ಗುರುವಾರ, ಮಾರ್ಚ್ 24, 2016

ಹೆಂಡತಿ·         ಇವಳ ಒಂದೊಂದು ಕಣ್ಣ ಹನಿಗೂ ರೇಶ್ಮೆ ಸೀರೆಯಷ್ಟು ಬೆಲೆಯಿದೆ
·         ಗಂಡ ಭಂಡನಾಗಿದ್ದರೂ ಬೆಂಡಾಗಿಸುವವಳು
·         ಮನೆಯೊಡತಿ ಅಥವಾ ಮನೆಯೊಡವೆ. ಹೆಜ್ಜೆ ತಪ್ಪಿದರೆ ಮನೆಯೊಡೆವೆ
·         'ಅವರು' ಮತ್ತು ತವರಿನವರೇ ಇವಳ ಉಸಿರು
·     ಮನೆ ನಿಂತಿರುವುದು ಇವಳ ಮೇಲೆಯೇ... ಬಿದ್ದರೆ ಮಾತ್ರ ಗಂಡನ ಮೇಲೆಯೇ
·         'ತನ್ನ' ಗಂಡನನ್ನು ಹೊಗಳದವಳು
·         ಹೆಂಡತಿಯಿಲ್ಲದವನಿಗೆ ಅರ್ಧ ಸುಖವಿಲ್ಲ. ಇದ್ದವಗೆ ಪೂರ್ಣ...
·     ಎಲ್ಲ ಗಂಡಂದಿರೂ ಒಳ್ಳೆಯವರಲ್ಲ, ಕಾರಣ ಎಲ್ಲ ಹೆಂಡತಿಯರೂ ಒಳ್ಳೆಯವರಲ್ಲ
·         ಸಂಸಾರದ ರಥದ ಸಾರಥಿ ಈಕೆ, ಗಂಡ ಕುದುರೆ
·         ಕೈ ಹಿಡಿದವಳು, ಕೈ ಜಗ್ಗುವವಳು
·         ಹೆಣ್ಣು ಶಬ್ದದ ಅವಸ್ಥಾಂತರ
·         ಬಿಟ್ಟೇನೆಂದರೂ ಬಿಡದೀ ಮಡದಿ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: