ಬುಧವಾರ, ಏಪ್ರಿಲ್ 05, 2017

ಬೆಳ್ಳುಳ್ಳಿ ಜ್ಯೂಸ್

ಬೆಳ್ಳುಳ್ಳಿಯೆಂದರೆ ಹೆಚ್ಚಿನವರಿಗೆ ಆಗಲ್ಲ. ಯಾಕೆಂದರೆ ಅದರ ಘಾಟು ಹಿಡಿಸಲ್ಲ. ಆದರೆ ಇದರಲ್ಲಿರುವ ಹಲವಾರು ರೀತಿಯ ಆರೋಗ್ಯ ಗುಣಗಳನ್ನು ನಾವು ತಿರಸ್ಕರಿಸುವಂತಿಲ್ಲ. ಬೆಳ್ಳುಳ್ಳಿಯ ಘಾಟು ವಾಸನೆಯನ್ನು ಸಹಿಸಿಕೊಂಡು ಅದನ್ನು ಬಳಸಿಕೊಂಡರೆ ಅದರಿಂದ ಆಗುವಂತಹ ಆರೋಗ್ಯ ಲಾಭಗಳು ಅಪಾರ. ಹಣ್ಣುಗಳ ಜ್ಯೂಸ್ ನ್ನು ನಾವು ಬಳಸುತ್ತೇವೆ. ಆದರೆ ಬೆಳ್ಳುಳ್ಳಿ ಜ್ಯೂಸ್ ನ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ? ಬೆಳ್ಳುಳ್ಳಿಯ ಕಮಟು ವಾಸನೆಗೆ ಮುಖ ಸಿಂಡರಿಸಬೇಡಿ!
ಹೌದು, ಬೆಳ್ಳುಳ್ಳಿ ಜ್ಯೂಸ್ ನಿಂದ ಆಗುವಂತಹ ಆರೋಗ್ಯ ಲಾಭಗಳು ಅಪಾರ. ಬೆಳ್ಳುಳ್ಳಿ ಜ್ಯೂಸ್ ಮಾಡಬೇಕಾದರೆ ಕೆಲವು ಬೆಳ್ಳುಳ್ಳಿಯನ್ನು ಸಿಪ್ಪೆಯನ್ನು ತೆಗೆದು ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.
ಇದರ ರಸವನ್ನು ತೆಗೆದು ಒಂದು ಡಬ್ಬದಲ್ಲಿ ಹಾಕಿ ಪ್ರಿಡ್ಜ್ ನಲ್ಲಿ ಇಟ್ಟರೆ ದಿನಾಲೂ ಇದನ್ನು ಬಳಸಬಹುದು. ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಗುಣಗಳಿವೆಯೇ? ನಂಬಿಕೆಯೇ ಬರುತ್ತಿಲ್ಲ!
ಪ್ರತೀ ದಿನ ಒಂದು ಚಮಚ ಜ್ಯೂಸ್ ಅನ್ನು ಸೇವಿಸಿ. ತರಕಾರಿ ಜ್ಯೂಸ್ಗೆ ಇದನ್ನು ಹಾಕಿಕೊಂಡು ಕುಡಿಯಬಹುದು. ಆದರೆ ಅಲ್ಸರ್ನಂತಹ ಆರೋಗ್ಯ ಸಮಸ್ಯೆಯಿರುವವರು ಈ ಜ್ಯೂಸ್ ಅನ್ನು ಕುಡಿಯಬಾರದು. ಬೆಳ್ಳುಳ್ಳಿ ಜ್ಯೂಸ್ ಅನ್ನು ಕುಡಿಯುವ ಮೊದಲು ವೈದ್ಯರಿಂದ ಸಲಹೆ ಪಡೆಯಿರಿ. ಬೆಳ್ಳುಳ್ಳಿ ಜ್ಯೂಸ್ನ ಲಾಭಗಳು ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ
ಗಂಟಲು ಕಟ್ಟಿದ್ದರೆ ಅಥವಾ ಕಫವಿದ್ದರೆ ಒಂದು ಚಮಚ ಬೆಳ್ಳುಳ್ಳಿ ಜ್ಯೂಸ್ ಅನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿಯಿರಿ.
ನೀವು ನಿಯಮಿತವಾಗಿ ಬೆಳ್ಳುಳ್ಳಿ ಜ್ಯೂಸ್ ಕುಡಿದರೆ ಮಟ್ಟವು ಕುಸಿಯುವುದು. ಇದು ಅಪಧಮನಿಗಳಿಗೆ ಒಳ್ಳೆಯದು.
ಒಂದು ಚಮಚ ಬೆಳ್ಳುಳ್ಳಿ ಜ್ಯೂಸ್ ಅನ್ನು ಹಾಲಿಗೆ ಹಾಕಿಕೊಂಡು ನಿಯಮಿತವಾಗಿ ಕುಡಿದರೆ ಬಂಜೆತನ ನಿವಾರಣೆಯಾಗುವುದು.
ಒಂದು ಚಮಚ ಬೆಳ್ಳುಳ್ಳಿ ಜ್ಯೂಸ್ ಮತ್ತು ಕೆಲವು ಹನಿ ಜೇನನ್ನು ಬೆರೆಸಿಕೊಂಡು ಕುಡಿದರೆ ಅಸ್ತಮಾ ಲಕ್ಷಣಗಳನ್ನು ನಿಯಂತ್ರಿಸಬಹುದು.
ಯಾವುದೇ ಕೀಟಗಳು ಅಥವಾ ನೋಣಗಳು ಕಡಿದರೆ ಆ ಜಾಗಕ್ಕೆ ಸ್ವಲ್ಪ ಬೆಳ್ಳುಳ್ಳಿ ರಸವನ್ನು ಹಚ್ಚಿಕೊಳ್ಳಿ.
ಬೆಳ್ಳುಳ್ಳಿ ಜ್ಯೂಸ್ ನ ರಸವನ್ನು ತಲೆ ಬುರುಡೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಬೆಳವಣಿಗೆಯಾಗುವುದು.
ಒಂದು
ಚಮಚ ಬೆಳ್ಳುಳ್ಳಿ ರಸವನ್ನು ಕುಡಿದರೆ ಅದು ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿ ರಸವನ್ನು ಕುಡಿಯುವ ಮೊದಲು ವೈದ್ಯರಿಂದ ಸಲಹೆ ಪಡೆದುಕೊಂಡರೆ ಉತ್ತಮ.

ಕಾಮೆಂಟ್‌ಗಳಿಲ್ಲ: