fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಆಗಸ್ಟ್ 31, 2015
ಶನಿವಾರ, ಆಗಸ್ಟ್ 29, 2015
ಶುಕ್ರವಾರ, ಆಗಸ್ಟ್ 28, 2015
+40, 000
ಇಂದಿಗೆ +40,000 ಪುಟಗಳ ವೀಕ್ಷಣೆಯಾದವು, ನಿಮ್ಮ ಈ ಕರುನಾಡ ಕಂದನ ತಾಣವನ್ನು ವೀಕ್ಷಿಸುತ್ತಿರುವ ತಮಗೆಲ್ಲರಿಗೂ ಹೃತ್ಪೂರವವಾದ ಧನ್ಯವಾದಗಳನ್ನು ಹೇಳುತ್ತ, ಅನಂತದೂದ್ದಕ್ಕೂ ಬೆಳೆಯಲಿ ಎಂಬ ಹಂಬಲವನ್ನು ಈ ಕರುನಾಡ ಕಂದನದ್ದಾಗಿಗೆ.
ನಿಮ್ಮ ಈ ಕರುನಾಡ ಕಂದನ ಕನ್ನಡದ ಏಳಿಗೆಗ ಸದಾ ಶ್ರಮಿಸುವವನು,
..
ಬನ್ನಿ ಕನ್ನಡಿಗರು ಕೈ ಜೋಡಿಸಿ, ಕನ್ನಡ ಬೆಳಸಿ, ಮುಂದಿನ ಪೀಳಿಗೆಗೆ ತಿಳಿಸಿ.
ಗುರುವಾರ, ಆಗಸ್ಟ್ 27, 2015
ಬುಧವಾರ, ಆಗಸ್ಟ್ 26, 2015
ಅಮುಗಿದೇವಯ್ಯ
ಅಂಕಿತ ನಾಮ:
ಸಿದ್ಧಸೋಮನಾಥ
ಕಾಲ: 1160
ದೊರಕಿರುವ ವಚನಗಳು: 30 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಸೊಲ್ಲಾಪುರ
ಪರಿಚಯ: ಕಾಲ, ಸು. 1160. ಸ್ಥಳ: ಸೊಲ್ಲಾಪುರ. ಬಟ್ಟೆ ನೇಯುವ ಕಾಯಕದವನು. ವರದಾನಿ ಈತನ ಹೆಂಡತಿ. ಮಹಾರಾಷ್ಟ್ರದ ಪುಳಜೆಯಲ್ಲಿ ದೊರೆತ ಶಾಸನಗಳಲ್ಲಿ ಈತನ ಪ್ರಸ್ತಾಪವಿದೆ. ಯಾದವ ಅರಸ ಸಿಂಘಣನು ಆಮುಗಿದೇವಯ್ಯನನ್ನು ಗೌರವಿಸಿದ ಪ್ರಸ್ತಾಪ ಶಾಸನದಲ್ಲಿದೆ. ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನನಿಂದ ತನ್ನ ಮನೆಯ ವಸ್ತುಗಳ ಗಂಟನ್ನು ಹೊರಿಸಿಕೊಂಡು ಹೋದ, ಸಿದ್ಧರಾಮನಿಗೆ ಬುದ್ಧಿ ಕಲಿಸಿದ ಕಥೆ ಕಾವ್ಯ, ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈತನ 30 ವಚನಗಳು ದೊರೆತಿವೆ.
ಕಾಲ: 1160
ದೊರಕಿರುವ ವಚನಗಳು: 30 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಸೊಲ್ಲಾಪುರ
ಪರಿಚಯ: ಕಾಲ, ಸು. 1160. ಸ್ಥಳ: ಸೊಲ್ಲಾಪುರ. ಬಟ್ಟೆ ನೇಯುವ ಕಾಯಕದವನು. ವರದಾನಿ ಈತನ ಹೆಂಡತಿ. ಮಹಾರಾಷ್ಟ್ರದ ಪುಳಜೆಯಲ್ಲಿ ದೊರೆತ ಶಾಸನಗಳಲ್ಲಿ ಈತನ ಪ್ರಸ್ತಾಪವಿದೆ. ಯಾದವ ಅರಸ ಸಿಂಘಣನು ಆಮುಗಿದೇವಯ್ಯನನ್ನು ಗೌರವಿಸಿದ ಪ್ರಸ್ತಾಪ ಶಾಸನದಲ್ಲಿದೆ. ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನನಿಂದ ತನ್ನ ಮನೆಯ ವಸ್ತುಗಳ ಗಂಟನ್ನು ಹೊರಿಸಿಕೊಂಡು ಹೋದ, ಸಿದ್ಧರಾಮನಿಗೆ ಬುದ್ಧಿ ಕಲಿಸಿದ ಕಥೆ ಕಾವ್ಯ, ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈತನ 30 ವಚನಗಳು ದೊರೆತಿವೆ.
ಅಂಗ ಅನಂಗವೆಂಬೆರಡರ ಸಂದಳಿದ ಮಹಂತನ
ಅಂಗ ಸೋಂಕಿತ್ತೆಲ್ಲಾ ಪವಿತ್ರ ಕಾಣಿರೆ.
ಪವಿತ್ರವಿರ್ದಲ್ಲಿ ಪದಾರ್ಥವಿಹುದು, ಪದಾರ್ಥವಿರ್ದಲ್ಲಿ ಮನವಿಹುದು.
ಮನವಿರ್ದಲ್ಲಿ ಹಸ್ತವಿಹುದು, ಹಸ್ತವಿರ್ದಲ್ಲಿ ಜಿಹ್ವೆಯಿಹುದು
ಜಿಹ್ವೆಯಿರ್ದಲ್ಲಿ ರುಚಿಯಿಹುದು, ರುಚಿಯಿರ್ದಲ್ಲಿ ಅವಧಾನವಿಹುದು.
ಅವಧಾನವಿರ್ದಲ್ಲಿ ಭಾವವಿಹುದು, ಭಾವವಿರ್ದಲ್ಲಿ ಲಿಂಗವಿಹುದು.
ಲಿಂಗವಿರ್ದಲ್ಲಿ ಅರ್ಪಿತವಿಹುದು, ಅರ್ಪಿತವಿರ್ದಲ್ಲಿ ಪ್ರಸಾದವಿಹುದು.
ಪ್ರಸಾದವಿರ್ದಲ್ಲಿ ಪರಿಣಾಮವಿಹುದು.
ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಶರಣರು
ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳಯ್ಯಾ.
ಅಂಗ ಸೋಂಕಿತ್ತೆಲ್ಲಾ ಪವಿತ್ರ ಕಾಣಿರೆ.
ಪವಿತ್ರವಿರ್ದಲ್ಲಿ ಪದಾರ್ಥವಿಹುದು, ಪದಾರ್ಥವಿರ್ದಲ್ಲಿ ಮನವಿಹುದು.
ಮನವಿರ್ದಲ್ಲಿ ಹಸ್ತವಿಹುದು, ಹಸ್ತವಿರ್ದಲ್ಲಿ ಜಿಹ್ವೆಯಿಹುದು
ಜಿಹ್ವೆಯಿರ್ದಲ್ಲಿ ರುಚಿಯಿಹುದು, ರುಚಿಯಿರ್ದಲ್ಲಿ ಅವಧಾನವಿಹುದು.
ಅವಧಾನವಿರ್ದಲ್ಲಿ ಭಾವವಿಹುದು, ಭಾವವಿರ್ದಲ್ಲಿ ಲಿಂಗವಿಹುದು.
ಲಿಂಗವಿರ್ದಲ್ಲಿ ಅರ್ಪಿತವಿಹುದು, ಅರ್ಪಿತವಿರ್ದಲ್ಲಿ ಪ್ರಸಾದವಿಹುದು.
ಪ್ರಸಾದವಿರ್ದಲ್ಲಿ ಪರಿಣಾಮವಿಹುದು.
ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಶರಣರು
ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳಯ್ಯಾ.
ಅಲಗಿನ ಮೊನೆಯನೇರಬಹುದು,
ಹುಲಿಯ ಬಲೆಯ ಹೊಗಬಹುದು,
ಸಿಂಹದ ಕೊರಳಿಗೆ ಹಾಯಬಹುದು,
ಸಿದ್ಧಸೋಮನಾಥಾ, ನಿಮ್ಮ ಮುಟ್ಟದೆ ನಿಮಿಷ ಕುಳ್ಳಿರಬಾರದು.
ಹುಲಿಯ ಬಲೆಯ ಹೊಗಬಹುದು,
ಸಿಂಹದ ಕೊರಳಿಗೆ ಹಾಯಬಹುದು,
ಸಿದ್ಧಸೋಮನಾಥಾ, ನಿಮ್ಮ ಮುಟ್ಟದೆ ನಿಮಿಷ ಕುಳ್ಳಿರಬಾರದು.
ಮಂಗಳವಾರ, ಆಗಸ್ಟ್ 25, 2015
ಸೋಮವಾರ, ಆಗಸ್ಟ್ 24, 2015
ಗಾಳಿ
- ಸುಗಂಧವನ್ನೂ, ದುರ್ಘಂಧವನ್ನೂ ಒಯ್ಯುವ ವಾಹನ
ಎಲ್ಲರಿಗೂ ಇದೆಂದರೆ ಪ್ರಾಣ
ಕೆಲವು ತರಕಾರಿಗಳು ಗಾಳಿಯನ್ನು ಹೆಚ್ಚು ಹೊರಸೂಸುತ್ತವೆ, ಹೊಟ್ಟೆ ಸೇರಿದ ಮೇಲೆ
ಪರ್ವತಾರೋಹಿಗಳಿಗೆ ಈ airನದ್ದೇ ಸಮಸ್ಯೆ
ಹೊಗೆಯ ನಂತರದ ಸ್ಥಾನ ಇದರದ್ದು ವಾಯುಮಂಡಲದಲ್ಲಿ
ಶುದ್ಧ ಗಾಳಿ ಸಿಗದಿದ್ದರೆ ಗೋಳಿಡುವುದೇ ಬಾಳು
ಚಿಪ್ಸ್ ಪ್ಯಾಕೆಟ್ನಲ್ಲಿ ಚಿಪ್ಸ್ಗಿಂತ ಹೆಚ್ಚಿರುವ ವಸ್ತು
ಫ್ಯಾನ್ ತಿರುಗಿದಾಗ ಬೀಸುವಂಥದ್ದು
ಕುಡುಕ ತೂರಾಡಲು ಜೋರಾಗಿ ಬೀಸುವ ಗಾಳಿಯೇ ಕಾರಣ
ಋತುವಿಗೆ ತಕ್ಕಂತೆ ಬದಲಾಗುವುದೇ ಮಾರುತ
ಆಯುವನ್ನು ನಿರ್ಧರಿಸುವ ವಾಯು
ಪಂಚ ವಿಧ ವಾಯುಗಳಲ್ಲಿ ಅಪಾನವಾಯು ಭಾರಿ ಡೇಂಜರ್
ತೂರಿಕೊಳ್ಳುವ ಸ್ವಭಾವದವರಿಗೆ ತೂರಿಸಲೊಂದು ನೆಪ
ಗಾಲಿಯೊಳಗೆ ತುಂಬಿರುವಂಥದ್ದು
ಕೆಲವರು ಗಾಳಿಯನ್ನು ಒಳ ತೆಗೆದುಕೊಂಡು ಹೊಗೆಯನ್ನು ಹೊರಬಿಡುತ್ತಾರೆ
ವಾಯುಪುತ್ರನಿಗೆ ಸಮುದ್ರೋಲ್ಲಂಘನ ಮಾಡಲು ಜಾಂಬವಂತ ಹಾಕಿದ್ದು ಇದನ್ನೇ
ಗಾಳಿ ಹಾಕುವುದು ಮತ್ತು ಗಾಳಿ ತೆಗೆಯುವುದಕ್ಕೆ ವಿಶೇಶಾರ್ಥವಿದೆ
-ವಿಶ್ವನಾಥ ಸುಂಕಸಾಳ
ಶನಿವಾರ, ಆಗಸ್ಟ್ 22, 2015
ಅಮ್ಮ ಎಂಬ ಆ ಕರೆಯು..
ಚಿತ್ರ : ದೇವತೆ
ಹಾಡಿದವರು : ವಾಣಿ ಜಯರಾಮ್
ಸಂಗೀತ : ಎಮ್. ಎಸ್. ವಿಶ್ವನಾಥನ್
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ಎಮ್. ಎಸ್. ವಿಶ್ವನಾಥನ್
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಈ ಹಾಡನ್ನು ಇಲ್ಲಿ ಕೇಳಿ:
www.raaga.com/player4/?id=168234&mode=100&rand=0.8747155613420297
ಅಮ್ಮಾ...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.., ಇದನು ತಿಳಿಯಿತಮ್ಮಾ...ಆ..
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..,
ಹಸಿದ ಕಂದ ಅಮ್ಮನೆಡೆಗೆ ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ ನಾನು ಓಡಲಮ್ಮ..ಆ.., ನಾನು ಓಡಲಮ್ಮ..ಆ..
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ.. ಇದನು ತಿಳಿಯಿತಮ್ಮ...
ಉ...ಉಉಉಉ...
ಮುನಿಯು ತಂದ ಆಸರೆ, ಪತಿಯು ತೊರೆದ ಸೀತೆಗೆ..ಎ..
ರಾಮ ನಾಮ ಆಸರೆ..ಎ.. ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಗಿದೆ ನೆನಪು ದೂರ ಕಣ್ಣಿಗೆ...ಎ..
ಹೇಗೆ ನಾನು ಹೇಳಲಿ ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ ಇದನು ತಿಳಿಯಿತಮ್ಮ...
ತಂದೆ ಇಂದ ದೂರದೆ ಬೆಳೆದ ಭರತ ಆ ದಿನ...ಆ..
ಅವನ ಹೆಸರಿಂದಲೇ ದೇಶ ಮೆರೆದಿದೆ ಈ ದಿನಾ..
ಕಂದ ನೀನೇ ಆಸರೆ.. ನೊಂದ ನಿನ್ನ ತಾಯಿಗೆ..ಎ..
ನಿನ್ನ ಮುದ್ದು ರೂಪದೆ ಕಂಡೆ ಅರ್ಥ ಬಾಳಿಗೆ...
ಸದಾ ನಗು... ಇದೆ ತಾಯಾ ಹಾರೈಕೆಯು...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ, ಇದನು ತಿಳಿಯಿತಮ್ಮಾ...
ಹು ಹು ಹು...ಹು.. ಹು...ಹು.ಹು.ಹು...
ಅಮ್ಮಾ...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.., ಇದನು ತಿಳಿಯಿತಮ್ಮಾ...ಆ..
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..,
ಹಸಿದ ಕಂದ ಅಮ್ಮನೆಡೆಗೆ ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ ನಾನು ಓಡಲಮ್ಮ..ಆ.., ನಾನು ಓಡಲಮ್ಮ..ಆ..
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ.. ಇದನು ತಿಳಿಯಿತಮ್ಮ...
ಉ...ಉಉಉಉ...
ಮುನಿಯು ತಂದ ಆಸರೆ, ಪತಿಯು ತೊರೆದ ಸೀತೆಗೆ..ಎ..
ರಾಮ ನಾಮ ಆಸರೆ..ಎ.. ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಗಿದೆ ನೆನಪು ದೂರ ಕಣ್ಣಿಗೆ...ಎ..
ಹೇಗೆ ನಾನು ಹೇಳಲಿ ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ ಇದನು ತಿಳಿಯಿತಮ್ಮ...
ತಂದೆ ಇಂದ ದೂರದೆ ಬೆಳೆದ ಭರತ ಆ ದಿನ...ಆ..
ಅವನ ಹೆಸರಿಂದಲೇ ದೇಶ ಮೆರೆದಿದೆ ಈ ದಿನಾ..
ಕಂದ ನೀನೇ ಆಸರೆ.. ನೊಂದ ನಿನ್ನ ತಾಯಿಗೆ..ಎ..
ನಿನ್ನ ಮುದ್ದು ರೂಪದೆ ಕಂಡೆ ಅರ್ಥ ಬಾಳಿಗೆ...
ಸದಾ ನಗು... ಇದೆ ತಾಯಾ ಹಾರೈಕೆಯು...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ, ಇದನು ತಿಳಿಯಿತಮ್ಮಾ...
ಹು ಹು ಹು...ಹು.. ಹು...ಹು.ಹು.ಹು...
ಮುದ್ರಿಸಿದ್ದು:
ವಿನಯ್ ...
ಸಮಯ
Wednesday, September 22, 2010
ಗುರುವಾರ, ಆಗಸ್ಟ್ 20, 2015
ನಾಗರ ಹಾವೆ
ನಾಗರ ಹಾವೆ
ಹಾವೊಳು
ಹೂವೆ ! ?
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಗಳ ಮುಗಿವೆ ಹಾಲನ್ನೀವೆ
ಬಾ ಬಾ ಬಾ , ಬಾ ಬಾ ಬಾ ||೧ ||
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಗಳ ಮುಗಿವೆ ಹಾಲನ್ನೀವೆ
ಬಾ ಬಾ ಬಾ , ಬಾ ಬಾ ಬಾ ||೧ ||
ಹಳದಿಯ ಹೆಡೆಯನು ಬಿಚ್ಚೋ
ಬೇಗ,
ಕೊಳಲನ್ನೂದುವೆ ಲಾಲಿಸು ರಾಗ,
ಹೊಳಹಿನ ಹೊಂದಲೆ ತೂಗೋ ನಾಗ,
ನೀ ನೀ ನೀ, ನೀ ನೀ ನೀ ||೨||
ಕೊಳಲನ್ನೂದುವೆ ಲಾಲಿಸು ರಾಗ,
ಹೊಳಹಿನ ಹೊಂದಲೆ ತೂಗೋ ನಾಗ,
ನೀ ನೀ ನೀ, ನೀ ನೀ ನೀ ||೨||
ಎಲೆ ನಾಗಣ್ಣ
ಹೇಳೆಲೊ
ನಿನ್ನ
,
ತಲೆಯಲಿ ರನ್ನ ವಿಹುದನ್ನ ,
ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ,
ತಾ ತಾ ತಾ, ತಾ ತಾ ತಾ , ||೩||
ತಲೆಯಲಿ ರನ್ನ ವಿಹುದನ್ನ ,
ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ,
ತಾ ತಾ ತಾ, ತಾ ತಾ ತಾ , ||೩||
ಬರಿಮೈ ತಣ್ಣಗೆ
ಮನದಲಿ
ಬಿಸಿ
ಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ,
ಎರಗುವೆ ನಿನಗೆ ಈಗಲೆ ಹೊರಗೆ ,
ಪೋ ಪೋ ಪೋ, ಪೋ ಪೋ ಪೋ, ||೪||
ಎರಡೆಳೆ ನಾಲಗೆ ಇದ್ದರು ಸುಮ್ಮಗೆ,
ಎರಗುವೆ ನಿನಗೆ ಈಗಲೆ ಹೊರಗೆ ,
ಪೋ ಪೋ ಪೋ, ಪೋ ಪೋ ಪೋ, ||೪||
- ರಚನೆ : ಪಂಜೆ ಮಂಗೇಶರಾಯರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...