ಅಂಕಿತ ನಾಮ:
ಸೌರಾಷ್ಟ್ರ ಸೋಮೇಶ್ವರ
ಕಾಲ: 1165
ದೊರಕಿರುವ ವಚನಗಳು: 403 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಸೌರಾಷ್ಟ್ರ ಪ್ರಾಂತ್ಯ
ಪರಿಚಯ: ಕಾಲ ಸು. 1165. ಸ್ಥಳ ಸೌರಾಷ್ಟ್ರ ಪ್ರಾಂತ್ಯ. ವ್ಯಾಪಾರದ ಸಲುವಾಗಿ ಪುಲಿಗೆರೆಗೆ (ಲಕ್ಷ್ಮೇಶ್ವರ) ಬಂದ; ಜೈನ ಹುಡುಗಿ ಪದ್ಮಾವತಿಯನ್ನು ಮದುವೆಯಾದ; ಮಾವನೊಡನೆ ವಾದಮಾಡಿ, ಸೌರಾಷ್ಟ್ರದ ಸೋಮೇಶ್ವರನನ್ನು ಕರೆತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿದ ಅನ್ನುವ ಕಥೆಯನ್ನು ಆದಯ್ಯನ ರಗಳೆ ಮತ್ತು ಸೋಮನಾಥ ಚಾರಿತ್ರಗಳು ಹೇಳುತ್ತವೆ. ಹನ್ನೆರಡನೆಯ ಶತಮಾನದ ಮತೀಯ ವಾಗ್ವಾದಗಳಿಗೆ ಇವನ ಬದುಕು ಒಂದು ನಿದರ್ಶನದಂತಿದೆ. ಧರ್ಮತತ್ವಗಳ ವಿವೇಚನೆ ಇರುವ ಈತನ 403 ವಚನಗಳು ದೊರೆತಿವೆ.

ಅಂಗವು ಲಿಂಗವೇಧೆಯಾದ ಬಳಿಕ
ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ
ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.

ಅಯ್ಯಾ, ತನುವಿದ್ದಂತೆ
ಮರಣ ಶೋಕ ಭಯಂಗಳೆಂತುತ್ತಾರವಹವೆಂದರಿಯೆನಯ್ಯಾ.
ಅಯ್ಯಾ, ಮನವಿದ್ದಂತೆ
ಮಲ, ಮದ, ಮಾಯೆ, ಕರ್ಮಂಗಳೆಂತು ಹರಿವವೆಂದರಿಯೆನಯ್ಯಾ.
ಅಯ್ಯಾ, ನಿಮ್ಮ ನೋಡುವ ಜ್ಞಾನಕಂಗಳಿಗೆ
ವಿವೇಕಾಂಜನಸಿದ್ಧಿ ಎಂತಹುದೆಂದರಿಯೆನಯ್ಯಾ.
ಅಯ್ಯಾ, ನಿಮ್ಮನರುಹಿ ಎನ್ನ ಮರಹಿಸಯ್ಯಾ
ಸೌರಾಷ್ಟ್ರ ಸೋಮೇಶ್ವರಾ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.