ಭಾನುವಾರ, ಜನವರಿ 24, 2016

ಪೀಕಲಾಟ

 • ಪೀಕ್ ಅವರ್ ಟ್ರಾಫಿಕ್ನಲ್ಲಿ ಸಿಕ್ಕಿಕೊಂಡವರ ಕತೆ
 • ಫೇಕ್ ಕಂಪನಿಗಳಲ್ಲಿ ಹಣ ತೊಡಗಿಸಿ ಕಳೆದುಕೊಂಡಾಗ...
 • ಪೀ... ಪೀ... ಪೀ... ಹಾರ್ನ್ ಕೇಳಿ ಕೇಳಿ ಆಗುವ ಸಂಕಟ
 • 'ಪಾಕ' ಮಾಡಲು ಬರದಿದ್ದರೂ ಮಾಡಬೇಕಾದ ಸಂದರ್ಭ ಬಂದಾಗ
 • ಕುಡಿದವರೇ ಲೋಟ ತೊಳೆದಿಡುವ ಸಂದರ್ಭ ಬಂದಾಗ ಉಂಟಾಗುವ ತೊಳಲಾಟ
 • ಅತ್ತ ಹೆಂಡತಿ, ಇತ್ತ ಪ್ರೇಯಸಿ
 • ಬಾಸ್ಗೆ ಆಟ; ನೌಕರನಿಗೆ ಪೀಕಲಾಟ
 • ಸಮಯಕ್ಕೆ ಬದ್ಧನಾದವನಿಗೆ ಮಲಬದ್ಧತೆಯೂ ಇದ್ದುಬಿಟ್ಟರೆ ಅವನು ಎದುರಿಸೋದು ಇದೇ
 • ಕ್ರಿಕೆಟ್ ಮ್ಯಾಚ್ ಇರುವ ದಿನವೇ ಪರೀಕ್ಷೆಗಾಗಿ ಓದುವ ಸಂದರ್ಭದಲ್ಲಿ
 • ಇರುವ ಒಂದೇ ಒಂದು ಸೀಟನ್ನೂ ನಿಮ್ಮ ಲೆಕ್ಚರರ್ಗೆ ಬಿಟ್ಟುಕೊಡಬೇಕಾದ ಸಂದರ್ಭ ಒದಗಿದಾಗ
 • ಪೆಚ್ಚು ಮೋರೆ ಹಾಕಬೇಕಾದಂಥ ಸಂದರ್ಭಕ್ಕೂ ಇದೇ ಹೆಸರು
 • ಪೇಟ ದೊಡ್ಡದು, ತಲೆ ಸಣ್ಣದು ಆದಾಗ ಅನುಭವಿಸುವ ಪೇಚಾಟ
 • ಹೆಂಡತಿ ತವರಿಗೆ ಹೋದಾಗಲೇ ನೆಂಟರು ಬಂದರೆ...
 • ಎಷ್ಟು ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಲೇ ಹೋದಾಗ ಆಗುವ ತಾಕಲಾಟ

ಕಾಮೆಂಟ್‌ಗಳಿಲ್ಲ: