ಸುಂದರ ಗಿರಿಧಾಮ :ಬಿಳಿಗಿರಿರಂಗನ ಬೆಟ್ಟ
ಶಿವ, ವಿಷ್ಣು ನೆಲೆಸಿಹ ಹರಿಹರ ಕ್ಷೇತ್ರ
ಶಿವ, ವಿಷ್ಣು ನೆಲೆಸಿಹ ಹರಿಹರ ಕ್ಷೇತ್ರ
ಮೈಸೂರಿನಿಂದ ೧೨೦ ಕಿ.ಮೀಟರ್ ಹಾಗೂ ಬೆಂಗಳೂರಿನಿಂದ ೨೪೦ ಕಿ.ಮೀಟರ್ ದೂರದಲ್ಲಿರುವ
ಬಿಳಿಗಿರಿ ರಂಗನ ಬೆಟ್ಟ
,
ಸಮುದ್ರ ಮಟ್ಟದಿಂದ ೧೫೫೨ ಮೀಟರ್ ಎತ್ತರದಲ್ಲಿರುವ ಸುಂದರ
ಗಿರಿಧಾಮ. ೧೬ ಕಿ.ಮೀ.ನಷ್ಟು ಉದ್ದದವರೆಗೆ ಹಬ್ಬಿರುವ ಗಿರಿಶ್ರೇಣಿಯ ನೋಟವೇ ಸುಂದರ.
ಇನ್ನು ಇಡೀ ಭೂಭಾಗವೇ ನೈಸರ್ಗಿಕ ಕಾನನಗಳಿಂದ ಕೂಡಿದ್ದು ಆನೆ,
ಹುಲಿ, ಚಿರತೆ,
ಕಾಡೆಮ್ಮೆ, ಕರಡಿ,
ಜಿಂಕೆ, ತೋಳ,
ನರಿ ಮೊದಲಾದ ನೂರಾರು ಬಗೆಯ ವನ್ಯಮೃಗಗಳಿಗೆ ಆಶ್ರಯತಾಣವಾಗಿದೆ.
೫೪೦
ಚದರ ಕಿ.ಮೀ.ನಷ್ಟಿರುವ ದಟ್ಟಡವಿ ಹುಲ್ಲು,
ಕುರುಚಲುಗಿಡ, ಪೊದೆ ಹಾಗೂ ಬೀಟೆ,
ಹೊನ್ನೆ, ಮತ್ತಿ,
ತೇಗ, ಶ್ರೀಗಂಧವೇ ಮೊದಲಾದ ಎತ್ತರದ
ಮರಗಳಿಂದ ಕೂಡಿದೆ. ನಿರ್ಮಲವಾಗಿ ಹರಿವ ಕಾವೇರಿ ನದಿ ಮೃಗಪಕ್ಷಿಗಳಿಗಷ್ಟೇ ಅಲ್ಲ
ಬೆಟ್ಟದ ಮೇಲಿರುವ ಊರಿನ ಜನರಿಗೂ ಜಲಾಶ್ರಯವಾಗಿದೆ.
ಹವಾಮಾನ
: ಹಸಿರು ಸಿರಿಯ ನಡುವೆ ಮೈದಳೆದು ನಿಂತಿರುವ ಈ ಪ್ರಕೃತಿರಮಣೀಯ ತಾಣದ ಹವಾಮಾನ
ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ತಂಪಾದ ಹವೆಯ ಆಹ್ಲಾದವೇ ಬೇರೆ. ಸುಡು
ಬೇಸಿಗೆಯಲ್ಲೂ ಬಿಳಿಗಿರಿರಂಗನ ಬೆಟ್ಟ ಹವಾನಿಯಂತ್ರಿತ ಪಟ್ಟಣದಂತೆ ಭಾಸವಾಗುತ್ತದೆ.
ವಾಹನ ಸೌಕರ್ಯ
: ಬೆಂಗಳೂರು,
ಮೈಸೂರು, ಚಾಮರಾಜನಗರ,
ಯಳಂದೂರಿನಿಂದ ನೇರ ಬಸ್ ಸೌಲಭ್ಯ ಇದೆ. ಪ್ರವಾಸಿ ಮಂದಿರ,
ಗುಡಿ ಕ್ಯಾಂಪ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಈ
ಬೆಟ್ಟದಲ್ಲಿ ಕಾಡಾನೆ, ಕರಡಿಗಳ ಕಾಟವಿದೆ ರಾತ್ರಿಯ
ಪ್ರಯಾಣ ಮಾಡದಿರುವುದು ಉತ್ತಮ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-2352901 /2352909 /2352903
Email : kstdc@vsnl.in
*ಟಿ.ಎಂ. ಸತೀಶ್
*ಟಿ.ಎಂ. ಸತೀಶ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.