ಬುಧವಾರ, ಆಗಸ್ಟ್ 10, 2016

ನುಡಿಮುತ್ತು - 37 (quotes - 37)"ಜೀವನದಲ್ಲಿ ನೀನೊಬ್ಬನೇ ಏನಾದರೂ ಸಾಧಿಸಿ ಮೇಲೆ ಬರುವುದಕ್ಕಿಂತ ಹತ್ತು ಜನರನ್ನ ಮೇಲೆ ತಂದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ." 

"ಜೀವನದಲ್ಲಿ ಎಂದೂ ಯಾರಿಂದಲೂ ಸಹಾಯದ ಅಪೇಕ್ಷೆಯನ್ನ ಇಡಬಾರದು. ಯಾಕೆಂದರೆ ನಾವು ಕಷ್ಟದಲ್ಲಿ ಇದ್ದಾಗ ಯಾರಾದರೂ ಸಹಾಯ ಮಾಡದಿದ್ದರೆ ಅದಕ್ಕಿಂತ ದೊಡ್ಡ ಯಾತನೆ ಬೇರೊಂದಿಲ್ಲ." 

"ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೆ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೊಳ್ಳಿ. ದೇವರ ಕೊಡುವ ವರಕ್ಕಿಂತ ಹತ್ತು ಜನರನ್ನ ಉದ್ಧಾರ ಮಾಡಿದ ಪುಣ್ಯ ಎಷ್ಟೋ ದೊಡ್ಡದು" 

"ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ, ಆದರೆ ಯಾವಾಗ ವಸ್ತುವಿನ ಬೆಲೆ ತಿಳಿಯುತ್ತದೋ ಆಗ ಅದು ಸುಲಭವಾಗಿ ಸಿಗುವುದಿಲ್ಲ."ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ. ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಆಗದು.-ಸ್ವಾಮಿ ವಿವೇಕಾನಂದ.

ಏಳು ಎದ್ದೇಳು ನಿನಗಾಗಿ ಕಾಯುತ್ತಿದೆ ಒಂದು ಸುಂದರ ದಿನ .
ಒಳ್ಳೆಯ ಗುರಿಯತ್ತ ನಡೆ .ನಿರ್ಧಿಷ್ಟತೆಯ ಜೊತೆ ಓಡು ಸಾಧನೆಗಳ ಜೊತೆ ಹಾರಾಡು
ನಿನಗಾಗಿ ಕಾಯುತ್ತಿರುವ ಸುಂದರ ಬದುಕಿದೆ ಏಳು ಎದ್ದೇಳು
- ಸ್ವಾಮಿ ವಿವೇಕಾನಂದ 

ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ, ಮನಸ್ಸನ್ನು ಗೆಲ್ಲುವವನು ವೀರ-ಗೌತಮ ಬುದ್ದ 

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ - ವಿಚಾರ ಮಾತ್ರ. --ಸ್ವಾಮಿ ವಿವೇಕಾನಂದ 

ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಿಮ್ಮನ್ನು ಹಿಂಬಾಲಿಸಲಿದೆ-ಭಗವಾನ್ ಬುದ್ಧ

ಶಾಂತಿ ನಮ್ಮೊಳಗಿನಿಂದ ಬರುವಂತಹದ್ದು. ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.- ಭಗವಾನ್ ಬುದ್ಧ 


ಕಾಮೆಂಟ್‌ಗಳಿಲ್ಲ: