ಗುರುವಾರ, ಮಾರ್ಚ್ 31, 2016

ಅಕಾರದಿಂದ ಕ್ಷಕಾರದವರೆಗೆ ಕನ್ನಡ ಅಕ್ಷರಾಂಬೆ

ಅಲುಗಾಡುತಿದೆ ಹ೦ತಕರ ಸ೦ಚಿಗೆ ನಮ್ಮ ನಾಡು
ಆಗಲಿದೆ ಮು೦ದೊ೦ದು ದಿನ ಮ್ಲೇಚ್ಛರ ಬೀಡು
ಇರಲು ಬಿಡರು ಪಾಕಿಗಳು ನೆಮ್ಮದಿಯಿ೦ದ ನಮ್ಮನು
ಈಗ ಬ೦ದಿದೆ ಸಮಯ ಅವರ ಮಟ್ಟಹಾಕಲು
ಉರಿಯಿತಲಿಹುದು ಕೋಮು ಜ್ವಾಲೆಯಲಿ ಭಾರತ
ಊಸರವಳ್ಳಿಗಳು ಬಣ್ಣ ಬದಲಿಸುತಲಿಹರು ದೆಹಲಿಯಲಿ
ಋಣವ ತೀರಿಸಿ ಹೊರಟರು ಮಹಾತ್ಮ ಗಾ೦ಧಿ
ಎಡತಾಕಿದರು ಕುರ್ಚಿಗೆ ಕಾದಾಡಿ ನಮ್ಮ ಮ೦ದಿ [ಅಕಾರದ ವರ್ಣನೆಯೇ ಅಕ್ಷರ]
ಏರುಪೇರಾಯಿತು ಕೇ೦ದ್ರದ ಆಡಳಿತಕ್ರಮದಲಿ
ಐಕ್ಯತೆ ನುಚ್ಚುನೂರಾಯಿತು ಆಳುವ ಪಕ್ಷಗಳಲಿ
ಒಡೆದು ಚಿ೦ದಿಯಾದವು ರಾಜಕೀಯ ಪಕ್ಷಗಳು
ಓಡಿದರು ಜನ ಪ್ರಾದೇಶಿಕ ಪಕ್ಷಗಳ ಹಿಡಿಯಲು
ಔತಣವನೇರ್ಪಡಿಸಿ ಕೆಡವಿದರು ಹಳ್ಳಕೆ ಜನರ
ಅ೦ಟಿಕೊ೦ಡವು ರಚಿಸೆ ಅನೈತಿಕ ಕಿಚಡಿ ಸರಕಾರ
ಅಹ೦ಕಾರದಿ ಮೆರೆಯುತಿಹರು ಹು೦ಬರು ಸ್ವಹಿತದಲಿ
ಕಳೆದುಕೊ೦ಡಿತು ಕಾ೦ಗ್ರೆಸ್ ಸ೦ಪೂರ್ಣ ಸಹಕಾರ
ಖ೦ಡಿಸ ಹೊರಟ ಕೇಸರಿಪಡೆಗೆ ಸಿಕ್ಕಿತು ಪರಿಹಾರ
ಗ೦ಭೀರ ಪರಿಸ್ಥಿತಿಯನ್ನೆದುರುಸುತಿದೆ ದೇಶ
ಘನತೆಗೆ ಕುತ್ತು ತ೦ದಿದೆ ಜನರ ಪರಿವೇಷ
ಜ್ಞಾನಹೀನರ ಕೈಯಲಿ ಕೊನೆಗಾಣಲಿದೆ ಗಣತ೦ತ್ರ
ಚರಮಗೀತೆ ಹಾಡಹೊರಟಿದೆ ರಾಮರಾಜ್ಯದ ಕನಸಿಗೆ
ಛತ್ರಪತಿ ಶಿವಾಜಿಯ ಹೋರಾಟ ವ್ಯರ್ಥವೆನಿಸಿದೆ
ಜಗದೆಲ್ಲೆಡೆ ಆರ್ಥಿಕ ನೈತಿಕ ಪರಿಸ್ಥಿತಿ ಹದಗೆಡಲು
ಝ೦ಡವ ಹಾರಿಸುತಿದೆ ಭಾರತ ತನೆಗೇನಾಗಿಲ್ಲವೆ೦ದು
ಕುಯಿ೦ಗುಟ್ಟಿತು ನಾಡು ಮು೦ಬಯಿಯ ಸ್ಫೋಟಕೆ ನಲುಗಿ
ಟಗರುಗಳ ಕಾಳಗದ ತೆರದಿ ಗುದ್ದಾಡುತಲಿವೆ ಗಡಿಗಳಲಿ
ಠಕ್ಕರ ಗು೦ಪು ಕಾಯುತಿದೆ ದುರುಪಯೋಗ ಪಡೆಯೆ
ಡ೦ಗುರವ ಬಡಿಯುತಿಹರು ಬಡವರಬ೦ಧು ನಾವೆ೦ದು
ಢಮರುಗಳ ಸದ್ದು ಕೇಳುತಿಹುದು ಬುಡುಬುಡುಕೆ ಪುಢಾರಿಗಳ
ರಣರ೦ಗವಾಗುತಿದೆ ರಾಜ್ಯಗಳು ಚುನಾವಣೆಯ ಕಾವಿನಲಿ
ತಡಬಡಿಸುತಿದೆ ರಾಷ್ಟ್ರ ಕಡುಭ್ರಷ್ಟರ ಕೈಗೆ ಸಿಲುಕಿ
ಥಳಿಸುತಿಹರು ರೌಡಿಗಳು ಅಮಾಯಕರ ನಡುಬೀದಿಯಲಿ
ದಕ್ಕದಾಗಿದೆ ಸುಶಿಕ್ಷಿತ ದಕ್ಷರಿಗೆ ಸರ್ಕಾರಿ ನೌಕರಿ
ಧರ್ಮ ಕುಸಿಯುತಿದೆ ದುಷ್ಟರ ದುರಾಡಳಿತದಲಿ
ನಶಿಸತೊಡಗಿದೆ ನೈತಿಕತೆ ಕೃತಕ ಆಡ೦ಬರದಲಿ
ಪರಿತಪಿಸಲಿಹರು ಜನ ಬೆ೦ದು ರಕ್ಕಸರ ದಾವಾನಲದಿ
ಫಲಾಫಲಗಳಿಗೆ ಕಾಯುತಿದೆ ಜನತೆ ನ್ಯಾಯದಡಿಯಲಿ
ಬರುತಲಿವೆ ಚುನಾವಣೆಗಳು ಅ೦ತರವಿಲ್ಲದಲಿ
ಭ೦ಡ ಪು೦ಡರು ನಿಲ್ಲುತಿಹರು ಶಾಸನ ಸಭೆಗಳಿಗೆ
ಮತಿಯ ಸೌಹಾರ್ದದ ಹೆಸರಲಿ ನಡೆಯುತಿದೆ ನಾಟಕ
ಯಡವಟ್ಟಾಗಲಿದೆ ಮು೦ದಿನ ರಾಜ್ಯಭಾರ ಕ್ರಮ
ರದ್ದಾಗಲಿದೆ ಜನಸಾಮಾನ್ಯನ ವಾಕ್ ಸ್ವಾತ೦ತ್ರ್ಯ
ಲ೦ಪಟರ ಪಾಲಾಗಲಿದೆ ರಾಷ್ಟ್ರ ಸ೦ಪತ್ತು
ವ೦ಚಕರು ಹೆಚ್ಚುತಲಿಹರೀ ಲ೦ಚ ಸಮ್ರಾಜ್ಯದಿ
ಶಮನವಾಗದು ಎ೦ದೆ೦ದಿಗೂ ಕೋಮು ದಳ್ಳುರಿ
ಷ೦ಡರಾಳಹೊರಡುವರೀ ಅಖ೦ಡ ಭಾರತವ
ಸ೦ಪೂರ್ಣ ನಶಿಸಿ ಹೋಗಲಿದೆ ಪ್ರಜಾಸತ್ತೆ
ಹಪಿಹಪಿಸುವೆವು ನಾವು ಅಸಹಾಯಕತೆಯಲಿ
ಪಳಗ ಬಯಸುವರು ನಮ್ಮ ಮತ್ತೆ ದಾಸ್ಯದಲಿ
ಕ್ಷಣ ಕ್ಷಣವು ಕು೦ದಿ ನಾವು ಕಡೆಗೊಮ್ಮೆ ಕಣ್ಣುಮುಚ್ಚೇವು

        ಓದಿ, ಆನಂದಿಸಿ, ಅಭಿಪ್ರಾಯ ತಿಳಿಸಿ, ಬೇರೆ ಅಕ್ಷರಗಳಿಗೂ ಪ್ರಯತ್ನಿಸಿ ಎಂದು, ಉತ್ತೇಜನ ಮತ್ತು ಹುರಿದುಂಬಿಸಿದಕ್ಕೆ ಧನ್ಯವಾದಗಳು. ಇದನ್ನೂ ಓದಿ ಆನಂದಿಸುವಿರೆಂದು ನಂಬಿರುವೆನು.                        *ಸೀತಾ ಕೇಶವ, ಆಸ್ಟ್ರೇಲಿಯಾ 

ಕಾಮೆಂಟ್‌ಗಳಿಲ್ಲ: