ಕನಸು - ನನಸುಗಳೆರಡು
ನಮ್ಮೊಟ್ಟಿಗೆ ಇರಲಿ
ಪ್ರೀತಿ - ಪ್ರೇಮಗಳೆರಡೂ
ನಮ್ಮೊಟ್ಟಿಗೆ ಇರಲಿ
ಸುಖ - ಸಂತೋಷಗಳೆರಡು
ನಮ್ಮೊಟ್ಟಿಗೆ ಇರಲಿ
ಪ್ರೀತಿ - ಸ್ನೇಹಗಳೆರಡು
ನಮ್ಮೊಟ್ಟಿಗೆ ಇರಲಿ
ಬಂಧು - ಬಂಧವರೆಲ್ಲರೂ
ನಮ್ಮೊಟ್ಟಿಗೆ ಇರಲಿ
ಕಷ್ಟ - ಸುಖಗಳೆರಡು
ನಮ್ಮೊಟ್ಟಿಗೆ ಇರಲಿ
ನೋವು - ನಲಿವುಗಳೆರಡು
ನಮ್ಮೊಟ್ಟಿಗೆ ಇರಲಿ
ಭರವಸೆ - ಆತ್ಮವಿಶ್ವಾಸಗಳೆರಡು
ನಮ್ಮೊಟ್ಟಿಗೆ ಇರಲಿ
ಈ
ಅವಳಿ - ಜವಳಿಗಳೊಂದಿಗೆ ಸಮರಸದ ಬದುಕು
ನಮ್ಮೊಟ್ಟಿಗೆ ಇರಲಿ......
@- ಉಮಾ ಪ್ರಕಾಶ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.