ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಆಗಸ್ಟ್ 01, 2016

ಕುಮುದ್ವತಿ ನದಿ (Kumudvati River)

ಕುಮುದ್ವತಿ ನದಿಗೆ ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥ ಮತ್ತು ಕುಂಭತೀರ್ಥ ಎಂಬ ನೀರಿನ ಚಿಲುಮೆಗಳೇ ಕುಮುದ್ವತಿ ಉಗಮ ಸ್ಥಾನಗಳು.
ಶಿವಗಂಗೆಯಿಂದ 11.25 ಕಿ.ಮೀ. ದೂರ ಈಶಾನ್ಯ ದಿಕ್ಕಿನತ್ತ ಹರಿದು ದೇವರಾಯನದುರ್ಗ ಸೇರುವ ಈ ನದಿ, ಅಲ್ಲಿಂದ ದಕ್ಷಿಣಾಭಿಮುಖವಾಗಿ 31.7 ಕಿ.ಮೀ. ದೂರದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸೇರುತ್ತದೆ.
ತನ್ನ 43 ಕಿ.ಮೀ. ಉದ್ದದ ಜಾಡಿನಲ್ಲಿ ಕುಮುದ್ವತಿ 378 ಚದರ ಕಿ.ಮೀ. ವಿಸ್ತೀರ್ಣದ ಜಲಾಯನ ಪ್ರದೇಶವನ್ನು ಸೃಷ್ಟಿಸಿದೆ. ಒಟ್ಟಾರೆ 72 ಕಿರು ಜಲಾನಯನಗಳ ಸಂಗಮದಿಂದ ಈ ಪ್ರದೇಶ ಸೃಷ್ಟಿಯಾಗಿದೆ. ಮಹದೇವಪುರ, ಕೆಂಪಹಳ್ಳಿ, ಕಾವಲಪಾಳ್ಯ, ಹೇಮಾಪುರ, ಗುಂಡೇನಹಳ್ಳಿ, ಗಂಗಭೈರಪ್ಪನಪಾಳ್ಯ, ತ್ಯಾಮಗೊಂಡ್ಲು, ತೊರೆಹೊಸಪಾಳ್ಯ, ತೆಪ್ಪದಬೇಗೂರು, ತಾವರೆಕೆರೆ, ಶ್ರೀನಿವಾಸಪುರ, ಪಲ್ಲರಹಳ್ಳಿ, ಮೊಂಡಿಗೆರೆ, ಮಾಕನಕುಪ್ಪೆ ಈ ನದಿಯ ಮುಖ್ಯ ಜಲಾನಯನ ಪ್ರದೇಶಗಳಾಗಿವೆ.
ಅರ್ಕಾವತಿ ಮತ್ತು ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಸ್ವರಾಜ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್, ನಾಗದಳ, ಜಲಚೇತನ, ರೈತ ಸಂಘ, ಸದ್ಗುರು ಯೋಗಿ ನಾರಾಯಣ ಟ್ರಸ್ಟ್ ಮೊದಲಾದ ಸಂಘಟನೆಗಳು ನದಿಗಳ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು