ಅಂಕಿತ ನಾಮ:
ಮಹಾಘನ ಸೌರಾಷ್ಟ್ರ ಸೋಮೇಶ್ವರ
ಕಾಲ: 1160
ದೊರಕಿರುವ ವಚನಗಳು: 10 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಲಕ್ಕುಂಡಿ (ಗದಗ್ ಜಿಲ್ಲೆ)
ಪರಿಚಯ: ಕಾಲ: ಸು. 1160. ಊರು:ಲಕ್ಕುಂಡಿ. ಮುಕ್ತಾಯಕ್ಕನ ಅಣ್ಣ. ಶಿವಲಿಂಗವನ್ನು ಬಾಯಲ್ಲಿಟ್ಟುಕೊಂಡಿರುತ್ತಿದ್ದ ವಿಶಿಷ್ಟ ಗುಪ್ತಭಕ್ತ. ಮುಕ್ತಾಯಕ್ಕನ ವಚನಗಳಲ್ಲಿ ಈತನ ವ್ಯಕ್ತಿತ್ವದ ವರ್ಣನೆ ದೊರೆಯುತ್ತದೆ. ಈತನ 10 ವಚನಗಳು ದೊರೆತಿವೆ. ಗುರು, ಗುರು-ಶಿಷ್ಯ ಸಂಬಂಧ ಇವನ ವಚನಗಳ ಮುಖ್ಯ ಆಸಕ್ತಿ. ‘ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಸಮ’ ಎಂದು ಚನ್ನಬಸವಣ್ಣ ಹೊಗಳಿದ್ದಾನೆ.

ಅಂಗದಾಶ್ರಯವ ಕಳೆದು, ಲಿಂಗದಾಶ್ರಯವ ಮಾಡಿದ
ಗುರುವೆ ಶರಣು, ಶ್ರೀಗುರುಲಿಂಗವೆ ಶರಣು,
ಪರಮಸುಖವ ತೋರಿದೆಯಾಗಿ.
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.
ಗುರುವೆ ಶರಣು, ಶ್ರೀಗುರುಲಿಂಗವೆ ಶರಣು,
ಪರಮಸುಖವ ತೋರಿದೆಯಾಗಿ.
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ?
ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು,
ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು,
ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು,
ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು,
ಅನಾದಿ ನಿಜದೊಳಡಗಿತ್ತು.
ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ,
ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ?
ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು.
ಇದು ಕಾರಣ,
ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು,
ಬೇಡಾ ಎಂದಡೆ ಮಾದವು.

ಅಂತರಂಗದಲ್ಲಿ ಆಯತವನರಿದವಂಗೆ, ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯ.
ಅಂತರಂಗದಲ್ಲಿ ಅನುಮಿಷನಾಗಿ ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
ಅಂತರಂಗದಲ್ಲಿ ಅನುಮಿಷನಾಗಿ ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.