೧. ಭಾರತದಲ್ಲಿ ಇಂಗ್ಲೀಷ್ ವಿಧ್ಯಾಭ್ಯಾಸವನ್ನು ಜಾರಿಗೆ ತಂದವರು ಯಾರು?
೨. ’ನೆಲಗಡಲೆ’ ಇದು ಮೂಲತಃ ಯಾವ ದೇಶದ ಬೆಳೆ?
೩. ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ (Combined net sales) ದಿನ ಪತ್ರಿಕೆ ಯಾವುದು?
೪. ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
೫. ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ?
೬. ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು?
೭. ನೇತ್ರಾದಾನದಲ್ಲಿ ಕಣ್ಣಿನ ಯಾವ ಭಾಗವನ್ನು ಬೇರೆಯವರಿಗೆ ಅಳವಡಿಸಬಹುದು?
೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘ ಸ್ಥಾಪಿಸಿದವರು ಯಾರು?
೯. ಅಭ್ರಕ ಹೆಚ್ಚಾಗಿ ಉತ್ಪಾದಿಸುವ ರಾಷ್ಟ್ರ ಯಾವುದು?
೧೦. ವಿಶ್ವ ವಿಖ್ಯಾತ ಪ್ರೇಮಕಥೆ ಲೈಲಾ ಮಜ್ನೂ ಕೃತಿ ರಚಿಸಿದವರು ಯಾರು?
೧೧. ಹಿಜಿರಾ ಶಕವರ್ಷ ಪ್ರಾರಂಭವಾದದ್ದು ಯಾವಾಗ?
೧೨. ಪ್ರಸಿದ್ಧ ಉದ್ಯಮಿ ದಿವಂಗತ ಧೀರೊಬಾಯಿ ಅಂಬಾನಿಯವರ ಪತ್ನಿಯ ಹೆಸರೇನು?
೧೩. ಖ್ಯಾತ ನ್ಯಾಯಾವಾದಿ ರಾಮ್ ಜೇಠ್ಮಲಾನಿಯವರು ೧೯೯೪ರಲ್ಲಿ ಸ್ಥಾಪಿಸಿದ ಪಕ್ಷದ ಹೆಸರೇನು?
೧೪. ಪ್ರತಿದಿನ ನಮ್ಮ ಆಹಾರದಲ್ಲಿ ಎಷ್ಟು ಗ್ರಾಂ ಕೊಬ್ಬು ಇರಬೇಕು?
೧೫. ಹೆಚ್.ಐ.ವಿ (HIV) ವಿಸೃತ ರೂಪವೇನು?
೧೬. ಬುದ್ಧ ಪೌರ್ಣಮಿಗೆ ಮಹತ್ವ ಬರಲು ಕಾರಣವೇನು?
೧೭. ರೇಷ್ಮೆಯನ್ನು ಪ್ರಥಮವಾಗಿ ಆವಿಷ್ಕರಿಸಿದ ನಾಗರೀಕರು ಯಾರು?
೧೮. ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾದ ಪ್ರಥಮ ಭಾರತೀಯ ಯಾರು?
೧೯. ಫೌಂಟನ್ ಪೆನ್ನನ್ನು ಕಂಡು ಹಿಡಿದವರು ಯಾರು?
೨೦. ಸಿಂಧೂ ನದಿಯ ಉಪನದಿಗಳು ಯಾವುವು?
೨೧. ಗಿರ್ ಅರಣ್ಯಧಾಮ ಯಾವ ರಾಜ್ಯದಲ್ಲಿದೆ?
೨೨. ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಎಂದು ಆಚರಿಸುವರು?
೨೩. ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಬಳಸಿದ ನೌಕೆ ಯಾವುದು?
೨೪. ರೆಡ್‌ಕ್ರಾಸ್ ಸಂಸ್ಥೆಯ ಸ್ಥಾಪಕ ಯಾರು?
೨೫. ಎರಡು ಮೆದುಳುಗಳಿದ್ದ ಪ್ರಾಣಿ ಯಾವುದು?
೨೬. ಮಾನವನ ದೇಹದ ರಕ್ತದ ಗುಂಪುಗಳಾವುವು?
೨೭. ಮನುಷ್ಯ ದೇಹದಲ್ಲಿನ ಸಣ್ಣಕರುಳಿನ ಉದ್ದ ಎಷ್ಟು?
೨೮. ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸುತ್ತದೆ?
೨೯. ’ಆಸ್ಕರ್’ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಯಾವುದು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.