ಸೋಮವಾರ, ಅಕ್ಟೋಬರ್ 31, 2016

ನನ್ನ ಕನ್ನಡ ಭಾಷೆ

ನಾನೇಳುವ ಬೆಳಗಿನ ಹೊಂಗಿರಣವಾಗಲಿ ಕನ್ನಡ
ನಾ ನಡೆಯುವ ದಾರಿಯ ಗುರಿಯಾಗಲಿ ಕನ್ನಡ.
ನಾ ನುಡಿಯುವ ತೊದಲು ಪದವಾಗಲಿ ಕನ್ನಡ
ನಾ ಕೇಳುವ ಸುಮಧುರ ಧ್ವನಿಯಾಗಲಿ ಕನ್ನಡ.  

ನಾ ಸವಿಯುವ ರುಚಿಯಾಗಲಿ ಕನ್ನಡ
ನಾ ದುಡಿಯುವ ಶಕ್ತಿಯಾಗಲಿ ಕನ್ನಡ.
ನಾ ಕಟ್ಟುವ ಗುಡಿಯಾಗಲಿ ಕನ್ನಡ
ನಾ ಪೂಜಿಸುವ ದೇವರಾಗಲಿ ಕನ್ನಡ.

ನಾ ನೋಡುವ ಚೆಲುವಾಗಲಿ ಕನ್ನಡ
ನಾ ಬಾಳುವ ಬದುಕಾಗಲಿ ಕನ್ನಡ.
ನಾ ಪ್ರೀತಿಸುವ ಭಾಷೆಯಾಗಲಿ ಕನ್ನಡ
ನಾನುಸಿರಾಡುವ ಗಾಳಿಯಾಗಲಿ ಕನ್ನಡ.

ಒಂದೊಮ್ಮೆ ಉಸಿರು ನಿಂತು ಹೋದರೆ
ಈ ದೇಹಕ್ಕೆ ಒಡಲಾಗಲಿ ಕನ್ನಡ.
ನನ್ನ ಕನ್ನಡ ಹೆಮ್ಮರವಾಗಿ ಬೆಳೆಯಲಿ
ಆ ಮರಕ್ಕೆ ನನ್ನ ದೇಹ ಗೊಬ್ಬರವಾಗಲಿ
ಶರಣಬಸಪ್ಪಾ

ಕಾಮೆಂಟ್‌ಗಳಿಲ್ಲ: