ಪ್ರಮಾಣ: 4 : 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಬೇಕಾಗುವ ಪದಾರ್ಥಗಳು
*ಆಲೂಗಡ್ಡೆ - 3 (ಬೆಂದ ಮತ್ತು ಕತ್ತರಿಸಿದ ಹೋಳುಗಳು)
*ಹೂಕೋಸು - 1 (ಬೆಂದ ಮತ್ತು ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ತುಂಡುಗಳು)
*ಟೊಮೇಟೊ- 3 (ಸಣ್ಣದಾಗಿ ಕತ್ತರಿಸಿದಂತಹವು)
*ಶುಂಠಿ ಪೇಸ್ಟ್ - 1 ಚಮಚ
*ಜೀರಿಗೆ ಪುಡಿ - 2 ಚಮಚ
*ಕೆಂಪು ಮೆಣಸಿನಕಾಯಿ ಪುಡಿ - 1 ಚಮಚ
*ಅರಿಶಿಣ ಪುಡಿ - 1 ಚಮಚ
*ಸಕ್ಕರೆ - ಒಂದು ಚಿಟಿಕೆ
*ಉಪ್ಪು - ರುಚಿಗೆ ತಕ್ಕಷ್ಟು
*ಜೀರಿಗೆ (ಬೀಜಗಳು) - 1 ಚಮಚ
*ಕರಿಬೇವು -ಸ್ವಲ್ಪ
*ಎಣ್ಣೆ - 2 ಚಮಚ
*ನೀರು - 1 ಕಪ್
*ಕೊತ್ತಂಬರಿ ಸೊಪ್ಪು - ಸ್ವಲ್ಪ
ಅಲಂಕಾರಕ್ಕೆ
ವಿಧಾನ
1. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮತ್ತು ಅದಕ್ಕೆ ಜೀರಿಗೆಯ ಬೀಜಗಳನ್ನು ಹಾಗು
ಕರಿಬೇವು ಸೊಪ್ಪನ್ನು ಹಾಕಿ, ಒಗ್ಗರೆಣ್ಣೆಯಂತೆ ಉರಿಯಿರಿ.
2. ನಂತರ ಇದಕ್ಕೆ ಶುಂಠಿಯ ಪೇಸ್ಟನ್ನು ಸೇರಿಸಿ ಮತ್ತು ಇದನ್ನು ಒಂದು ನಿಮಿಷ ಕಾಲ
ಬೇಯಿಸಿ.
3. ಈಗ ಬೇಯಿಸಿದ ಆಲೂಗಡ್ಡೆ ಮತ್ತು ಹೂಕೋಸುಗಳನ್ನು ಇದಕ್ಕೆ ಬೆರೆಸಿ. 2-3 ನಿಮಿಷಗಳ ಕಾಲ
ಬೇಯಿಸಿ.
4. ನಂತರ ಅರಿಶಿಣ, ಕೆಂಪು ಮೆಣಸಿನಕಾಯಿ ಪುಡಿ, ಸಕ್ಕರೆ, ಜೀರಿಗೆ ಪುಡಿಗಳನ್ನು ಸೇರಿಸಿ
3-4 ನಿಮಿಷ ಬೇಯಿಸಿ.
5. ಇದಾದ ನಂತರ ಇದಕ್ಕೆ ಕತ್ತರಿಸಿದ ಟೊಮೇಟೊಗಳನ್ನು ಮತ್ತು ಉಪ್ಪನ್ನು ಹಾಕಿ. ಮಧ್ಯಮ
ಗಾತ್ರದ ಉರಿಯಲ್ಲಿ ಇದನ್ನು 3-4 ನಿಮಿಷಗಳ ಕಾಲ ಬೇಯಲು ಬಿಡಿ.
6. ನಂತರ ಕೊನೆಗೆ ಇದಕ್ಕೆ ನೀರನ್ನು ಬೆರೆಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
7. 5 ನಿಮಿಷ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಲು ಬಿಟ್ಟು ಬಾಣಲೆಯನ್ನು ಮುಚ್ಚಿ. ನಂತರ
ಒಲೆಯನ್ನು ಆರಿಸಿ.
8. ಆಲು ಗೋಬಿ ಈಗ ಸಿದ್ಧವಾಗಿದೆ. ಇದರ ಮೇಲೆ ಅಲಂಕಾರಕ್ಕೆ ಕೊತ್ತಂಬರಿಯನ್ನು ಉದುರಿಸಿ.ಈ
ರುಚಿಕರವಾದ ಖಾದ್ಯವನ್ನು ಅನ್ನದ ಜೊತೆಗೆ ಮತ್ತು ಚಪಾತಿಯ ಜೊತೆಗು ಸಹ ಸವಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.