ತಮ್ಮ ಮಕ್ಕಳಲ್ಲಿರುವ ದೋಷಗಳನ್ನು ನಾಶಗೊಳಿಸಿ ಸದ್ಗುಣಗಳನ್ನು
ತರಲು ಸಹಾಯ ಮಾಡುವರೇ ನಿಜವಾದ ಪಾಲಕರಾಗಿದ್ದಾರೆ. ಪಾಲಕರು ಅಂತರ್ಮುಖರಾಗಿ 'ನಾವು ಮಕ್ಕಳಿಗೆ
ನಿಜವಾದ ಶಿಕ್ಷಣವನ್ನು ನೀಡುತ್ತಿದ್ದೇವೆಯೇ?' ಎಂಬುದನ್ನು ಆಲೋಚಿಸಬೇಕು. ತಮ್ಮ ಮಕ್ಕಳನ್ನು
ಜೀವನದಲ್ಲಿ ಸದ್ಗುಣಿಯನ್ನಾಗಿ ಮಾಡುವುದು ಪಾಲಕರ ಧರ್ಮವಾಗಿದೆ. ನಾವು ಭೂತಕಾಲದ ವಿಚಾರದಲ್ಲಿ
ಮಗ್ನರಾಗಿರುವುದರಿಂದ ನಮ್ಮ ಹಾಗೂ ಮಕ್ಕಳೊಂದಿಗೆ ಉತ್ತಮ ಸಂವಾದ ಆಗಲು ಸಾಧ್ಯವಾಗುವುದಿಲ್ಲ.
‘ನಿನಗೆ ಏನೂ ಬರುವುದಿಲ್ಲ, ನೀನು ಯಾವುದಕ್ಕೂ ಉಪಯೋಗವಿಲ್ಲ’ ಎಂಬ ನಕಾರಾತ್ಮಕ ಮಾತುಗಳಿಂದ ಮಕ್ಕಳ
ಮನಸ್ಸಿನ ಮೇಲೆ ಗಾಯವಾಗುತ್ತದೆ. ಒಂದು ವೇಳೆ ದೇಹದ ಮೇಲೆ ಮಾಡಿದ ಗಾಯವು ಗುಣವಾದರೂ ಮನಸ್ಸಿನ
ಗಾಯವನ್ನು ಗುಣಪಡಿಸಲು ನಮ್ಮಿಂದ ಸಾಧ್ಯವಿಲ್ಲ. ಆದುದರಿಂದ ಮಾತನಾಡುವಾಗ ಸಕಾರಾತ್ಮಕವಾಗಿ
ಮಾತನಾಡಬೇಕು.
ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಅತೀವ ಭಯ, ಆತಂಕಗಳು ಮನೆಮಾಡುವುದು ಸಹಜ. ಇಂತಹ ಸಮಯದಲ್ಲಿ ಪೋಷಕರು ಮಕ್ಕಳ ಮೇಲೆ ನೀನು ಹೆಚ್ಚು ಅಂಕಗಳಿಸಬೇಕು/gÁåAPï ಪಡೆಯಲೇಬೇಕೆನ್ನುವ ವಿನಾಕಾರಣ ಒತ್ತಡವನ್ನ ಹಾಕುವ ಬದಲಿಗೆ ಮಕ್ಕಳಿಗೆ ಆತ್ಮವಿಶ್ವಾಸ, ಧೈರ್ಯತುಂಬಿ, ಅವರನ್ನು ಪ್ರೋತ್ಸಾಹಿಸುವುದು ಅತ್ಯಾಗತ್ಯವಾಗಿದೆ. ಅವರೊಂದಿಗೆ ಸ್ವಲ್ಪ ಕಾಲವನ್ನು ವ್ಯಯಿಸಿ ಸುಲಭವಾಗಿ ಅರ್ಥವಾಗುವಂತೆ ವಿಷಯಗಳನ್ನು ತಿಳಿಸಬೇಕು. ಕಷ್ಟವಾದ ಪಠ್ಯಗಳು / ವಿಷಯಗಳನ್ನು ಹೇಗೆ ಗ್ರಹಿಸಬೇಕೆನ್ನುವುದನ್ನು ತಿಳಿಸಲು ತಜ್ಞರು / ವಿದ್ವಾಂಸರು / ಪರಿಣಿತರೊಂದಿಗೆ ಮಕ್ಕಳನ್ನು ಭೇಟಿಮಾಡಿಸಿ, ಅವರ ಸಂದೇಶಗಳನ್ನು ನಿವಾರಿಸಬೇಕು. ಈ ಮೂಲಕ ಮಕ್ಕಳ ಗೆಲ್ಲುವಿನಲ್ಲಿ ತಾವು ಸಹ ಭಾಗಿಯಾಗಬೇಕಾಗಿರುವುದು ಇಂದಿನ ಅಗತ್ಯ.
-ಕೆ.ಟಿ.ಆರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.