ಸೋಮವಾರ, ಜೂನ್ 22, 2015

ನಿನಗಾಗಿ ಹಾಡುತಿಹೆ

ಹಾಡು             : ನಿನಗಾಗಿ ಹಾಡುತಿಹೆ
 ಚಿತ್ರ               : ಮೂರು ಜನ್ಮ (1984) 
ಸಾಹಿತ್ಯ           : ಚಿ || ಉದಯಶಂಕರ್
ಸಂಗೀತ           : ರಾಜನ್-ನಾಗೇಂದ್ರ
ಹಾಡಿದವರು      : ಎಸ ಜಾನಕಿ


ಈ ಹಾಡನ್ನು ಇಲ್ಲಿ ಕೇಳಬಹುದು:
 www.raaga.com/player4/?id=168875&mode=100&rand=0.23099847159204223

ನಿನಗಾಗಿ ಹಾಡುತಿಹೆ...
ಹಾಡುತಿಹೆ..ಹಾಡುತಿಹೆ..ಹಾಡುತಿಹೆ..
ನಿನಗಾಗಿ ಅಡುತಿಹೆ....
ಅಡುತಿಹೆ....ಅಡುತಿಹೆ....

ನಿನಗಾಗಿ ಹಾಡುತಿಹೆ...ನಿನಗಾಗಿ ಅಡುತಿಹೆ....
ಮರೆಯಾಗಿ ನೀನೀಗ ಎಲ್ಲಿರುವೆ ನಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..

ನಿನಗಾಗಿ ಹಾಡುತಿಹೆ...ಎ..

ಮುಳ್ಳಲ್ಲಿ ಬಿದ್ದ ಗಿಣಿಯಂತೆ ಆದೆ ಅಮ್ಮಮ್ಮ ನಾ ಇಂದು ನೊಂದೆ..
ಹುಲಿಯನ್ನು ಕಂಡ ಮರಿ ಜಿಂಕೆಯಂತೆ ಎದುರಲ್ಲಿ ಸಾವನ್ನು ಕಂಡೆ..
ಭಯವಾಗಿದೆ..ಮೈ ನಡುಗಿದೆ..
ಬೇರೆ ದಾರಿ ನಾ ಕಾಣದೆ..
ನಂಬಿ ನಿನ್ನ ನಾ ಕೂಗಿದೆ...

ನಿನಗಾಗಿ ಹಾಡುತಿಹೆ...ನಿನಗಾಗಿ ಅಡುತಿಹೆ....
ಮರೆಯಾಗಿ ನೀನೀಗ ಎಲ್ಲಿರುವೆ ನಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..

ನಿನಗಾಗಿ ಹಾಡುತಿಹೆ...ಎ..

ಹ..ಆ..
ಹ...ಆ...

ನನ್ನಂತೆ ನೀನು ಹೆಣ್ಣಲ್ಲವೇನೋ, ಓ ದೇವಿ ನೀ ನೋಡು ಬಂದು..
ಕಣ್ಣೀರಿನಲ್ಲೇ ಅಭಿಷೇಕವನ್ನು ನಾ ಮಾಡಬೇಕೇ ಇಂದು..
ದಯೆತೋರದೆ, ಕಾಪಾಡದೆ, ಅಮ್ಮ ನನ್ನ ಗತಿಯೇನಮ್ಮ..
ನೀನೇ ಹೇಳು ಕಬ್ಬಳಮ್ಮ...

ನಿನಗಾಗಿ ಹಾಡುತಿಹೆ...ನಿನಗಾಗಿ ಅಡುತಿಹೆ....
ಮರೆಯಾಗಿ ನೀನೀಗ ಎಲ್ಲಿರುವೆ ನಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..

ನಿನಗಾಗಿ ಹಾಡುತಿಹೆ...ಎ..

ಕಾಮೆಂಟ್‌ಗಳಿಲ್ಲ: