fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಅಕ್ಟೋಬರ್ 14, 2016

ಮಂತ್ರಾಲಯದ ಗುರುರಾಯರು

* ಹೊಳೆನರಸೀಪುರ ಶಿವರಾಂ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ...

mantralaya temple,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಮಂಚಾಲೆ ಆಂಧ್ರಪ್ರದೇಶದಲ್ಲಿರುವ ಒಂದು ಪುಟ್ಟ ಊರು. ಆದರೆ, ಈ ಸ್ಥಳ ಗುರುರಾಯರ ಕೃಪೆಯಿಂದ ವಿಶ್ವಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಮಂಚಾಲೆ ಎಂಬುದು ಮಂತ್ರಾಲಯ ಕ್ಷೇತ್ರಕ್ಕಿದ್ದ ಹಿಂದಿನ ಹೆಸರು. ಈ ಪವಿತ್ರ ಪುಣ್ಯಸ್ಥಳದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಕಲಿಯುಗದ ಕಾಮಧೇನು ಗುರುರಾಘವೇಂದ್ರರು ಸಜೀವ ಬೃಂದಾವನಸ್ಥರಾಗಿದ್ದಾರೆ.
ಶ್ರೀರಾಘವೇಂದ್ರಸ್ವಾಮಿಗಳ ಅಲೌಕಿಕ, ಧಾರ್ಮಿಕ ತೇಜಸ್ಸು ಮತ್ತು ತಪೋಬಲ ಇಲ್ಲಿಗೆ ಭೇಟಿನೀಡುವ ಭಕ್ತರ ಮನೆ-ಮನವನ್ನು ಸದಾ ಬೆಳಗುತ್ತದೆ. ಗುರುರಾಯರ ಈ ತಪೋಭೂಮಿಗೊಮ್ಮೆ ಬಂದು ತಮ್ಮ ಜನ್ಮ ಸಾರ್ಥಕಪಡಿಸಿಕೊಳ್ಳಬೇಕೆಂದು ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ.
ದೇವರೆಂದರೆ ತಿರುಪತಿಯ ತಿಮ್ಮಪ್ಪ, ಗುರುಗಳೆದರೆ ಮಂತ್ರಾಲಯದ ರಾಘಪ್ಪ ಎನ್ನುವ ಭಕ್ತರು, ಸಜೀವವಾಗಿ ಬೃಂದಾವನದಲ್ಲಿ ತಪೋನಿರತರಾಗಿರುವ ಗುರುಗಳ ಪಾದಧೂಳಿನಿಂದ ಪವಿತ್ರವಾಗಿರುವ ಈ ಕ್ಷೇತ್ರಕ್ಕೆ ಬಂದು ಪಾವನರಾಗುತ್ತಾರೆ. ಜಾತಿ-ಮತ-ಬೇಧಗಳಿಲ್ಲದ ಈ ಸ್ಥಳಕ್ಕೆ ಆಗಮಿಸುವ ಭಕ್ತಕೋಟಿ ತುಂಗಾನದಿಯಲ್ಲಿ ಮಿಂದು ಮಂಚಾಲಮ್ಮನ ದರ್ಶನ ಮಾಡಿ, ಗುರುರಾಯರ ದರ್ಶನ ಮಾಡಿ ಧನ್ಯಭಾವದಿಂದ ತಮ್ಮೂರಿಗೆ ಮರಳುತ್ತಾರೆ.
Raghavendraswamy mutt,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುದೇಶಾದ್ಯಂತ ರಾಯರ ಮಠಗಳು : ಕೇವಲ ದಶಕಗಳ ಹಿಂದೆ ಕೇವಲ ಒಂದು ಧಾರ್ಮಿಕ ಕೇಂದ್ರವಾಗಿದ್ದ ಮಂತ್ರಾಲಯ ಇಂದು ಶೈಕ್ಷಣಿಕ ಕೇಂದ್ರವಾಗಿ, ಆರೋಗ್ಯದ ತಾಣವಾಗಿ, ಜ್ಞಾನವೈಜ್ಞಾನಿಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಶ್ರೀಮಠ ಒಂದು ಬೃಹತ್ ಸಂಸ್ಥೆಯಾಗಿ ಮಾರ್ಪಟ್ಟಿದೆ. ಮಠದ ವತಿಯಿಂದ ದೇಶದ ನಾನಾ ಮೂಲೆಗಳಲ್ಲಿ ೧೬೦ಕ್ಕೂ ಹೆಚ್ಚು ಮೃತ್ತಿಕಾ ಬೃಂದಾವನ ನಿರ್ಮಿಸಲಾಗಿದೆ. ಮೂಲಮಠದ ಆಡಳಿತದ ನಿಯಂತ್ರಣದಲ್ಲಿಯೇ ಕರ್ನಾಟಕ, ಆಂಧ್ರ, ಕಾಶಿ, ಬದರಿ, ದೆಹಲಿ, ಮುಂಬೈ ಸೇರಿದಂತೆ ನಾನಾ ಭಾಗಗಳಲ್ಲಿ ೩೪ ಶಾಖಾ ಮಠ ಸ್ಥಾಪಿಸಲಾಗಿದೆ.
ಈ ಎಲ್ಲ ಮಠಗಳೂ ಸುಸಜ್ಜಿತ ಕಾರ್ಯಾಲಯಗಳನ್ನು ಹೊಂದಿವೆ. ಈ ಮಠಗಳಿಗೆ ಮೂಲಮಠವೇ ಸಿಬ್ಬಂದಿಯ ನೇಮಕ ಮಾಡುತ್ತದೆ. ಮಠದ ಪರಂಪರೆಗನುಗುಣವಾಗಿ ಸಾಂಪ್ರದಾಯಿಕ - ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ. ಮಠಕ್ಕೆ ಹೊಂದಿಕೊಂಡಂತೆ ಕಲ್ಯಾಣಮಂಟಪಗಳನ್ನು ನಿರ್ಮಿಸಿದ್ದು, ಇಲ್ಲಿ ಧಾರ್ಮಿಕ - ಸಾಂಸ್ಕೃತಿಕ ಚಟುವಿಕೆಗಳೂ ಜರುಗುತ್ತವೆ. ಜ್ಞಾನಪ್ರಸಾರದ ಕೇಂದ್ರಗಳಾಗಿಯೂ ಇವು ಕೆಲಸ ಮಾಡುತ್ತವೆ. ದೇಶಾದ್ಯಂತ ಇಷ್ಟೊಂದು ಶಾಖೆಗಳನ್ನುಳ್ಳ ಏಕೈಕ ಮಠ ಇದಾಗಿದೆ.
ಊಟ - ವಸತಿ : ಮಂತ್ರಾಲಯದಲ್ಲಿ ಸುಸಜ್ಜಿತ ಸಂಸ್ಕೃತ ವಿದ್ಯಾಲಯ ರೂಪುಗೊಂಡಿದೆ, ಯಾತ್ರಾತ್ರಿಗಳಿಗಾಗಿ ಸುಸಜ್ಜಿತ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಯಾತ್ರಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಸುವ್ಯವಸ್ಥಿತ ಮತ್ತು ಅತ್ಯಾಧುನಿಕ ಆಸ್ಪತ್ರೆಯನ್ನು ಶ್ರೀಮಠವೇ ಆರಂಭಿಸಿದೆ. ಭಕ್ತಾದಿಗಳಿಗೆ ಶುದ್ಧವಾದ ಕುಡಿಯುವ ನೀರು ಪೂರೈಸಲು ಜಲಶುದ್ಧೀಕರಣ ಘಟಕಗಳನ್ನೂ ಸ್ಥಾಪಿಸಲಾಗಿದೆ. ಭಕ್ತಾದಿಗಳಿಗೆ ಊಟದ ವ್ಯವಸ್ಥೆಯೂ ಇದೆ.
ಮಠದ ನಿತ್ಯಪೂಜೆಗಾಗಿಯೇ ತುಳಸಿವನ, ಹೂತೋಟಗಳನ್ನು ಬೆಳಸಲಾಗಿದೆ. ಈಹೊತ್ತು ಶ್ರೀಮಠದ ನೇತೃತ್ವವಹಿಸಿರುವ ಶ್ರೀಸುಶಮೀಂದ್ರ ತೀರ್ಥರು ದೇಗುಲದ ಮತ್ತು ಮಂತ್ರಾಲಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ರಥಬೀದಿಯ ಎರಡೂ ಬದಿಗಳಲ್ಲೂ ಹೂತೋಟ ನಿರ್ಮಿಸಲಾಗಿದೆ.
ಶ್ರೀಗುರುರಾಯರು ಅನುಸರಿಸಿಕೊಂಡು ಬಂದ ವೇದಶಾಸ್ತ್ರಗಳ ಸಂಶೋಧನೆ ಇಂದೂ ಅವ್ಯಾಹತವಾಗಿ ನಡೆಯುತ್ತಿದೆ. ವೈದಿಕ ಪರಂಪರೆ ಉಳಿಸುವ ದೃಷ್ಟಿಯಿಂದ ಇಲ್ಲಿ ವೇದಾಧ್ಯಯನ ಸಂಶೋಧನಾ ಕೇಂದ್ರವನ್ನೂ ತೆರೆಯಲಾಗಿದೆ. ಇಲ್ಲಿ ನೂರಾರು ವೇದಾಧ್ಯಯನಿಗಳಿಗೆ ಉಚಿತ ಊಟ, ವಸತಿ, ವಸ್ತ್ರ ನೀಡಿ ವೇದ ಶಿಕ್ಷಣ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಮೂಲ್ಯವಾದ ವೇದರತ್ನಗಳ ಗ್ರಂಥ ಭಂಡಾರವನ್ನೂ ತೆರೆಯಲಾಗಿದೆ. ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೇದ, ಶಾಸ್ತ್ರ, ವ್ಯಾಕರಣ, ವಾಜ್ಞಯ ಪುಸ್ತಕಗಳಿವೆ. ಅಪಾರ ಸಂಖ್ಯೆಯ ತಾಳೆಯ ಗರಿಯ ಕೃತಿಗಳೂ ಇವೆ. ಹಸ್ತಪ್ರತಿಗಳೂ ಇವೆ. ಪಂಚಮುಖಿ ದರ್ಶನ ಎಂಬ ಧರ್ಮಛತ್ರವೂ ಮಂತ್ರಾಲಯದಲ್ಲಿದೆ.


ಬಳ್ಳಾರಿಯಿಂದ ಮಂತ್ರಾಲಯಕ್ಕೆ ಕೇವಲ ೧೧೫ ಕಿ.ಮೀಟರ್. ಮಂತ್ರಾಲಯಕ್ಕೆ ಹೋದಾಗ ವಿಶ್ವವಿಖ್ಯಾತ ಹಂಪಿ, ತೆಕ್ಕಲಕೋಟೆಗಳಿಗೂ ಹೋಗಿ ಬರಬಹುದು. ದೇಶದ ವಿವಿಧ ಭಾಗಗಳಿಂದ ರೈಲು (ಮಂತ್ರಾಲಯ ರೋಡ್‌ವರೆಗೆ), ಬಸ್ ಸೌಕರ್ಯ ಇದೆ. ಕರ್ನಾಟಕದ ಎಲ್ಲ ಪ್ರಮುಖ ನಗರಗಳಲ್ಲಿರುವ ವಿವಿಧ ಟ್ರಾವಲ್ಸ್‌ಗಳೂ ಮಂತ್ರಾಲಯಕ್ಕೆ ನಿತ್ಯ ಪ್ರವಾಸ ಸೌಕರ್ಯ ಒದಗಿಸಿವೆ. ಈ ಎಲ್ಲ ಅನುಕೂಲತೆ ಹಾಗೂ ರಾಯರ ಅನುಗ್ರಹದ ಫಲವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಹೆಚ್ಚು ಹೆಚ್ಚು ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ತೀರ್ಥ ಕ್ಷೇತ್ರ ಮಂತ್ರಾಲಯವಾಗಿದೆ.


    ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ...
ಪ್ರಹ್ಲಾದರಾಗಿ - ವ್ಯಾಸರಾಜರಾಗಿ ನಂತರ ರಾಘವೇಂದ್ರ ಯತಿರಾಜರಾದ
ಕಲಿಯುಗದ ಕಾಮಧೇನು ಶ್ರೀಗುರುರಾಯರು..
*ಶೋಭಾ ಸತೀಶ್
Mantralaya Temple,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಮಂತ್ರಾಲಯದ ಗುರುರಾಘವೇಂದ್ರರಾಯರೇ ನರಸಿಂಹಾವತಾರಕ್ಕೆ ಸಹಕಾರಿಯಾದ ಪ್ರಹ್ಲಾದರು. ಪೂರ್ವದಲ್ಲಿ ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮದೇವನ ಶಾಪದಿಂದ ಭಕ್ತಪ್ರಹ್ಲಾದರಾಗಿ ಭೂಲೋಕದಲ್ಲಿ ಹುಟ್ಟಿ, ಲೋಕಕಲ್ಯಾಣದ ಬಳಿಕ ತಮ್ಮ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಜನಿಸಿದರು. ವ್ಯಾಸರವತಾರದ ಬಳಿಕ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸಿ, ತಮ್ಮ ಬಳಿಗೆ ಬರುವ ಭಕ್ತಕೋಟಿಯ ಸಂಕಷ್ಟವನ್ನು ಪರಿಹರಿಸುತಿಹರು. ಅದಕ್ಕೆ ಭಕ್ತರು ರಾಯರನ್ನು ಪ್ರಹ್ಲಾದ - ವ್ಯಾಸಮುನಿಯೇ - ರಾಘವೇಂದ್ರ ಯತಿಯೇ ಎಂದು ಆರಾಸುವುದು.
ಗುರುರಾಯರು : ೧೬ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗೆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರ ತೀರ್ಥರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೀಣಾ ವೆಂಕಣ್ಣಭಟ್ಟ. ಎಲ್ಲ ಮಕ್ಕಳಂತೆ ವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರು. ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಖಾಂಡ ಪಾಂಡಿತ್ಯ ಗಳಿಸಿದರು. ಶ್ರೀಸುಂದ್ರತೀರ್ಥರಿಂದ ಸರ್ವಜ್ಞಪೀಠವನ್ನು ಅಲಂಕರಿಸಿದ ಬಳಿಕ ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರು. ತಮ್ಮ ಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವ ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರರಾದರು.
ರಾಯರು ಕೇವಲ ಯತಿಗಳಷ್ಟೇ ಅಲ್ಲ. ಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರು. ಸಂಸ್ಕೃತದಲ್ಲಿ ಪರಿಮಳ , ನ್ಯಾಯಮುಕ್ತಾವಳಿ , ತತ್ವಮಂಜಿರಿ, ಸೂತ್ರಭಾಷ್ಯ, ಭಾರದೀಪ, ತಾತ್ಪರ್ಯ ನಿರ್ಣಯವೇ ಮುಂತಾದ ಅಮೂಲ್ಯ ಕೃತಿಗಳನ್ನು ಬರೆದಿರುವ ಗುರು ರಾಘವೇಂದ್ರ ತೀರ್ಥರು ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥವಿವರಣೆ ಹಾಗೂ ಭಾಷ್ಯಗಳನ್ನೂ ಬರೆದಿದ್ದಾರೆ. ಗುರುರಾಯರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ದೊರೆತಿರುವುದು ಇಂದು ಎನಗೆ ಗೋವಿಂದ..... ಎಂಬ ಕೃತಿ ರತ್ನ ಮಾತ್ರ.
 kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಆರಾಧನೆ: ಪ್ರತಿವರ್ಷ ಶ್ರಾವಣ ಮಾಸದಲ್ಲಿ ಗುರುರಾಯರ ಆರಾಧನೆ ನಡೆಯುತ್ತದೆ. ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ್ನು ಭಕ್ತರು, ಗುರುರಾಯರ ಆರಾಧನೆ ಎಂದು ಆಚರಿಸುತ್ತಾರೆ. ಈ ಆರಾಧನೆ ಮೂರು ದಿನಗಳ ಕಾಲ ನಡೆಯುತ್ತದೆ. ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಎಂದು ಆಚರಿಸಲಾಗುವ ಈ ಮೂರೂ ದಿನಗಳಂದು, ದೇಶಾದ್ಯಂತ ಇರುವ ಎಲ್ಲ ರಾಯರ ಮಠದಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗುರುರಾಘವೇಂದ್ರರ ವೈಭವ, ರಾಯರ ಚರಿತ್ರೆಯ ಪಠಣ, ರಾಯರ ಪವಾಡಗಳ ಪ್ರವಚನ ನಡೆಯುತ್ತದೆ. ಮೂರೂ ದಿನವೂ ಅನ್ನ ಸಂತರ್ಪಣೆ ಜರುಗುತ್ತದೆ.
ಗುರುರಾಯರು ಸಶರೀರದೊಂದಿಗೆ ಬೃಂದಾವನಸ್ಥರಾಗಿ ೩೩೦ ವರ್ಷಗಳು ಉರುಳಿವೆ. ಆದರೆ, ಕಲಿಯುಗದ ಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇನ್ನೂ ೩೭೦ ವರ್ಷಗಳ ಕಾಲ ಇದ್ದು, ಸರ್ವರನ್ನೂ ಸಲಹುತ್ತಾರೆ ಎಂಬ ನಂಬಿಕೆ ಭಕ್ತರದು. ರಾಯರು ಬೃಂದಾವನ ಪ್ರವೇಶಿಸುವ ಮೊದಲು ತಾವು ಒಟ್ಟು ೭೦೦ ವರ್ಷಗಳ ಕಾಲ ಸಶರೀರದೊಂದಿಗೆ ಬೃಂದಾವನದಲ್ಲಿದ್ದು, ಭಕ್ತರ ಸಂಕಷ್ಟ ಪರಿಹರಿಸುವುದಾಗಿ ವಚನವಿತ್ತಿದ್ದರಂತೆ.
ಆದರಂತೆಯೇ ರಾಯರು ಭಕ್ತರನ್ನು ಕಾಪಾಡುತ್ತಿದ್ದಾರೆ. ಅವರು ಇನ್ನೂ ಬೃಂದಾವನದಲ್ಲೇ ಇದ್ದಾರೆ ಎಂಬುದಕ್ಕೆ ಕೆಲವು ದುಷ್ಟಾಂತಗಳೂ ಇವೆ. ರಾಯರು ಬೃಂದಾವನಸ್ಥರಾದ ೨೦೦ ವರ್ಷಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಉದಾಹರಣೆಗಳೂ ಉಂಟು. ಈಗ್ಗೆ ಒಂದೂವರೆ ದಶಕಗಳ ಬ್ರಿಟಿಷ್ ಚಕ್ರಾಪತ್ಯದ ಕಲೆಕ್ಟರಾಗಿದ್ದ, ಸರ್ ಥಾಮಸ್ ಮನ್ರೋ ಅವರಿಗೆ ರಾಯರು ದರ್ಶನನೀಡಿದ್ದರು ಎನ್ನುತ್ತದೆ ಇತಿಹಾಸ. ರಾಯರು ಇನ್ನೂ ಸಶರಿರೀಗಳಾಗಿ ಬೃಂದಾವನದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ.

ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿನ ತುಂಗಭದ್ರ ತಟದಲ್ಲಿ ಉತ್ತರ ಭಾರತದ ಕುಂಭ ಮೇಳ ಮಾದರಿಯಲ್ಲಿ ಪುಷ್ಕರ ಉತ್ಸವ ನಡೆಯುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು