ಶನಿವಾರ, ಆಗಸ್ಟ್ 20, 2016

ಅವರೆ ನಮ್ಮ ಗಾಂಧಿ.. (My Gandi)
ಬಲಗೈಯಲ್ಲಿ ಗೀತೆ

ಎಡಗೈಯಲ್ಲಿ ರಾಟೆ

ಹಿಡಿದವರ್ಯಾರು ಗೊತ್ತೆ

ಅವರೆ ನಮ್ಮ ಗಾಂಧಿ 

ಶ್ರೀ ಮಹಾತ್ಮ ಗಾಂಧಿಕೈಯಲ್ಲೊಂದು ಕೋಲು

ಅವರಿಗಿಲ್ಲಾ ಸೋಲು

ಅಂತಹವರ್ಯಾರು ಗೊತ್ತೆ
ಅವರೆ ನಮ್ಮ ಗಾಂಧಿ 

ಶ್ರೀ ಮಹಾತ್ಮ ಗಾಂಧಿಮಕ್ಕಳಿಗೆಲ್ಲಾ ತಾತ

ವಿಶ್ವಕ್ಕೆಲ್ಲಾ ಧಾತ

ಅಂತಹವರ್ಯಾರು ಗೊತ್ತೆ

ಅವರೆ ನಮ್ಮ ಗಾಂಧಿ 

ಶ್ರೀ ಮಹಾತ್ಮ ಗಾಂಧಿ

ಕಾಮೆಂಟ್‌ಗಳಿಲ್ಲ: