- ೩೧-೭-೨೦೧೨
ಬಣ್ಣದ ತಗಡಿನ
ತುತ್ತೂರಿ
ಕಾಸಿಗೆ ಕೊಂಡನು
ಕಸ್ತೂರಿ ||೧||
ಸರಿಗಮ ಪದನಿಸ
ಊದಿದನು
ಸನಿದಪ ಮಗರಿಸ
ಊದಿದನು||೨||
ತನಗೇ ತುತ್ತುರಿ ಇದೆಯೆಂದ,
ಬೇರಾರಿಗು ಅದು
ಇಲ್ಲೆಂದ, ||೩||
ಕಸ್ತುರಿ ನಡೆದನು
ಬೀದಿಯಲಿ,
ಜಂಬದ ಕೋಳಿಯ
ರೀತಿಯಲಿ,||೪||
ತುತ್ತುರಿಯೂದುತ ಕೊಳದ
ಬಳಿ,
ನಡೆದನು ಕಸ್ತುರಿ ಸಂಜೆಯಲಿ. ||೫||
ಜಾರಿತು ನೀರಿಗೆ
ತುತ್ತೂರಿ
ಗಂಟಲು ಕಟ್ಟಿತು ನೀರೂರಿ||೬||
ಸರಿಗಮ ಊದಲು
ನೋಡಿದನು
ಗಗಗಗ ಸದ್ದನು
ಮಾಡಿದನು ||೭||
ಬಣ್ಣವು ನೀರಿನ
ಪಾಲಾಯ್ತು
ಬಣ್ಣದ ತುತ್ತುರಿ ಬೋಳಾಯ್ತು ||೮||
ಬಣ್ಣದ ತುತ್ತುರಿ ಹಾಳಾಯ್ತು
ಜಂಬದ ಕೋಳಿಗೆ
ಗೋಳಾಯ್ತು||೯||
ಜಿ.ಪಿ ರಾಜರತ್ನಂ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.