fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ನವೆಂಬರ್ 30, 2015
ಶನಿವಾರ, ನವೆಂಬರ್ 28, 2015
ಸಂತಸ
ಮನುಷ್ಯನಿಗೆ ಅತಿ ಹೆಚ್ಚು ಖುಷಿಯಾದಲ್ಲಿ ಅವನು ಪಕ್ಷಿಗಳ ಜೊತೆ,
ಪ್ರಾಣಿಗಳ
ಜೊತೆ,
ಬೆಟ್ಟ ಗುಡ್ಡಗಳ ಜೊತೆಯೂ
ತನ್ನ ಸಂತಸವನ್ನು ಹಂಚಿಕೊಳ್ಳಲು ತವಕಿಸುತ್ತಾನೆ.
ಗುರುವಾರ, ನವೆಂಬರ್ 26, 2015
ಅಲ್ಲಮಪ್ರಭುದೇವರು
ಅಂಕಿತ ನಾಮ:
ಗುಹೇಶ್ವರ
ಕಾಲ: 1160
ದೊರಕಿರುವ ವಚನಗಳು: 1670 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ನಾಗವಾಸಾಧಿಪತಿ
ಹುಟ್ಟಿದ ಸ್ಥಳ: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ
ಕಾಲ: 1160
ದೊರಕಿರುವ ವಚನಗಳು: 1670 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ನಾಗವಾಸಾಧಿಪತಿ
ಹುಟ್ಟಿದ ಸ್ಥಳ: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ
ಪರಿಚಯ:
ಕಾಲ, ಸು. 1160. ಊರು: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ
ಬಳ್ಳಿಗಾವಿ. ಇವನ ಬದುಕನ್ನು ಕುರಿತು ಹರಿಹರ ಮತ್ತು ಚಾಮರಸ ಎರಡು ಬೇರೆ ಬೇರೆಯ ರೀತಿಯ
ಕಥೆಗಳನ್ನು ಹೇಳಿದ್ದಾರೆ. ಅಲ್ಲಮನ ತಂದೆ ನಿರಹಂಕಾರ, ತಾಯಿ ಸುಜ್ಞಾನಿ, ಗುರು ಅನಿಮಿಷ.
ಇವು ಕಲ್ಪಿತವಾದ ಹೆಸರುಗಳಾಂತೆ ತೋರುತ್ತವೆ. ತಂದೆ ‘ನಾಗವಾಸಾಧಿಪತಿ’. ಅಲ್ಲಮ
ದೇವಸ್ಥಾನದಲ್ಲಿ ಮದ್ದಳೆಯನ್ನು ನುಡಿಸುತ್ತಿದ್ದ. ಅವನನ್ನು ಕಾಮಲತೆ ಎಂಬ ಹೆಣ್ಣು
ಮೆಚ್ಚಿ ಮದುವೆಯಾದಳು. ಅವಳು ಜ್ವರಬಾಧೆಯಿಂದ ತೀರಿಕೊಂಡಳು. ತಾನೂ ಸಾಯಲು ಬಯಸಿದ ಅಲ್ಲಮ
ಗುಹೆಯನ್ನು ಪ್ರವೇಶಿಸಿದಾಗ ಅಲ್ಲಿ ಅನಿಮಿಷನ ದರ್ಶನವೂ ದೀಕ್ಷೆಯೂ ದೊರೆಯಿತು ಅನ್ನುವುದು
ಹರಿಹರ ತನ್ನ ರಗಳೆಯಲ್ಲಿ ಹೇಳುವ ಕಥೆ. ಅಲ್ಲಮನು ಪರಮ ವಿರಾಗಿ. ಅವನನ್ನು ಮೆಚ್ಚಿಬಂದ
ಕಾಮಲತೆಯನ್ನು ಸೋಲಿಸಿ ಗೆದ್ದ ಎಂಬುದು ಚಾಮರಸ ‘ಪ್ರಭುಲಿಂಗಲೀಲೆ’ಯಲ್ಲಿ ಹೇಳುವ ಕಥೆ.
ಅಲ್ಲಮ ದೇಶಸಂಚಾರಿಯಾಗಿ ಅನೇಕ ಸಾಧಕರನ್ನು ಭೇಟಿಯಾಗಿ, ಅವರೊಡನೆ ಸಂವಾದ ನಡೆಸಿ
ಮಾರ್ಗದರ್ಶನ ಮಾಡುತ್ತ ಕಲ್ಯಾಣಕ್ಕೆ ಬಂದು ಅಲ್ಲಿನ ಅನುಭವ ಮಂಟಪದ ಮುಖ್ಯಸ್ಥನಾಗಿ, ನಂತರ
ಶ್ರೀಶೈಲಕ್ಕೆ ತೆರಳಿ ಮತ್ತೆ ಮರಳಿದ್ದನ್ನು ‘ಶೂನ್ಯಸಂಪಾದನೆ’ಗಳು ಹೇಳುತ್ತವೆ.
ಅಲ್ಲಮನ 1670 ವಚನಗಳು ದೊರೆತಿವೆ. ಇವುಗಳಲ್ಲಿ ಹನ್ನೆರಡನೆಯ ಶತಮಾನದ ವೈಚಾರಿಕ
ವಾಗ್ವಾದದ ಚರಿತ್ರೆಯನ್ನು ಕಾಣಬಹುದೆಂದು ಸಂಸ್ಕೃತಿ ಚಿಂತಕರು ಭಾವಿಸುತ್ತಾರೆ.
ಅಲ್ಲಮನನ್ನು ಕುರಿತ ದೊಡ್ಡಾಟ, ಬಯಲಾಟಗಳಿವೆ. ಅಲ್ಲಮನ ಸಮಾಧಿಸ್ಥಳವೆಂದು ಗುರುತಿಸುವ
ಇಪ್ಪತ್ತಕ್ಕೂ ಹೆಚ್ಚು ಸ್ಥಳಗಳು ಕರ್ನಾಟಕದಲ್ಲಿವೆ. ಕವಿ ದರಾ ಬೇಂದ್ರೆಯವರು
ಅಲ್ಲಮನನ್ನು ಕನ್ನಡ ಸಂಸ್ಕೃತಿಯ ನಾಲ್ಕು ನಾಯಕರತ್ನರಲ್ಲಿ ಒಬ್ಬನು ಎಂದಿದ್ದಾರೆ.
ಅಲ್ಲಮ, ನಾಗಚಂದ್ರ ಚಿತ್ರಿಸಿದ ರಾವಣ, ಕುಮಾರವ್ಯಾಸನ ಕೃಷ್ಣ, ರತ್ನಾಕರ ಚಿತ್ರಿಸಿದ ಭರತ
ಚಕ್ರವರ್ತಿ ಇವರು ನಾಲ್ಕು ಜನ ಕನ್ನಡ ಬದುಕಿನ ನಾಲ್ಕು ಸಾಧ್ಯತೆಗಳನ್ನು ತೋರಿದವರು
ಎನ್ನುತ್ತಾರೆ. ಅನುಭಾವ, ಆಧ್ಯಾತ್ಮಗಳ ಚಿಂತನೆ ಅಲ್ಲಮ ವಚನಗಳ ಮುಖ್ಯ ವಸ್ತು.
ಅನಿರೀಕ್ಷಿತವಾದ ಅರ್ಥಗಳ ನಿರ್ಮಾಣ, ಮತ್ತು ಅರ್ಥಗಳ ನಿರಾಕರಣೆ ಅಲ್ಲಮನ ದಾರಿ.
ಉಜ್ವಲವಾದ ರೂಪಕಗಳನ್ನು ಬಳಸಿ ಅವನು ಹೇಳುವ ಮಾತುಗಳು ವ್ಯಕ್ತಿ ವಿಕಾಸ, ಧರ್ಮಚಿಂತನೆ,
ಸಂಸ್ಕೃತಿ ಚಿಂತನೆಗಳ ದೃಷ್ಟಿಯಿಂದ ಮುಖ್ಯವಾಗಿವೆ.
ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ.
ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
ಅಂಗಸೋಂಕೆಂಬುದು ಅಧಮವು.
ಉರಸೆಜ್ಜೆಯೆಂಬುದು ಎದೆಯ ಗೂಂಟ.
ಕಕ್ಷೆಯೆಂಬುದು ಕವುಚಿನ ತವರುಮನೆ.
ಅಮಳೋಕ್ಯವೆಂಬುದು ಬಾಯ ಬಗದಳ.
ಮುಖಸೆಜ್ಜೆಯೆಂಬುದು ಪಾಂಡುರೋಗ.
ಕರಸ್ಥಳವೆಂಬುದು ಮರವಡದ ಕುಳಿ.
ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ.
ಎಲ್ಲರಿಗೆಯೂ ಸೋಂಕಾಯಿತ್ತು !
ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ
ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ.
ಉರಸೆಜ್ಜೆಯೆಂಬುದು ಎದೆಯ ಗೂಂಟ.
ಕಕ್ಷೆಯೆಂಬುದು ಕವುಚಿನ ತವರುಮನೆ.
ಅಮಳೋಕ್ಯವೆಂಬುದು ಬಾಯ ಬಗದಳ.
ಮುಖಸೆಜ್ಜೆಯೆಂಬುದು ಪಾಂಡುರೋಗ.
ಕರಸ್ಥಳವೆಂಬುದು ಮರವಡದ ಕುಳಿ.
ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ.
ಎಲ್ಲರಿಗೆಯೂ ಸೋಂಕಾಯಿತ್ತು !
ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ
ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ.
ಅನಲನಾರಣ್ಯದೊಳಗೆ ಎದ್ದಲ್ಲಿ;
ದೂ(ಧು?)ರದೆಡೆಯಲಾರನೂ ಕಾಣೆವು,
ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ !
ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ
ಕಟ್ಟಳೆ.
ಗುಹೇಶ್ವರನು ಶರಣ ಐಕ್ಯಸ್ಥಲವ
ಮೆಟ್ಟಲೊಡನೆ,
ಸರ್ವವೂ ಸಾಧ್ಯವಾಯಿತ್ತು.
ದೂ(ಧು?)ರದೆಡೆಯಲಾರನೂ ಕಾಣೆವು,
ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ !
ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ
ಕಟ್ಟಳೆ.
ಗುಹೇಶ್ವರನು ಶರಣ ಐಕ್ಯಸ್ಥಲವ
ಮೆಟ್ಟಲೊಡನೆ,
ಸರ್ವವೂ ಸಾಧ್ಯವಾಯಿತ್ತು.
ಅಟ್ಟುದನಡಲುಂಟೆ ? ಸುಟ್ಟುದ ಸುಡಲುಂಟೆ ?
ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ
ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ?
ಅದೆಂತೆಂದಡೆ:
``ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ
ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ ''
ಎಂದುದಾಗಿ_
ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ,
ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ.
ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ
ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ?
ಅದೆಂತೆಂದಡೆ:
``ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ
ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ ''
ಎಂದುದಾಗಿ_
ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ,
ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ.
ಬುಧವಾರ, ನವೆಂಬರ್ 25, 2015
ಮಂಗಳವಾರ, ನವೆಂಬರ್ 24, 2015
ವಯಸ್ಸು
ಕೆಲವು ಹೆಂಗಸರಿಗೆ ಆಗುತ್ತದೆಂದು ಹೇಳಲುಬಾರದು
ನಿಮ್ಮೆದುರಿಗಿನವರು ಮಾತೇ ನಿಲ್ಲಿಸುತ್ತಿಲ್ಲವೆನಿಸಿದರೆ ನಿಮ್ಮ ವಯಸ್ಸೆಷ್ಟು
ಯಶಸ್ಸಿಗೆ ಇದೂ ಒಂದು ಕಾರಣ
ಚಿಕ್ಕ ವಯಸ್ಸಿನಲ್ಲೆ ಮದುವೆಯಾದವನಿಗೆ ಬೇಗ ವಯಸ್ಸಾಗುತ್ತದೆ
ಬಯೋಡೇಟಾದಲ್ಲಿ ಮಾತ್ರ ಇದನ್ನು ಸರಿಯಾಗೇ ತುಂಬಬೇಕಾಗುತ್ತದೆ
ನಮ್ಮದಾದರೆ ಹತ್ತು ಕಡಿಗೆ, ಪರರದ್ದು ಹತ್ತು ಹೆಚ್ಚು ಹೇಳಿದರೂ ಕಡಿಮೆಯೇ
ವಯಸ್ಸಿಗೆ ಮಿತಿಯಿಲ್ಲ, ಆಯುಸ್ಸಿಗಿದೆ
ಊರ್ಧ್ವಮುಖಿ
ಹಲ್ಲು ಸೆಟ್ಟು ಕನ್ನಡಕ, ವಿಗ್ ಮೊದಲಾದವಕ್ಕೆಲ್ಲ ಖರ್ಚು ಮಾಡಲು ಕಾರಣವಾದದ್ದು
ವಯಸ್ಸಾದವರಂತೆ ಕಾಣಿಸುತ್ತಿಲ್ಲವೆಂದರೆ ವಯಸ್ಸನ್ನು ಯಾರೂ ದ್ವೇಷಿಸುವುದಿಲ್ಲ
ನಟಿಮಣಿಗಳ ಮೇಲೆ ವಯಸ್ಸಿಗೇಕೋ ಅನುಕಂಪ, ತುಂಬಾ ನಿಧಾನ
ಕೆಲವರು ಹುಟ್ಟಿದ ದಿನವನ್ನಷ್ಟೇ ಹೇಳಲು ಬಯಸುತ್ತಾರೆ, ಇಸ್ವಿಯನ್ನಲ್ಲ
ವಯಸ್ಸೇ ಎಲ್ಲವನ್ನೂ ಮಾಡಿಸುತ್ತೆ ತಾರುಣ್ಯದಲ್ಲಿ, ವೃದ್ಧಾಪ್ಯದಲ್ಲಿ ಅದೇ ವಯಸ್ಸೇ ಏನನ್ನೂ ಮಾಡಲು ಬಿಡುವುದಿಲ್ಲ.
ವಯಸ್ಸು ಆಗುವುದನ್ನು ತಡೆಯಬೇಕೆಂದರೆ ಅದಕ್ಕೆ ಸಾವೊಂದೇ ಮಾರ್ಗ
ವಯಸ್ಸಿಗಿಂತ ಮನಸ್ಸು ಮುಖ್ಯವೆಂಬುದು ವಯಸ್ಸಾದ ಮೇಲೆ ತಿಳಿಯುತ್ತದೆ.
ಚಿಕ್ಕ ವಯಸ್ಸಿನಲ್ಲಿ ಮಾಡಲಾಗದ್ದನ್ನೆಲ್ಲ ದೊಡ್ಡವರಾದ ಮೇಲೆ ಮಾಡಬಹುದು, ಆದರೆ ಇದರ ಉಲ್ಟಾ ಅಸಾಧ್ಯ
ವಯಸ್ಸಿನ ನಿರ್ಬಂಧವಿಲ್ಲದ್ದು ಸಾವಿಗೆ ಮಾತ್ರ
ಆಯುಸ್ಸಿನ ಲೆಕ್ಕಾಚಾರ
-ವಿಶ್ವನಾಥ ಸುಂಕಸಾಳ
ಭಾನುವಾರ, ನವೆಂಬರ್ 22, 2015
ಅಮ್ಮನ ಕೈತುತ್ತು
ಗಮ್ಮತ್ತಮ್ಮ ಗಮ್ಮತ್ತು
ಗಮಗಮಗಮಿಸುವ ಗಮ್ಮತ್ತು//
ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು/೧/
ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/
ಪ್ರಣತಿಯ ನಿರ್ಮಲ ಸಿಹಿಮುತ್ತು
ಅಮ್ಮನ ನೆನಪನು ತರುತಿತ್ತು
ನನ್ನ ಗೌರವದ ಒಳಗುಟ್ಟು
ಅಮ್ಮನು ಕೊಟ್ಟ ಸಂಪತ್ತು/೩/
ಭವಭಾರದ ಸಾಲಕೆ ತಲೆಕೊಟ್ಟು
ಮುರಿಯಿತು ಅಮ್ಮನ ನಡುಕಟ್ಟು
ಬಾರವು ಬೆಳೆಯಿತು ದುಪ್ಪಟ್ಟು
ಸಾಲವೆ ಅಮ್ಮನ ಕೊಂದಿತ್ತು/೪/
ಹೇಳುವೆ ಕೇಳಿ ಈ ಗುಟ್ಟು
ಸಾಲವೆ ದುಃಖದ ತಲೆಕಟ್ಟು
ಯಾರಿಗು ಬೇಡ ಈ ಕುತ್ತು
ಅಮ್ಮನು ಇಲ್ಲದ ಆಪತ್ತು/೫/
ಆಪತ್ತಮ್ಮ ಆಪತ್ತು
ಸಾಲವು ನಮಗೆ ಆಪತ್ತು//
ಶುಕ್ರವಾರ, ನವೆಂಬರ್ 20, 2015
ಬಣ್ಣದ ತಗಡಿನ ತುತ್ತೂರಿ
- ೩೧-೭-೨೦೧೨
ಬಣ್ಣದ ತಗಡಿನ
ತುತ್ತೂರಿ
ಕಾಸಿಗೆ ಕೊಂಡನು
ಕಸ್ತೂರಿ ||೧||
ಸರಿಗಮ ಪದನಿಸ
ಊದಿದನು
ಸನಿದಪ ಮಗರಿಸ
ಊದಿದನು||೨||
ತನಗೇ ತುತ್ತುರಿ ಇದೆಯೆಂದ,
ಬೇರಾರಿಗು ಅದು
ಇಲ್ಲೆಂದ, ||೩||
ಕಸ್ತುರಿ ನಡೆದನು
ಬೀದಿಯಲಿ,
ಜಂಬದ ಕೋಳಿಯ
ರೀತಿಯಲಿ,||೪||
ತುತ್ತುರಿಯೂದುತ ಕೊಳದ
ಬಳಿ,
ನಡೆದನು ಕಸ್ತುರಿ ಸಂಜೆಯಲಿ. ||೫||
ಜಾರಿತು ನೀರಿಗೆ
ತುತ್ತೂರಿ
ಗಂಟಲು ಕಟ್ಟಿತು ನೀರೂರಿ||೬||
ಸರಿಗಮ ಊದಲು
ನೋಡಿದನು
ಗಗಗಗ ಸದ್ದನು
ಮಾಡಿದನು ||೭||
ಬಣ್ಣವು ನೀರಿನ
ಪಾಲಾಯ್ತು
ಬಣ್ಣದ ತುತ್ತುರಿ ಬೋಳಾಯ್ತು ||೮||
ಬಣ್ಣದ ತುತ್ತುರಿ ಹಾಳಾಯ್ತು
ಜಂಬದ ಕೋಳಿಗೆ
ಗೋಳಾಯ್ತು||೯||
ಜಿ.ಪಿ ರಾಜರತ್ನಂ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...