ಮಂಗಳವಾರ, ಮಾರ್ಚ್ 22, 2016

ಅಮ್ಮ - ನೀಲವ್ಯೋಮ ವೃಕ್ಷಎಲ್ಲಿ ದೊರಕುವುದು ಮತ್ತೆ ನಿನ್ನ ಮಮತೆ
ಪ್ರೀತಿಯ ಸಾ೦ತ್ವನ,
ಲಾಲಿ ಹಾಡಿನ ಜೋಗುಳ,
ಕಾಡುತಿದೆ ನಿನ್ನ ಮುದ್ದಿನ ಕೊರತೆ..

ಮುತ್ತಿಟ್ಟು, ತುತ್ತಿಟ್ಟ ತಾಯಿ,
ವೃಕ್ಷವಾಗಿ ಪ್ರೇಮದ ನೆರಳು ನೀಡಿದ ಮಾಯಿ,
ಯಾವುದಕ್ಕೆ ಹೋಲಿಸಲಿ ನಿನ್ನ ನಲ್ಮೆಯ,
ಹೇಗೆ ಮರೆಯಲಿ ನಿನ್ನ ವಾತ್ಸಲ್ಯವ,

ಬಸವಳಿದ ಜೀವ ನಿನ್ನ ಮಡಿಲಲ್ಲಿ ಮಲಗಬೇಕು,
ನಿನ್ನ ಸಿಹಿ ಜೇನಿನ ಮಮತೆಯ ಮತ್ತೆ ಸವಿಯಬೇಕು,
ಇವಳೆ ನನ್ನ ಅಮ್ಮ ಎ೦ದು ಹೆಮ್ಮೆಯಿ೦ದ ಹೇಳಬೇಕು,
ಅಮ್ಮ ಎ೦ದೆ೦ದು ನೀ ನನ್ನ ಜೊತೆ ಇರಬೇಕು.
Posted by Poornima Girish

ಕಾಮೆಂಟ್‌ಗಳಿಲ್ಲ: