ಕಂದನು ಬಂದುದು ಎಲ್ಲಿಂದ ?
ನೀಲಿಯ ಗಗನದ ಬಳಿಯಿಂದ ||೧||
-
ಕಣ್ಣನು ಹೊಂದಿದನಾವಾಗ ?
ಕಂದನ ಚಂದಿರ ಕಂಡಾಗ ||೨||
-
ಕಣ್ಣನು ಕಳೆಯನು ಪಡೆದಿಹುದು
ಅರಿವೇ ಮೋಹಿಸಿ ಕೊಟ್ಟುದುದು ||೩||
-
ಕೆನ್ನೆಯುಕೆಂಪಾಗಿಹುದೇಕೆ ?
ದೇವರ ಮುತ್ತನು ಪಡೆದುದಕೆ ||೪ ||
-
ಯಾವಾಗಲು ನಗುವನದೇಕೆ ?
ನಾವರಿಯದುದನವನರಿತುದಕೆ
(ನಾವು ಅರಿಯದುದನು ಅವನು ಅರತುದಕೆ - ದೇವರನ್ನು ?)
ನೀಲಿಯ ಗಗನದ ಬಳಿಯಿಂದ ||೧||
-
ಕಣ್ಣನು ಹೊಂದಿದನಾವಾಗ ?
ಕಂದನ ಚಂದಿರ ಕಂಡಾಗ ||೨||
-
ಕಣ್ಣನು ಕಳೆಯನು ಪಡೆದಿಹುದು
ಅರಿವೇ ಮೋಹಿಸಿ ಕೊಟ್ಟುದುದು ||೩||
-
ಕೆನ್ನೆಯುಕೆಂಪಾಗಿಹುದೇಕೆ ?
ದೇವರ ಮುತ್ತನು ಪಡೆದುದಕೆ ||೪ ||
-
ಯಾವಾಗಲು ನಗುವನದೇಕೆ ?
ನಾವರಿಯದುದನವನರಿತುದಕೆ
(ನಾವು ಅರಿಯದುದನು ಅವನು ಅರತುದಕೆ - ದೇವರನ್ನು ?)
ರಚನೆ :ಕಲಾಕುಮಾರ
(ಡಾ.ದೊಡ್ಡೇರಿ ವೆಂಕಟಗಿರಿರಾವ್).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.