fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಜನವರಿ 14, 2016

ಇಂದ್ರಕೀಲ ಪರ್ವತ

*ಟಿ.ಎಂ. ಸತೀಶ್
Indrakeela parvatha
ಅರ್ಜುನನ ದೀರ್ಘಕಾಲ ತಪವನ್ನಾಚರಿಸಿ, ಕಿರಾತರೂಪಿ ಶಿವನೊಂದಿಗೆ ಹೋರಾಡಿ ಪಾಶುಪತಾಸ್ತ್ರವೆಂಬ ದಿವ್ಯ ಅಸ್ತ್ರ ಪಡೆದ ಕಥೆ ನಮ್ಮೆಲ್ಲರಿಗೂ ಗೊತ್ತು. ಅರ್ಜುನ ದ್ವಾಪರದಲ್ಲಿ ತಪವನ್ನಾಚರಿಸಿದ ಆ ದಿವ್ಯಕ್ಷೇತ್ರವೇ ಇಂದ್ರಕೀಲ ಪರ್ವತ.

ಆ ಇಂದ್ರಕೀಲ ಪರ್ವತ ಇರುವುದು ಎಲ್ಲಿ? ಹಲವರು ಹೇಳುವುದು ಈ ಪರ್ವತ ಹಿಮಾಲಯದಲ್ಲಿದೆ ಎಂದು. ಆದರೆ, ಇಲ್ಲಿ ಈ ಪ್ರಶಾಂತಪುಣ್ಯಧಾಮ ಇರುವುದು ಕರ್ನಾಟಕದಲ್ಲಿ ಎಂದು ಕೊಪ್ಪಳದ ಜನ ಹೇಳುತ್ತಾರೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದೂ ಪ್ರತಿಪಾದಿಸುತ್ತಾರೆ.
ಕೊಪ್ಪಳ ನಗರದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟವೇ ಇಂದ್ರಕೀಲ  ಪರ್ವತ. ಇಲ್ಲಿನ ಮಾಲಿ ಮಲ್ಲಪ್ಪನ ಬೆಟ್ಟದಲ್ಲಿ ಬೃಹತ್ ಶಿಲಾಯುಗದ ಶಿಲಾತೊಟ್ಟಿಗಳು (ಡಾಲ್ಮೆನ್ಸ್) ದೊರೆತಿದ್ದು, ಪಾಲ್ಕಿಗುಂಡು ಬೆಟ್ಟದ ನಡುವಿನ ಪ್ರದೇಶ ಪಾಂಡವರ ವಠಾರ ಎಂಬ ಹೆಸರು ಪಡೆದಿರುವುದೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ.
ಪ್ರಕೃತಿ ರಮಣೀಯವಾದ ಬೆಟ್ಟದಲ್ಲಿ ಹಲವು ಪುಣ್ಯತೀರ್ಥಗಳಿದ್ದು, ಈ ಪ್ರಶಾಂತ ಪ್ರದೇಶವೇ ತಪಸ್ಸಿಗೆ ಸೂಕ್ತವೆಂದು ಮಧ್ಯಮಪಾಂಡವ ಇಲ್ಲಿ ದೀರ್ಘ ಧ್ಯಾನ ನಿರತನಾದನಂತೆ. ಧ್ಯಾನ ಮುಗಿಸಿ ಅರ್ಜುನ ಬೇಟೆಗೆ ಹೊರಟಾಗ, ಭಕ್ತನನ್ನು ಪರೀಕ್ಷಿಸಲು ಪಾರ್ವತಿ ಸಹಿತನಾಗಿ ಬೇಡನ ರೂಪದಲ್ಲಿ ಬಂದ ಪರಶಿವ, ಅರ್ಜುನ ಬಾಣಬಿಟ್ಟ ಮೃಗಕ್ಕೆ ತಾನೂ ಬಾಣ ಬಿಟ್ಟು, ಅದು ತನ್ನ ಬೇಟೆ ಎಂದು ಅರ್ಜುನನೊಂದಿಗೆ ತಗಾದೆ ತೆಗೆದು ಹೋರಾಡುತ್ತಾನೆ.
ನೆಲಕ್ಕುರುಳಿದ ಅರ್ಜುನ ತಾನು ನಿತ್ಯ ಪೂಜಿಸುತ್ತಿದ್ದ ಶಿವಲಿಂಗದ ಬಳಿ ಹೋಗಿ ಬೀಳುತ್ತಾನೆ. ಆಗ ಪಕ್ಕದಲ್ಲಿದ್ದ ಗಿಡದಿಂದ ಮಲ್ಲೆ ಹೂವನ್ನು ಕಿತ್ತು ಅರ್ಜುನ ಲಿಂಗದ ಮೇಲಿಟ್ಟು ಬೇಡನೊಂದಿಗೆ ಹೋರಾಡಲು ತಿರುಗಿದಾಗ ತಾನಿಟ್ಟ ಮಲ್ಲೆ ಪುಷ್ಪ ಬೇಡನ ಮುಡಿಯನ್ನಲಂಕರಿಸಿರುತ್ತದೆ. ಆಗ ಬಂದಿರುವ ಬೇಡ ಸಾಕ್ಷಾತ್ ಶಿವನೆಂದು ತಿಳಿದು ಅರ್ಜುನ ಕ್ಷಮೆ ಬೇಡುತ್ತಾನೆ. ಭಕ್ತನಿಗೆ ಒಲಿದ ಶಿವ ಪಾಶುಪತಾಸ್ತ್ರ ನೀಡುತ್ತಾನೆ.
ಅಂದು ಅರ್ಜುನ ಮಲ್ಲೆ ಹುವಿನಿಂದ ಪೂಜಿಸಿದ ಶಿವಲಿಂಗ ಮಲ್ಲೇಶ್ವರ ಎಂದಾಯಿತು ಎಂಬುದು ಜನರ ನಂಬಿಕೆ. ಇಲ್ಲಿರುವ ಲಿಂಗಕ್ಕೆ ಪೂಜಿಸಿದರೆ ಮಳೆಯಾಗುತ್ತದೆ ಎಂದು ಪ್ರತೀತಿ, ಹೀಗಾಗೇ ಇದಕ್ಕೆ ಮಳೆ ಮಲ್ಲೇಶ್ವರ ಎಂಬ ಹೆಸರು ಬಂದಿದೆ.
ಇಲ್ಲಿ ಮಳೆ ಮಲ್ಲೇಶ್ವರ ದೇವಾಲಯವಿದೆ. ಇಲ್ಲಿರುವ ಕೊಳ ಸದಾ ನೀರಿನಿಂದ ತುಂಬಿರುತ್ತದೆ. ಬರದ ನಾಡು ಕೊಪ್ಪಳದ ಈ ಕೊಳ ಯಾವುದೇ ಕಾಲದಲ್ಲೂ ಬತ್ತದೇ ಇರುವುದು ವಿಶೇಷ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು