"ಅಮೃತ" ಎಂದರೆ ಅಮ್ಮನ ಪ್ರೀತಿ,
"ಅಮ್ಮ" ಎನ್ನುವುದೇ ಕಂದನ ಸೂಕ್ತಿ.
ಅಮ್ಮನ ನಿಸ್ವಾರ್ಠ ಪ್ರೀತಿಯ ಬಣ್ಣಿಸಲಸಾಧ್ಯ
ಆಕೆಯಲಿ ದೇವರ ಕಾಣುವುದೇ ಸೌಭಾಗ್ಯ.
"ತಾಯಿಗಿಂತ ಮಿಗಿಲಾದ ದೇವರಿಲ್ಲ" ಈ
ಮಾತು ಸತ್ಯ.
ಮಾತೆಯ ಮಮತೆಯ ಮುಂದೆ ಎಲ್ಲವೂ
ಮಿಥ್ಯ.
ತಾನು ನೋವುಂಡು ತನ್ನ ಕುಡಿಗೆ
ಜೀವನೀವಳು ಈ " ಜನನಿ",
ಮಕ್ಕಳ ಯೋಗ ಕ್ಷೇಮವ ಸದಾ ಬಯಸುವ
"ಸಾಧ್ವೀಮಣಿ".
ಬೆಲೆ ಕಟ್ಟಲಾಗದ ವಜ್ರ ಅಮ್ಮನ ' ಪ್ರೀತಿ',
ತಿಳಿದೋ ತಿಳಿಯದೆಯೋ ಜವಾಬ್ದಾರಿ ಮರೆತು
ಕಡೆಗಣಿಸುತಿದೆ ಸಮಾಜ ಈ 'ನೀತಿ'.
ಗುಡಿಯ ದೇವರಿಗೆ ಸೇವೆ ಸಲ್ಲಿಸುವರು ಜನರು,
ಮನೆಯಲ್ಲಿರುವ ತಾಯಿ ದೇವರ ಮರೆತಂತಿಹರು
ಇಂದು ಹಲವರು.
ಪ್ರೀತಿ-ಮಮತೆ, ಸಹನೆ-ಸೌಹಾರ್ದ
ಗಳ
ಸಾಕಾರ ಮೂರ್ತಿ ಅಮ್ಮನ ಪಾದಕೆ
ಸದಾ ನಮಿಸುವೆ,
ಮರುಜನ್ಮವಿದ್ದಲ್ಲಿ
ಮಗದೊಮ್ಮೆ ಮಗುವಾಗಿ
ಇದೇ ಅಮ್ಮನ ಮಡಿಲಲಿ
ನಲಿಯುವ ವರವನ್ನು ಕರುಣಿಸೆಂದು ಸದಾ
ಬೇಡುವೆ.
Submitted by suman on August 10,
2011 - 8:39pm
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.