುವಿನಾ ನೆಮ್ಮದಿಗೆ ಹಂಬಲಿಸುತ್ತಾ

ಪರಿಸರಕ್ಕೆ
ಫಲವಾಗದೇ (ಪೂರಕವಾಗದೇ)
ಬರಿದೇ
ಭಂಡ
ಮನುಷ್ಯನಾಗಿ

ಯಮನಿಗೆ ತನ್ನನ್ನು
ರಕ್ಷಿಸು ಎಂದು ಸಾವಿಗೆ
ಲಜ್ಜೆಗೆಟ್ಟು
ವರ ಬಯಸುತ್ತಾ ಕೊನೆಗೆ
ಶವವಾಗಲು
ಸಮಯ ಕಾಯುತ್ತಾ
ಹಗಲಿರು
ಳಲ್ಲೂ
ಕ್ಷಣ ಬದುಕಿ ಸಾಯುವ ನಮ್ಮ ಜೀವನ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು