ಶುಕ್ರವಾರ, ಅಕ್ಟೋಬರ್ 28, 2016

ನಾಯಿಗಳಿಗಾಗಿ ಮದುವೆಯಾಗದೇ ಉಳಿದ ಮಹಿಳೆ

              ಚೆನ್ನೈ: ನಾಯಿಗಳ ಮೇಲಿನ ಪ್ರೀತಿಯಿಂದಾಗಿ, ಮಹಿಳೆಯೊಬ್ಬರು ಮದುವೆಯಾಗದೇ ಜೀವನ ನಡೆಸುತ್ತಿರುವ ವರದಿ ಇಲ್ಲಿದೆ.
          ತಮಿಳುನಾಡಿನ ಮಾಂದವೆಲಿಯ ಲಾಲತೊಟ್ಟಂ ಬಡಾವಣೆ ನಿವಾಸಿಯಾಗಿರುವ ಮೀನಾ ಅವರಿಗೆ 36 ವರ್ಷ ವಯಸ್ಸು. ಅವರು ಚಿಕ್ಕ ಮನೆಯಲ್ಲಿ ವಾಸವಾಗಿದ್ದು, ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರೆ. ಬೀದಿ ನಾಯಿಗಳಿಗೂ ಆಹಾರ ಹಾಕಿ ಸಲಹಿದ್ದಾರೆ.
         ಬಡವರಾಗಿರುವ ಮೀನಾ, ಬೆಳಿಗ್ಗೆಯಾದ ಕೂಡಲೇ ನಾಯಿಗಳಿಗೆ ಆಹಾರ ಹಾಕಿ ಕೆಲಸಕ್ಕೆ ಹೋಗುತ್ತಾರೆ. ಅಡುಗೆ, ಮನೆ ಕೆಲಸ ಮಾಡುವ ಅವರಿಗೆ ಸಿಗುವ ಅಲ್ಪ ಹಣದಲ್ಲೇ ನಾಯಿಗಳನ್ನು ಸಾಕುತ್ತಾರೆ.
         ಮೀನಾ ಅವರಿಗೆ ಮದುವೆಯಾಗುವಂತೆ ಅಕ್ಕಪಕ್ಕದವರು ಸಲಹೆ ನೀಡಿದರೂ, ಅದನ್ನು ನಯವಾಗಿ ತಿರಸ್ಕರಿಸುವ ಮೀನಾ, ಮದುವೆಯಾದರೆ, ಗಂಡನಿಗೆ ನಾಯಿಗಳು ಇಷ್ಟವಾಗುವುದಿಲ್ಲ. ಅವುಗಳಿಂದ ದೂರವಾಗಲು ಇಷ್ಟವಿಲ್ಲ. ಹಾಗಾಗಿ, ಮದುವೆಯಾಗದೇ ಇರುತ್ತೇನೆ ಎಂದು ಹೇಳಿದ್ದಾರೆ.
        ಅಂದ ಹಾಗೇ ಮೀನಾ, ನಾಯಿ ಸಾಕಲು ಯಾರ ನೆರವನ್ನೂ ಪಡೆಯುವುದಿಲ್ಲ. ತಮ್ಮ ಅಲ್ಪ ದುಡಿಮೆಯಲ್ಲಿಯೇ ನಾಯಿಗಳನ್ನು ಸಲಹುತ್ತಾರೆ. ನಾಯಿಗಳು ಕಾಯಿಲೆ ಬಿದ್ದಾಗ, ಪಶು ವೈದ್ಯರ ಬಳಿ ಕರೆದೊಯ್ಯುತ್ತಾರೆ.

ಕಾಮೆಂಟ್‌ಗಳಿಲ್ಲ: