ಶುಕ್ರವಾರ, ಜನವರಿ 22, 2016

ಅಮ್ಮನ ನೆನಪು ಕಾಡುತ್ತಿದೆ...ಎಂಥಾ ಚೆಂದ ನನ್ನ ಅಮ್ಮ
ನೀವು ಇವಳ ಬಲ್ಲಿರೆ...
ಇವಳ ಮಾತು ಇವಳ ಮಮತೆ
ಮಧುರ ನೆನಪ ಚೆಲ್ಲಿರೆ...

ನಾನಿಹೆನು ಬಲುದೂರ
ಮರಳಿಬರಲು ಕಾತರ...
ಅಮ್ಮ ನಿನಗೆ ಹೇಳಲೇನು
ಮನದಲೆಷ್ಟು ಬೇಸರ...

ಅಮ್ಮ ನಿನ್ನ ಮಾತೇ ಮುತ್ತು
ನನ್ನ ಮನದ ತುಂಬೆಲ್ಲಾ...
ಕಾಡಿದೆ ನಿನ್ನ ಕೈತುತ್ತು
ನೀ ತುಂಬಿರುವೆ ಮನದಲೆಲ್ಲಾ...

ಅಮ್ಮ ನಿನ್ನ ನೆನಪು ನನ್ನ
ಪದೇ ಪದೇ ಕಾಡಿದೆ...
ಕಣ್ಣಂಚಿನಲಿ ಜಿನುಗುತಿದೆ
ನೆನಪ ಬಿಂದು ನಿನ್ನದೇ...
                                                 Posted by Prashanth Urala. G

ಕಾಮೆಂಟ್‌ಗಳಿಲ್ಲ: