ಈ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣ ಬುಧವಾರ ಬೆಳಿಗ್ಗೆ ಸಂಭವಿಸಲಿದೆ. ಆದರೆ, ಈ ಬಾರಿ ಭಾರತದಲ್ಲಿ ಸಂಪೂರ್ಣ ಗ್ರಹಣ ಗೋಚರಿಸುವುದಿಲ್ಲ. ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಕೆಲವೆಡೆ ಮಾತ್ರ ಭಾಗಶ: ಸೂರ್ಯಗ್ರಹಣ ಗೋಚರಿಸಲಿದೆ.
‘ಸೂರ್ಯೋದಯಕ್ಕಿಂತ ಮೊದಲು ಅಥವಾ ಸೂರ್ಯೋದಯದ ಆಸುಪಾಸಿನಲ್ಲಿ ಗ್ರಹಣ ಸಂಭವಿಸಲಿದೆ. 10.05 ಗಂಟೆ ಸುಮಾರಿಗೆ ಗ್ರಹಣ ಕೊನೆಗೊಳ್ಳಲಿದೆ. ಭಾರತದಲ್ಲಿ ಸಂಪೂರ್ಣ ಗ್ರಹಣ ಗೋಚರಿಸುವುದಿಲ್ಲ, ಹೀಗಾಗಿ ಈ ಖಗೋಳ ವಿಸ್ಮಯವನ್ನು ಕಣ್ತುಂಬಿಸಿಕೊಳ್ಳುವುದು ಕಷ್ಟ’ ಎಂದು ಕೋಲ್ಕತ್ತದ ಎಂ.ಪಿ. ಬಿರ್ಲಾ ತಾರಾಲಯದ ನಿರ್ದೇಶಕ ಡಾ. ದೇವಿಪ್ರಸಾದ್ ದೊರೈ ತಿಳಿಸಿದ್ದಾರೆ.
ಪೂರ್ವ ಏಷ್ಯಾ ದೇಶಗಳಾದ ಸುಮಾತ್ರ, ಬೊರ್ನಿಯೊ, ಸುಲಾವೆಸಿ ದ್ವೀಪಗಳಲ್ಲಿ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಆಸ್ಟ್ರೇಲಿಯಾದ ಕೆಲವು ಪ್ರದೇಶಗಳನ್ನು ಹಾದು ಪೆಸಿಫಿಕ್ ಸಾಗರದ ಮಧ್ಯದಲ್ಲಿ ಗ್ರಹಣ ಕೊನೆಗೊಳ್ಳಲಿದೆ.
ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ 6:30 ಸುಮಾರಿಗೆ 10 ರಿಂದ 15 ನಿಮಿಷಗಳ ಕಾಲ ಮತ್ತು ದೆಹಲಿಯಲ್ಲಿ 6: 40ರ ಸುಮಾರಿಗೆ 4 ನಿಮಿಷಗಳ ಕಾಲ ಗ್ರಹಣ ವೀಕ್ಷಿಸಬಹುದು ಎಂದು ಹೈದರಾಬಾದ್‌ನ ಪ್ಲಾನೆಟರಿ ಸೊಸೈಟಿ ಆಪ್ ಇಂಡಿಯಾದ ಎನ್. ರಘುನಂದನ್ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.